July 12, 2025
Screenshot_20220903-132639_Google

ಕಾರಟಗಿ-ಗೋವಾ ರೇಲ್ವೆಗೆ ಸಂಸದ ಸಂಗಣ್ಣ ಕರಡಿ ಪತ್ರ

ಕೊಪ್ಪಳ: ಕಾರಟಗಿ-ಹುಬ್ಬಳ್ಳಿ ಎಕ್ಸ್‌ಪ್ರೆಸ್‌ ರೇಲ್ವೆಯನ್ನು ಗೋವಾದವರೆಗೂ ವಿಸ್ತರಿಸಲು ಕೊಪ್ಪಳ ಕ್ಷೇತ್ರದ ಸಂಸದ ಸಂಗಣ್ಣ ಕರಡಿ,ಹುಬ್ಬಳ್ಳಿ ನೈರುತ್ಯ ರೈಲ್ವೆ ವಿಭಾಗದ ಜನರಲ್ ಮ್ಯಾನೇಜರ್ ಸಂಜೀವ್ ಕಿಶೋರ್ ಅವರಿಗೆ ಪತ್ರ ಬರೆದಿದ್ದಾರೆ.

ಕೊಪ್ಪಳ ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ & ಇಂಡಸ್ಟ್ರಿ ಸಂಸ್ಥೆಯ ಅಧ್ಯಕ್ಷ ಅಶೋಕಸ್ವಾಮಿ ಹೇರೂರ ಅವರ ಮನವಿಗೆ ಸ್ಪಂದಿಸಿರುವ ಸಂಸದರು, ರೇಲ್ವೆ ಇಲಾಖೆಯ ಮುಖ್ಯಸ್ಥರಿಗೆ ಬರೆದ ಪತ್ರದಲ್ಲಿ ಗಾಡಿ ಸಂಖ್ಯೆ:17303/304 ಗೋವಾದವರೆಗೂ ವಿಸ್ತರಿಸಿದರೆ,ವಾಣಿಜ್ಯ ಮತ್ತು ಪ್ರವಾಸೋದ್ಯಮ ಬೆಳವಣಿಗೆಗೆ ಅನುಕೂಲವಾಗುತ್ತದೆ ಎಂದು ವಿವರಿಸಿದ್ದಾರೆ.

ಸಂಸದರ ಸರಕಾರದ ಕಾರ್ಯದರ್ಶಿ ಜೋಷಿಯವರು ಈ ವಿಷಯವನ್ನು ಹಂಚಿಕೊಂಡಿದ್ದು,ಕಾರಟಗಿ-ಹುಬ್ಬಳ್ಳಿ ರೇಲ್ವೆಯ ಸಂಚಾರವನ್ನು ಗೋವಾದವರೆಗೂ ವಿಸ್ತರಿಸಿದರೆ,ಪ್ರಯಾಣಿಕರಿಗೆ ಅನುಕೂಲವಾಗುತ್ತದೆ ಎಂದು ಹೇರೂರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

About The Author

Leave a Reply