

ಅಭಿವೃದ್ಧಿಯಲ್ಲಿ ವಂಚನೆ,ಜಿಲ್ಲಾ ಮಟ್ಟದ್ದಲ್ಲಿಯೂ ಇದೆ:ಅಶೋಕಸ್ವಾಮಿ ಹೇರೂರ
ಕೊಪ್ಪಳ:ಕಲ್ಯಾಣ ಕರ್ನಾಟಕ ವಿಭಾಗ ಮಾತ್ರವಲ್ಲ ಜಿಲ್ಲಾ ಮಟ್ಟದಲ್ಲಿಯೂ ಅಭಿವೃದ್ಧಿಯಲ್ಲಿ ವಂಚನೆಯಾಗುತ್ತಿದೆ ಎಂದು ಕೊಪ್ಪಳ ಜಿಲ್ಲಾ ವಾಣಿಜ್ಯೊಧ್ಯಮ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ ಅಶೋಕಸ್ವಾಮಿ ಹೇರೂರ ಅಪಾದಿಸಿದ್ದಾರೆ.
ಕಲಬುರಗಿಯಲ್ಲಿ ನಡೆದ ನ್ಯೂಸ್ 18 ಖಾಸಗಿ ಸುದ್ದಿ ವಾಹಿನಿಯೊಂದರ ಚರ್ಚೆಯಲ್ಲಿ ಭಾಗವಹಿಸಿದ್ದ ಅವರು ಕಲ್ಯಾಣ ಕರ್ನಾಟಕ ವಿಭಾಗದ ಅಭಿವೃದ್ಧಿ ವಿಚಾರದಲ್ಲಿ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕಾರವಾರ-ಬಳ್ಳಾರಿ,ಬೀದರ-ಶ್ರೀರಂಗಪಟ್ಟಣ ರಸ್ತೆಗಳ ಪಥ ಬದಲಿಸಿ,ಗಂಗಾವತಿ ಮತ್ತು ಕಂಪ್ಲಿ ಭಾಗದ ಜನರನ್ನು ವಂಚಿಸಲಾಗಿದ್ದು ,ಈಗ ಹೊಸಪೇಟೆ-ಹಂಪಿ-ಗಂಗಾವತಿ ರಸ್ಥೆಯ ಪಥ ಬದಲಿಸಿ,ಹಿಟ್ನಾಳ-ಅಗಳಕೇರಾ ಮಾರ್ಗ ರಚನೆ ಮಾಡಲು ಯತ್ನಿಸಲಾಗುತ್ತಿದೆ.
ಹುಲಿಗಿ-ಆನೆಗುಂದಿ,ಹೊಸಪೇಟೆ-ಹಂಪಿ-ಗಂಗಾವತಿ,ಬುಕ್ಕಸಾಗರ-ಕಂಪ್ಲಿ-ಗಂಗಾವತಿ,ಕಂಪ್ಲಿ -ಬಳ್ಳಾರಿ ಈ ರಸ್ತೆಗಳ ಅಭಿವೃದ್ಧಿಯಾಗಬೇಕಾಗಿದೆ ಎಂದವರು ಅಭಿಪ್ರಾಯ ಪಟ್ಟಿದ್ದಾರೆ.
ದೇಶಕ್ಕೆ ಸ್ವಾತಂತ್ರ್ಯ ಬಂದು ಏಳು ದಶಕಗಳು ಕಳೆದರೂ ಗಂಗಾವತಿ ನಗರದಿಂದ ಬಳ್ಳಾರಿ ನಗರಕ್ಕೆ ಒಂದು ಸುಸ್ಥಿತಿಯ ಮಾರ್ಗವಿಲ್ಲ.ರಾಷ್ಟ್ರೀಯ ಹೆದ್ದಾರಿ ಗುಣ ಮಟ್ಟದ ರಸ್ಥೆಯ ನಿರ್ಮಾಣ ಮಾಡಲು ಸರಕಾರಗಳು ಮುಂದಾಗುತ್ತಿಲ್ಲ.ಈ ಭಾಗದ ಜನ ಪ್ರತಿನಿಧಿಗಳ ನಿರ್ಲಕ್ಷವೂ ಇದೆಕ್ಕೆ ಕಾರಣ ಎಂದು ಅಪಾದಿಸಿದ್ದಾರೆ.
ಜಿಲ್ಲೆಯನ್ನು ಪ್ರತಿನಿಧಿಸಿದ,ಪ್ರತಿನಿಧಿಸುವ ಮಂತ್ರಿಗಳು ಎಲ್ಲಾ ಅನುದಾನವನ್ನು ತಮ್ಮ ಕ್ಷೇತ್ರಗಳಿಗೆ ಮಾತ್ರ ಮೀಸಲಿಡುತ್ತಿದ್ದಾರೆ. ಹೀಗಾಗಿ ಕುಷ್ಟಗಿ,ಗಂಗಾವತಿ, ಕನಕಗಿರಿ,ಕಾರಟಗಿ ತಾಲೂಕುಗಳು ಅಭಿವೃದ್ಧಿಯಿಂದ ವಂಚಿತವಾಗುತ್ತಿವೆ ಎಂದವರು ಅಭಿಪ್ರಾಯ ಪಟ್ಟಿದ್ದಾರೆ.
ಸಂಸದರು,ಸಚಿವರು ಜಿಲ್ಲೆಯ ಸಮಸ್ಥ ತಾಲೂಕುಗಳ ಅಭಿವೃದ್ಧಿಗೆ ಶ್ರಮಿಸಬೇಕು,ಬದಲಿಗೆ ಅವರು ತಮ್ಮ ಕ್ಷೇತ್ರಗಳಿಗೆ ಸೀಮಿತವಾಗುತ್ತಿದ್ದಾರೆ ಎಂದು ವಿಷಾದ ವ್ಯಕ್ತಪಡಿಸಿದ್ದಾರೆ.
ಗಂಗಾವತಿ ತಾಲೂಕಿನಲ್ಲಿ ಕರಡಿ ಧಾಮ ನಿರ್ಮಾಣ, ಸಹಾಯಕ ಆಯುಕ್ತರ ಕಚೇರಿ,ಸಹಾಯಕ ಪ್ರಾದೇಶಿಕ ಕಚೇರಿ,ತುಂಗಭದ್ರಾ ನದಿಗೆ ಆನೆಗುಂದಿ ಗ್ರಾಮದ ಹತ್ತಿರ ನಿರ್ಮಿಸಬೇಕಾದ ಸ್ಟೀಲ್ ಬ್ರಿಡ್ಜ್ ಎಲ್ಲವೂ ನೆನೆಗುದಿಗೆ ಬಿದ್ದಿವೆ.
ಪರ್ಸೆ೦ಟೇಜ್ ಬರುವ ಅನುದಾನಗಳು ಮಾತ್ರ ಘೋಷಣೆಯಾಗುತ್ತಿವೆ ಎಂದು ಅಶೋಕಸ್ವಾಮಿ ಹೇರೂರ ಅಪಾದಿಸಿದ್ದಾರೆ.