

ಹಂಪಿ-ಗಂಗಾವತಿ ರಸ್ತೆ ನಿರ್ಮಾಣ ನಕ್ಷೆ ಬದಲಿಸಿದರೆ ಹೋರಾಟ: ಅಶೋಕಸ್ವಾಮಿ ಹೇರೂರ
ಗಂಗಾವತಿ:ಕೊಪ್ಪಳ ಜಿಲ್ಲಾ ವಾಣಿಜ್ಯೊಧ್ಯಮ ಮತ್ತು ಕೈಗಾರಿಕಾ ಸಂಸ್ಥೆಯ ಸತತ ಪ್ರಯತ್ನದ ಫ಼ಲವಾಗಿ ಹಂಪಿ-ಗಂಗಾವತಿ ರಸ್ತೆ ನಿರ್ಮಾಣಕ್ಕೆ ಚಾಲನೆ ಸಿಕ್ಕಿದ್ದು, ರಸ್ತೆ ನಿರ್ಮಾಣದ ನೀಲ ನಕ್ಷೆಯನ್ನು ಬದಲಿಸಿದರೆ, ಹೋರಾಟ ಮಾಡುವುದಾಗಿ ಸಂಸ್ಥೆಯ ಅಧ್ಯಕ್ಷ ಅಶೋಕಸ್ವಾಮಿ ಹೇರೂರ ಎಚ್ಚರಿಸಿದ್ದಾರೆ.
ಆಗ್ರಾ-ದೆಹಲಿ ಮಾದರಿಯಂತೆ ಹೊಸಪೇಟೆ-ಹಂಪಿ-ಗಂಗಾವತಿ ರಸ್ತೆ ನಿರ್ಮಾಣ ಮಾಡಲು ಕೇಂದ್ರ ಸರಕಾರ ಮತ್ತು ರಾಜ್ಯ ಸರಕಾರಗಳಿಗೆ ನಿರಂತರ ಪತ್ರ ವ್ಯವಹಾರದ ನಡೆಸಿದ ಪ್ರಯುಕ್ತ ರಸ್ತೆ ನಿರ್ಮಾಣಕ್ಕೆ ಚಾಲನೆ ದೊರಕಿರುವ ಈ ಸಂಧರ್ಭದಲ್ಲಿ ತಮ್ಮ ಕ್ಷೇತ್ರ ಮತ್ತು ತಮ್ಮ ತಾಲೂಕುಗಳಲ್ಲಿ ರಸ್ತೆ ಹಾದು ಹೋಗಬೇಕು ಎನ್ನುವ ಸ್ವಹಿತಾಸಕ್ತಿಯಿಂದ ಜಿಲ್ಲೆಯ ಕೆಲವು ಜನ ಪ್ರತಿನಿಧಿಗಳು ಈ ಉದ್ದೇಶಿತ ರಸ್ತೆಯನ್ನು ಬೇರೆ ಮಾರ್ಗವಾಗಿ ಒಯ್ಯಲು ಪ್ರಯತ್ನ ನಡಿಸಿರುವುದು ಸಹಿಸಲು ಅಸಾಧ್ಯ ಎಂದಿರುವ ಅವರು ಸ್ಥಳೀಯ ಜನ ಪ್ರತಿನಿಧಿಗಳು ಮೌನವಹಿಸಿರುವ ಹೇಡಿತನವನ್ನು ಅವರು ಖಂಡಿಸಿದ್ದಾರೆ.
ಹಂಪಿ-ಬುಕ್ಕ ಸಾಗರ-ಗಂಗಾವತಿ ಮಾರ್ಗದ ಜೊತೆಗೆ ಹಿಟ್ನಾಳ-ಅಗಳಕೇರಾ-ಆನೆಗುಂದಿ ಮಾರ್ಗವನ್ನೂ ಅಭಿವೃದ್ಧಿ ಪಡಿಸಲಿ,ಆದರೆ ಹಂಪಿ-ಗಂಗಾವತಿ ಪಥವನ್ನು ಬಲಿಸಿದರೆ,ನಮ್ಮ ವಿರೋಧ ಇದೆ.
ಈ ಬಗ್ಗೆ ಸ್ಥಳೀಯ ಜನ ಪ್ರತಿನಿಧಿಗಳು ಮೌನ ಮುರಿಯದಿದ್ದರೆ,ಗಂಗಾವತಿ ನಗರ ಮತ್ತು ತಾಲೂಕಿಗೆ ಸತತವಾಗಿ ನಡೆಯುತ್ತಿರುವ ಅನ್ಯಾಯವನ್ನು ಸಹಿಸುವುದಿಲ್ಲ ಎಂದು ಹೇರೂರ ತಿಳಿಸಿದ್ದಾರೆ.