ಗಂಗಾವತಿಯಲ್ಲಿ ಪುಟ್ ಕೇರ್, ಕ್ಲಿನಿಕ್ !
ಗಂಗಾವತಿ:ಮಾಜಿ ಸಚಿವರಾದ ದಿವಂಗತ ರಾಜಾ ಶ್ರೀರಂಗದೇವರಾಯಲು ಮತ್ತು ಅವಿಭಜಿತ ರಾಯಚೂರು ಜಿಲ್ಲಾ ಪಂಚಾಯತ ಮತ್ತು ಗಂಗಾವತಿ ತಾಲೂಕು ಪಂಚಾಯತ ಮಾಜಿ ಸದಸ್ಯರಾದ ಶ್ರೀಮತಿ ಲಲಿತಾರಾಣಿ ಅವರ ಕಿರಿಯ ಪುತ್ರ ಡಾ.ವೀರ ಸಿಂಹ ನರಸಿಂಹ ದೇವರಾಯಲು ಅವರು ನಗರದ ಆನೆಗುಂದಿ ರಸ್ತೆಯಲ್ಲಿ ಆರಂಭಿಸಿರುವ ಸಾಯಿ ಸತ್ಯ ಸಾಯಿ ಆಸ್ಪತ್ರೆಗೆ ಕರ್ನಾಟಕ ರಾಜ್ಯ ಔಷಧ ತಜ್ಞರ ಸಂಘದ ಅಧ್ಯಕ್ಷ ಅಶೋಕಸ್ವಾಮಿ ಹೇರೂರ ಮತ್ತು ನ್ಯಾಯವಾದಿ ಶ್ರೀಮತಿ ಸಂಧ್ಯಾ ಪಾರ್ವತಿ ಹೇರೂರ ಇತ್ತೀಚೆಗೆ ಬೇಟಿ ನೀಡಿ ಶುಭಾಶಯ ತಿಳಿಸಿದರು.
ಆಸ್ಪತ್ರೆಯಲ್ಲಿ ಫ಼ುಟ್ ಸ್ಕ್ಯಾನ್ ಮತ್ತು ಸಕ್ಕರೆ ಖಾಯಿಲೆಯಿಂದಾಗುವ ಗಾಯಗಳ ಡ್ರೆಸ್ಸಿಂಗ್ ವಿಭಾಗಗಳನ್ನು ವೀಕ್ಷಿಸಿ,ಸಂತೋಷ ವ್ಯಕ್ತಪಡಿಸಿದರು.
ಡಾ.ರಾಯಲು ಶಸ್ತ್ರ ಚಿಕಿತ್ಸಕರಾಗಿದ್ದು, ಲ್ಯಾಪ್ರೋಸ್ಕೋಪಿಕ್ ತಜ್ಞರಾಗಿದ್ದಾರೆ.ಲಂಡನ್, ಅಮೇರಿಕಾ ಮತ್ತಿತರ ದೇಶಗಳಲ್ಲಿ ವಿಧ್ಯಾಭ್ಯಾಸ ಪಡೆದಿದ್ದು , ಉಪನ್ಯಾಸಕರಾಗಿ ಕೆಲಸ ಮಾಡಿದ್ದಾರೆ.
ಸಕ್ಕರೆ ಖಾಯಿಲೆ ಇರುವವರು ಇಲ್ಲಿ ತಮ್ಮ ಪಾದಗಳನ್ನು ಪರಿಕ್ಷೆಗೆ ಒಳ ಪಡಿಸಿಕೊಳ್ಳಬಹುದಾಗಿದ್ದು, ಗಾಯಗಳಿಗೂ ಆರೈಕೆ ಪಡೆಯಬಹುದಾಗಿದೆ.ಉದರ ಸಮಸ್ಯೆಗಳ ಚಿಕಿತ್ಸೆ ಇಲ್ಲಿ ದೊರೆಯಲಿದೆ.