ಗಂಗಾವತಿ:ರಾಜ್ಯದ ಹಲವು ಕಡೆ ಹಗಲಿನಲ್ಲಿಯೂ ಬೀದಿ ದೀಪಗಳು ಉರಿಯುತ್ತಿರುವ ಬಗ್ಗೆ ಕೊಪ್ಪಳ ಜಿಲ್ಲಾ ವಾಣಿಜ್ಯೊದ್ಯಮ ಮತ್ತು ಕೈಗಾರಿಕಾ ಸಂಸ್ಥೆ ದೂರು ನೀಡಿರುವ ಹಿನ್ನೆಲೆಯಲ್ಲಿ ಈ ಬಗ್ಗೆ ಕ್ರಮ ಕೈಗೊಳ್ಳಲು ಮುಖ್ಯ ಅಭಿಯಂತರರು ಗುಲಬರ್ಗಾ ವಿದ್ಯುಚ್ಚಕ್ತಿ ಸರಬರಾಜು ಕಂಪನಿ ನಿಯಮಿತ ಕಲಬುರ್ಗಿ ಇವರು ಗಂಗಾವತಿ ಜೆಸ್ಕಾಮ್ ನ ಕಾರ್ಯ ನಿರ್ವಾಹಕ ಅಭಿಯಂತರರಿಗೆ ಪತ್ರ ಬರೆದಿದ್ದಾರೆ.
ನಿಗಮದ ನಿಯಮದ ಅನುಸಾರ ಕ್ರಮ ಜರುಗಿಸಲು ಪತ್ರದಲ್ಲಿ ಸೂಚಿಸಲಾಗಿದ್ದು ,ಮುಖ್ಯ ಅಭಿಯಂತರರು ಜೆಸ್ಕಾಮ್ ಬಳ್ಳಾರಿ ಮತ್ತು ಅಧೀಕ್ಷಕ ಅಭಿಯಂತರರು ಜೆಸ್ಕಾಮ್ ಕೊಪ್ಪಳ ಇವರಿಗೂ ಮಾಹಿ ನೀಡಲಾಗಿದೆ ಎಂದು ಸಂಸ್ಥೆಯ ಅಧ್ಯಕ್ಷ ಅಶೋಕಸ್ವಾಮಿ ಹೇರೂರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.