

ಹೇಳುವುದೆಲ್ಲವೂ ಅಸಲಿ ವೈಧ್ಯರಿಗೆಯೇ ! ಎಲ್ಲಾ ಕಾಯ್ದೆ ನಿಯಮಗಳು ಅನ್ವಯವಾಗುವುದು ಅವರಿಗೆಯೇ ! ನಕಲಿ ಮತ್ತು ಅನಧಿಕೃತ ವೈಧ್ಯರಿಗೆ ಈ ಯಾವ ಕಾನೂನುಗಳು ಅನ್ವಯವಾಗುವುದಿಲ್ಲ.
ಕೈಬರಹದ ಅರ್ಥವಾಗುವಂತೆ ಇರಬೇಕು ! ಜನರಿಕ್ ಔಷಧಗಳನ್ನು ಬರೆಯಬೇಕು ! ಗ್ರಾಮೀಣ ಸೇವೆ ಕಡ್ದಾಯ ! ಹೀಗೆ ಹತ್ತು ಹಲವು !
ಕಷ್ಟ ಪಟ್ಟು ಓದಿ ರ್ಯಾಂಕ್ ಬಂದ ವಿಧ್ಯಾರ್ಥಿಗಳು ಮೆಡಿಕಲ್ ಕೋರ್ಸಗೆ ಸೇರಿದರೆ, ಗ್ರಾಮೀಣ ಸೇವೆ ಮಾಡಬೇಕು.ಸರಕಾರಿ ಮೆಡಿಕಲ್ ಕಾಲೇಜಿನಲ್ಲಿ ಅವ್ಯವಸ್ಥೆ.ಸರಕಾರದ ಖೋಟಾದ ಅಡಿಯಲ್ಲಿ ಖಾಸಗಿ ಮೆಡಿಕಲ್ ಕಾಲೇಜು ಸೇರಿದರೆ,ವಿಪರೀತ ವರ್ಕ ಲೋಡ್, ಸಂಭಳ ಕೊಡುವುದಿಲ್ಲ.ಕೊಟ್ಟರೂ ಅಫ಼ೀಸಿಯಲಿ ಕೊಟ್ಟು, ಇನ್ನೊಂದು ಕೈಯಿಂದ ಕಸಿದು ವಾಪಾಸು ಪಡೆಯುತ್ತಾರೆ.ವಿಧ್ಯಾರ್ಥಿಗಳು ಪಾಸು ಆಗಿ ಹೊರ ಬಂದರೆ ಗ್ರಾಮೀಣ ಸೇವೆ ಕಡ್ಡಾಯ.
ಆಸ್ಪತ್ರೆ ಆರಂಭಿಸಲು ಮುಂದಾದರೆ ಕೆ.ಪಿ.ಎಮ್.ಎ.,ದ ಕಾನೂನಿನ ಕಟ್ಟಳೆಗಳು ! ನೊಂದಣೆ ಮಾಡಿಸಲು ಹಲವು ಅಧಿಕಾರಿಗಳಿಗೆ ಹಲವು ಕಾರಣಗಳಿಗಾಗಿ ಲಂಚ ಪಾವತಿಸಬೇಕು.ಅಗ್ನಿಶಾಮಕ ದಳದ ಅಧಿಕಾರಿಗಳಿಗೆ, ವಿದ್ಯುತ್ ಸರಬರಾಜು ಇಲಾಖೆಗೆ ಲಂಚ ನೀಡಬೇಕು. ಎಲ್ಲಾ ಮುಗಿಸುವ ಹೊತ್ತಿಗೆ ಸಾಕಪ್ಪ ಸಾಕು ಎನ್ನುವಂತಾಗಿರುತ್ತದೆ ಅಸಲಿ ವೈಧ್ಯರಿಗೆ.
ಈಗ ಆ್ಯಂಟಿಬಯೋಟಿಕ್‌ಗಳ ಬಳಕೆಯ ವಿಷಯಕ್ಕೆ ಬರೋಣ.ನಕಲಿ-ಅನಧಿಕೃತ ವೈಧ್ಯರು, ಹೇಗೆಂದರೆ ಹಾಗೆ ಆ್ಯಂಟಿಬಯೋಟಿಕ್‌ಗಳ ಬಳಕೆ ಮಾಡಿ ಚಿಕಿತ್ಸೆ ನೀಡಿರುತ್ತಾರೆ.ಅಂತಹ ರೋಗಿ ಕೊನೆಯಲ್ಲಿ ಎಮ್.ಬಿ.ಬಿ.ಎಸ್. ಅಥವಾ ಉನ್ನತ ಶಿಕ್ಷಣ ಪಡೆದ ವೈಧ್ಯರಲ್ಲಿಗೆ ಬರುತ್ತಾರೆ.
ಇಂತಹ ಅರೆ ಬರೆ ಚಿಕಿತ್ಸೆ ಪಡೆದು ತಮ್ಮಲ್ಲಿಗೆ ಬಂದ ರೋಗಿಗಳಿಗೆ ಅಧಿಕೃತ ವೈದ್ಯರು ಅಧ್ಯಾವ ಆ್ಯಂಟಿಬಯೋಟಿಕ್ ಬಳಸಬೇಕು ? ಇದಕ್ಕೆ ವಿವರಣೆ ಬೇರೆ ನೀಡಬೇಕಂತೆ ! ಡ್ರಗ್ ರೆಸಿಸ್ಟೆನ್ಸ್ ಬಗ್ಗೆ ಲ್ಯಾಬ್ ಟೆಸ್ಟ್ ಮಾಡಿಸುವುದು ಬಹಳ ದುಭಾರಿ ! ರೋಗಿಗಳಿಗೆ ಈ ಟೆಸ್ಟ್ ಮಾಡಿಸುವುದು ತುಂಬಾ ಕಷ್ಟ.ಹೀಗಾಗಿ ವೈಧ್ಯರು ಅನಿವಾರ್ಯವಾಗಿ ಹೊಸ ಆ್ಯಂಟಿಬಯೋಟಿಕ್ ಮೊರೆ ಹೋಗಬೇಕಾಗುತ್ತದೆ. ರೋಗಿಯ ಆರೋಗ್ಯ ಸರಿಯಾದರೆ ಸಾಕಪ್ಪ ಎನ್ನುವಂತಾಗಿರುತ್ತದೆ ವೈಧ್ಯರ ಸ್ಥಿತಿ.
ಆರೋಗ್ಯ ಕೆಡಿಸುವವರು ನಕಲಿ ಮತ್ತು ಅನಧಿಕೃತ ವೈಧ್ಯರು ! ಸರಿ ಪಡಿಸಬೇಕಾದವರು ಎಮ್.ಬಿ.ಬಿ.ಎಸ್. ವೈಧ್ಯರು ! ಹಣೆ ಬರಹ ಸರಿ ಇಲ್ಲದೆ,ರೋಗಿ ಸತ್ತರೆ,ಆ ವೈಧ್ಯರ ಮೇಲೆ ಹಲ್ಲೆಗಳಾಗುತ್ತವೆ.’ನೆಗ್ಲಿಜೆನ್ಸಿ ಆಫ಼್ ಡ್ಯೂಟೀಸ್’ ತೂಗುಗತ್ತಿ ತಲೆಯ ಮೇಲೆ ನೇತಾಡುತ್ತಿರುತ್ತದೆ.
ಸರಕಾರಗಳು ಆರೋಗ್ಯ ರಕ್ಷಿಸುವವರಿಗೆ ಇನ್ನಿಲ್ಲದ ಕಾನೂನುಗಳನ್ನು ಹುಟ್ಟು ಹಾಕುತ್ತವೆ.ಆದರೆ ಆರೋಗ್ಯ ಕೆಡಿಸುವವರನ್ನು ಬೀದಿ-ಬೀದಿಯಲಿ ಬಿಟ್ಟಿವೆ.ಇದು ಈ ದೇಶದ ರೋಗಿಗಳ ದುರಾದೃಷ್ಟ !
ಇತ್ತೀಚೆಗೆ ರಾಜ್ಯದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು ಕೆ.ಪಿ.ಎಮ್.ಇ.,ನೋಂದಣಿ ಮಾಡಿಸದ ವೈಧ್ಯರ ಮೇಲೆ ಕ್ರಮ ಕೈಗೊಳ್ಳಲು ಸೂಚಿಸಿದ್ದಾರೆ. ಆರೋಗ್ಯ ಸಚಿವರ ಅಣತಿಯಂತೆ ಜಿಲ್ಲಾ ವೈಧ್ಯಾಧಿಕಾರಿಗಳು ಮತ್ತು ತಾಲೂಕು ವೈಧ್ಯಾಧಿಕಾರಿಗಳು ಕೆ.ಪಿ.ಎಮ್.ಇ.,ನೋಂದಣಿಗೆ ಅರ್ಹರಲ್ಲದ ನಕಲಿ ವೈಧ್ಯರಿಗೆ ನೋಟೀಸ್ ನೀಡುತ್ತಿದ್ದಾರೆ.
ಇದನ್ನು ಕೇಳಿ ಕೆಂಡಾ ಮಂಡಲವಾದ ಸಚಿವರೊಬ್ಬರು ಏಕ ವಚನದಲ್ಲಿ ವೈಧ್ಯಾಧಿಕಾರಿಯೊಬ್ಬರಿಗೆ ಕ್ಲಾಸ್ ತೆಗೆದು ಕೊಂಡಿದ್ದಾರೆ.ಹೀಗಾದರೆ ನೀತಿ-ನಿಯಮಗಳು ಜಾರಿಯಾಗುವುದಾದರೂ ಹೇಗೆ ? -ಅಶೋಕಸ್ವಾಮಿ ಹೇರೂರ.