July 13, 2025
1000960417

ಕರ್ನಾಟಕ ರಾಜ್ಯ ಔಷಧ ನಿಯಂತ್ರಣ ಇಲಾಖೆಯಲ್ಲೀಗ ಬದಲಾವಣೆಯ ಕಾಲ.ಅಪರ ಔಷಧ ನಿಯಂತ್ರಕ ಅಂಬರೀಶ ತುಂಬಗಿ ನಿವೃತ್ತರಾಗಿ ಎರಡು ತಿಂಗಳು ! ಔಷಧ ನಿಯಂತ್ರಕ ಬಾಗೋಜಿ ಟಿ.ಖಾನಾಪುರೆ ಈ ವರದಿ ಪ್ರಕಟವಾಗುವ ಹೊತ್ತಿಗೆ ನಿವೃತ್ತರಾಗಿರುತ್ತಾರೆ.

ಅಪರ ಔಷಧ ನಿಯಂತ್ರಕರಾಗಿ ಸರಕಾರದಿಂದ ನೇಮಕವಾಗಿದ್ದ ನಜೀರ್ ಅಹಮ್ಮದ ಅವರ ಸ್ಥಾನಕ್ಕೆ ನ್ಯಾಯಾಲಯಗಳ ಆದೇಶದಂತೆ ಎಸ್.ಉಮೇಶ್ ಅವರನ್ನು ಸರಕಾರ ನೇಮಕ ಮಾಡಿದೆ.

ಬಿ.ಟಿ.ಖಾನಾಪುರೆ ಅವರು ಮಾಹಿತಿ ದೊರೆತರೆ ಸಾಕು, ಅದರ ಆಧಾರದ ಮೇಲೆಯೇ ಅವರು ಕಾರ್ಯ ಪ್ರವೃತ್ತರಾಗುತ್ತಿದ್ದರು.ಆದರೆ ಅಂಬರೀಶ ತುಂಬಗಿ ಮತ್ತು ನಜೀರ್ ಅಹಮ್ಮದ ಅಧಿಕೃತವಾಗಿ ದೂರು ಬೇಕೆಂದು ಅಪೇಕ್ಷಿಸುತ್ತಿದ್ದವರು.ಆದರೆ ಎಸ್.ಉಮೇಶ್ ಮಾಹಿತಿ ಸಿಕ್ಕರೆ ಸಾಕು,ಕ್ರಮ ಕೈಗೊಳ್ಳುವಂತಹವರು.ಇದು ಖಂಡಿತ ಸಮಾಧಾನಕರ ಸಂಗತಿ.

ಔಷಧ ನಿಯಂತ್ರಣ ಇಲಾಖೆ, ಎನ್ ಫ಼ೋರ್ಸಮೆ೦ಟ್ ಡಿಪಾರ್ಟ್ಮೆಂಟ್ (ಇ.ಡಿ).ಹೀಗಾಗಿ ಈ ಇಲಾಖೆ, ದೂರು ಬರಬೇಕೆಂದು ಕಾಯ್ದು ಕುಳಿತು ಕೊಳ್ಳಬೇಕಾದ ಅವಶ್ಯಕತೆ ಇಲ್ಲ.ಮಾಹಿತಿ ಸಿಕ್ಕಕೂಡಲೇ ದೂರು ಪರಿಶೀಲಿಸಲು ದೌಡಾಯಿಸಬೇಕಾದ್ದು ಈ ಇಲಾಖೆಗೆ ಅಧಿಕಾರಿಗಳ ಕರ್ತವ್ಯ.ಈ ಕೆಲಸವನ್ನು ನೂತನ ಅಪರ ಔಷಧ ನಿಯಂತ್ರಕರಾದ ಎಸ್.ಉಮೇಶ್ ಅವರು ಮಾಡುತ್ತಾರೆಂದು ಔಷಧ ವಲಯದ ಮಂದಿ ವಿಶ್ವಾಸ ಹೊಂದಿದ್ದಾರೆ.ಈ ವಿಶ್ವಾಸವನ್ನು ಉಮೇಶ್ ಅವರು ಉಳಿಸಿಕೊಳ್ಳುತ್ತಾರೆ ಎಂಬ ಭರವಸೆ ಹಲವರದ್ದು.

ಲೈಸೆನ್ಸ್ ಇಲ್ಲದೇ ಅಲೋಪತಿ ಔಷಧಗಳ ಮಾರಾಟದಲ್ಲಿ ತೊಡಗಿರುವ ನಕಲಿ ವೈಧ್ಯರ,ಆಯುಷ್ ವೈಧ್ಯರ ಹೆಡಮುರಗಿ ಕಟ್ಟುವ ಅವಶ್ಯಕತೆ ಇದೆ.ಇದೇ ರೀತಿ ಔಷಧಗಳ ಮಾರಾಟದಲ್ಲಿ ನಿರತರಾಗಿರುವ ಕಿರಾಣಿ, ಸ್ಟೇಷನರಿ ಅಂಗಡಿ ಮಾಲೀಕರನ್ನು ಜೈಲಿಗೆ ಅಟ್ಟಬೇಕಾಗಿದೆ.ಈ ಕೆಲಸ ನೂತನ ಅಪರ ಔಷಧ ನಿಯಂತ್ರಕ ಎಸ್.ಉಮೇಶ್ ಅವರಿಂದ ಸಾಧ್ಯ ಎಂಬುದು ಎಲ್ಲರ ನಿರೀಕ್ಷೆಯಾಗಿದೆ.

ಸೌಮ್ಯತೆಯ ಜೊತೆಗೆ ಗಟ್ಟಿ ಮತ್ತು ದೃಢ ಮನಸ್ಸಿನ ಉಮೇಶ್ ಅವರು ಕೈ ಹಾಕಿದ ಕೆಲಸವನ್ನು ಪೂರ್ಣಗೊಳಿಸದೇ ಕೈ ಬಿಟ್ಟವರಲ್ಲ.ಹಠ ಮಾಡಿಯಾದರೂ ಸೈ ಎನಿಸಿಕೊಂಡವರು.ಹೀಗಾಗಿ ಕೆಳ ಹಂತದ ಅಧಿಕಾರಿಗಳಿಗೆ ಕಾರ್ಯನಿರ್ವಹಿಸುವುದು ಅಷ್ಟು ಸರಳ ಸಾದ್ಯವಾಗಲಿಕ್ಕಿಲ್ಲ.ಮೈಗಳ್ಳ ಅಧಿಕಾರಿಗಳಿಗೆ ಉಮೇಶ್ ಅವರು ಸಿ೦ಹ ಸ್ವಪ್ನವಾಗಬಲ್ಲರು.

ಹೀಗಾಗಿ ಸರಿಯಾದ ಸಮಯಕ್ಕೆ,ಸರಿಯಾದ ರೀತಿಯಲ್ಲಿ ಕಾರ್ಯ ನಿರ್ವಹಿಸಬೇಕಾದ್ದು,ಯಾವ ಅಧಿಕಾರಿಗಳಿಗೂ ತಪ್ಪಿದ್ದಲ್ಲ.ಅಧಿಕಾರಿಗಳು ಜಾಗ್ರತೆಯಿಂದ ಇರುವುದು ಈಗ ಅನಿವಾರ್ಯ.

-ಅಶೋಕಸ್ವಾಮಿ ಹೇರೂರ.

About The Author

Leave a Reply