

ಗಂಗಾವತಿ:ನಗರದ ಬನ್ನಿ ಮರದ ಕ್ಯಾಂಪ್ ನಲ್ಲಿರುವ ಬಾಳೆ ಹಣ್ಣಿನ ಗೂಡೌನ್ ಮತ್ತು ಎಲೆಕ್ಟ್ರಿಕ್ ಅಂಗಡಿಗೆ ಅಗ್ನಿ ಅವಘಡ ಸಂಭವಿಸಿದ್ದು ,ಅಪಾರ ಪ್ರಮಾಣದ ಆಸ್ತಿ ಹಾನಿಯಾಗಿದೆ.ಬಾಳೆ ಹಣ್ಣಿನ ಗೂಡೌನ್ ನಲ್ಲಿನ ಎ.ಸಿ.ಗಳಿಂದ ಬೆಂಕಿ ಹತ್ತಿದ್ದು ,ಪಕ್ಕದ ಎಲೆಕ್ಟ್ರಿಕ್ ಅಂಗಡಿಗೆ ಅದು ವ್ಯಾಪಿಸಿದೆ ಎಂದು ತಿಳಿದು ಬಂದಿದೆ.
ಬುಧವಾರದಂದು ಬೆಳಗಿನ ಜಾವ ಸುಮಾರು ಮೂರು ಗಂಟೆಯ ಸಮಯದಲ್ಲಿ ಈ ಅವಘಡ ಸಂಭವಿಸಿದೆ.
ಪಕ್ಕದ ವಿ.ಆರ್.ಎಲ್.ಸಂಸ್ಥೆಯ ಗೋಡೆಗೂ ಬೆಂಕಿಯ ಕೆನ್ನಾಲಿಗೆಯಿಂದ ಬಿಸಿ ತಟ್ಟಿ ಗೋಡೆ ಬಿರುಕು ಬಿಟ್ಟಿದ್ದು , ಯಾವುದೇ ಹಾನಿಯಾಗಿಲ್ಲ.ಪಕ್ಕದ ದೇವಸ್ಥಾನದಲ್ಲಿನ ಬನ್ನಿ ಗಿಡಕ್ಕೂ ಬಿಸಿ ತಾಗಿದ್ದು ಕಂಡು ಬಂದಿದೆ.
ಸ್ಥಳಕ್ಕೆ ಭೇಟಿ ನೀಡಿದ ಕೊಪ್ಪಳ ಜಿಲ್ಲಾ ವಾಣಿಜ್ಯೊಧ್ಯಮ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ ಅಶೋಕಸ್ವಾಮಿ ಹೇರೂರ,ಗಂಗಾವತಿ ನಗರದಲ್ಲಿ ಬಹಳಷ್ಟು ಉದ್ಯಮಗಳಿದ್ದು ಈ ರೀತಿ ಅಗ್ನಿ ಅವಗಡಗಳು ಸಂಭವಿಸಿದಾಗ ಅನಾಹುತ ತಡೆಯಲು,ಸ್ಥಳೀಯ ಅಗ್ನಿಶಾಮಕ ದಳಕ್ಕೆ ಬೆಂಕಿ ನಂದಿಸುವ ಆಧುನಿಕ ಉಪಕರಣಗಳು ಹೆಚ್ಚಿನ ಸಂಖ್ಯೆಯಲ್ಲಿ ಬೇಕು ಎಂದು ಅಭಿಪ್ರಾಯ ಪಟ್ಟಿದ್ದಾರೆ. ಈ ಬಗ್ಗೆ ಸಂಸ್ಥೆಯಿಂದ ಸರಕಾರಕ್ಕೆ ಪತ್ರ ಬರೆಯಲಾಗುವುದು ಎಂದು ತಿಳಿಸಿದ್ದಾರೆ.
ಈ ಸಂಧರ್ಬದಲ್ಲಿ ವಾಣಿಜ್ಯೊಧ್ಯಮಿಗಳಾದ ಉಗಮ್ ರಾಜ,ರತನ್ ಬಾ೦ಟಿಯಾ,ನವೀನ ಚೌಹಾಣ,ವಿನೋದ ಪೆದ್ದಿ ಮತ್ತು ಸುರೇಶ್ ಮುಂತಾದವರು ಜೊತೆಯಲ್ಲಿದ್ದರು.
ಬನ್ನಿ ಮರದ ಕ್ಯಾಂಪಿನ ನಿವಾಸಿಗಳು ಬೆಂಕಿ ನಂದಿಸುವ ಕಾರ್ಯದಲ್ಲಿ ನೆರವಾಗಿದ್ದಕ್ಕೆ ಅಶೋಕಸ್ವಾಮಿ ಹೇರೂರ ಕೃತಜ್ಞತೆಗಳನ್ನು ಸಲ್ಲಿಸಿದ್ದಾರೆ.