ಗಂಗಾವತಿ: ನಗರದ ಎನ್.ಆರ್.ಗ್ರೂಪ್ ಆಫ಼್ ಇಂಡಸ್ಟ್ರಿಯ ಎನ್.ಆರ್.ಶ್ರೀನಿವಾಸ ರಾವ್ ಅವರಿಗೆ ಹುಬ್ಬಳ್ಳಿಯ ಕರ್ನಾಟಕ ಚೇಂಬರ್ ಆಫ್ ಕಾಮರ್ಸ್ “ವಾಣಿಜ್ಯ ರತ್ನ” ಪಶಸ್ತಿ ನೀಡಿ ಗೌರವಿಸಿದೆ.
ಬೃಹತ್ ಕೈಗಾರಿಕಾ ಸಚಿವ ಮುರಗೇಶ ನೀರಾಣಿ ಈ ಪ್ರಶಸ್ತಿಯನ್ನು ಹುಬ್ಬಳ್ಳಿಯಲ್ಲಿ ದಿನಾಂಕ:24-09-2022 ರಂದು ಪ್ರಧಾನ ಮಾಡಿದರು.
ಮೈಸೂರಿನಲ್ಲಿ ಎಂಜನೀಯರಿಂಗ್ ಪದವಿ ಪಡೆದಿರುವ ಇವರು ಸ್ನಾತಕೋತ್ತರ ಪದವಿಯನ್ನು ಬೆಂಗಳೂರಿನಲ್ಲಿ ಪೂರ್ಣಗೊಳಿಸಿದ್ದಾರೆ.
ಸರೋಜ ಅಗ್ರೋ ಇಂಡಸ್ಟ್ರಿ ಮೂಲಕ ಇಡ್ಲಿ ,ಗೋಧಿ, ಗೋವಿನ ಜೋಳ ರವೆ ಉತ್ಪನ್ನಗಳನ್ನು ದೇಶದ ವಿವಿಧ ರಾಜ್ಯಗಳಲ್ಲಿ ಮಾರಾಟವನ್ನು ವಿಸ್ತರಿಸಿ,ಅಕ್ಕಿಯನ್ನು ಹೊರದೇಶಗಳಿಗೆ ರಫ್ತು ಮಾಡುವ ಮೂಲಕ ಶ್ರೀನಿವಾಸ್ ರಾವ್ ಹೆಸರು ಮಾಡಿದ್ದಾರೆ.
ಗಂಗಾವತಿಯ ರೈಲು ಸೌಲಭ್ಯವನ್ನು ಬಳಸಿಕೊಂಡು ಅಕ್ಕಿ ದಾಸ್ತಾನುಗಳನ್ನು ವಿದೇಶಗಳಿಗೆ ರಫ಼್ತು ಮಾಡುತ್ತಿರುವ ಇವರು,ರೇಲ್ವೆ ಇಲಾಖೆಗೆ ಕೋಟ್ಯಾಂತರ ರೂಪಾಯಿಗಳ ಆದಾಯ ತಂದುಕೊಟ್ಟಿದ್ದಾರೆ.
ಎನ್.ಆರ್.ಫ಼ೌಂಡೇಷನ್ ಮೂಲಕ ಆನೆಗುಂದಿಯಲ್ಲಿ ಗೋಶಾಲೆ ಮತ್ತು ಬಡ ವಿದ್ಯಾರ್ಥಿಗಳಿಗೆ ವಿಧ್ಯಾಭ್ಯಾಸಕ್ಕಾಗಿ ಸಹಾಯ ಧನ ನೀಡಿದ್ದಾರೆ.
ಶ್ರೀನಿವಾಸ್ ಅವರ ಅನುಪಸ್ಥಿತಿಯಲ್ಲಿ ಅವರ ಗ್ರೂಪ್‌ನ ವೆಂಕಟ್ ಅವರು ಪ್ರಶಸ್ತಿ ಸ್ವೀಕರಿಸಿದ್ದು , ಪ್ರಶಸ್ತಿಗೆ ಭಾಜನರಾದ ಶ್ರೀನಿವಾಸ್ ಎನ್.ಆರ್.ಅವರನ್ನು ಕೊಪ್ಪಳ ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿಯ ಅಧ್ಯಕ್ಷ ಅಶೋಕಸ್ವಾಮಿ ಹೇರೂರ ಅಭಿನಂದಿಸಿದ್ದಾರೆ.