July 13, 2025
IMG-20231124-WA0074

ಡಾ.ಅಮರೇಶ ಸರಕಾರ್ ಎಂಬ ಹೆಸರಿನ ಬಂಗಾಳಿ ಮೂಲದ ನಕಲಿ ವೈದ್ಯ ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ,ಮಸ್ಕಿ ಹತ್ತಿರದ ಹಸಮಕಲ್ ಗ್ರಾಮದಲ್ಲಿ ವಾಸವಾಗಿದ್ದಾನೆ.ಮೂಲವ್ಯಾಧಿಗೆ ಚಿಕಿತ್ಸೆ ನೀಡುವುದಾಗಿ ಸಾಕಷ್ಟು ಜನರನ್ನು ನಂಬಿಸಿ,ಹಣ ಮಾಡುತ್ತಿದ್ದಾನೆ.

ಬಲ್ಲ ಮೂಲಗಳ ಪ್ರಕಾರ ಈತ ಕೇವಲ ಪಿ.ಯು.ಸಿ. ಅಭ್ಯಾಸ ಮಾಡಿರುವುದಾಗಿ ತಿಳಿದು ಬಂದಿದ್ದು, ಮೂಲವ್ಯಾಧಿ ಚಿಕಿತ್ಸೆಗೆಂದು ರೂ 6,000 ರಿಂದ 10,000 ಸಾವಿರ ರೂಪಾಯಿಗಳನ್ನು ಜನರಿಂದ ವಸೂಲಿ ಮಾಡುತ್ತಿದ್ದಾನೆ.

ಕಳೆದ 2 ವರ್ಷಗಳಿಂದ ನಕಲಿ ವೈಧ್ಯಕೀಯದಲ್ಲಿ ನಿರತನಾಗಿರುವ ಈ ವೈದ್ಯ ಯಾವುದೇ ಸಂಘಟನೆ , ಪತ್ರಿಕೆ ಮತ್ತು ಸರ್ಕಾರದ ಆರೋಗ್ಯ ಅಧಿಕಾರಿಗಳ ಭಯ ತನಗಿಲ್ಲ ಎಂದು ಹೇಳುತ್ತಾ ,ತನಗೆ ಎಲ್ಲಾ ಪಕ್ಷದ ನಾಯಕರು ಗೊತ್ತು ಎಂದು ಹೇಳಿಕೊಂಡು ಭಂಡತನದಿಂದ ಚಿಕಿತ್ಸೆಯನ್ನು ಮುಂದುವರಿಸಿದ್ದಾನೆ.

ಜೊತೆಗೆ ಮನೆಯಲ್ಲಿಯೇ ಅಲೋಪತಿ ಔಷಧಗಳನ್ನು ತಂದಿರಿಸಿಕೊಂಡು,ರೋಗಿಗಳಿಗೆ ವಿತರಿಸುತ್ತಿದ್ದಾನೆ. ಇದರಿಂದ ಈ ಭಾಗದ ಔಷಧ ವ್ಯಾಪಾರಿಗಳು ತೊಂದರೆಗೀಡಾಗಿದ್ದಾರೆ.

ರಾಯಚೂರು ವೃತ್ತದ ಸಹಾಯಕ ಔಷಧ ನಿಯಂತ್ರಕರು ಮತ್ತು ಬಳ್ಳಾರಿ ವಿಭಾಗದ ಉಪ ಔಷಧ ನಿಯಂತ್ರಕರು ಈ ನಕಲಿ ವೈಧ್ಯನ ಮೇಲೆ ಕ್ರಮ ಕೈಗೊಂಡು,ನ್ಯಾಯ ಒದಗಿಸಬೇಕೆಂದು ನೊಂದ ಔಷಧ ವ್ಯಾಪಾರಿಗಳು ತಮ್ಮ ಅಳಲು ತೋಡಿಕೊಂಡಿದ್ದಾರೆ.ಆದರೆ ಅಧಿಕಾರಿಗಳು ಯಾವ ರೀತಿಯ ಕ್ರಮ ಕೈಗೊಳ್ಳುತ್ತಾರೆಂದು,ಕಾದು ನೋಡಬೇಕಾಗಿದೆ.

About The Author

Leave a Reply