December 22, 2024
IMG-20220418-WA0003

ಗಂಗಾವತಿ:ದರೋಜಿ-ಗಂಗಾವತಿ ನೂತನ ರೇಲ್ವೆ ಲೈನ್ ರಚಿಸಲು ಹೋರಾಡುತ್ತಿರುವ ವಾಣಿಜ್ಯೊದ್ಯಮ ಮತ್ತು ಕೈಗಾರಿಕಾ ಸಂಸ್ಥೆಯ ಅದ್ಯಕ್ಷ ಅಶೋಕಸ್ವಾಮಿ ಹೇರೂರ ಅವರ ಕಾರ್ಯ ಸ್ವಾಗತಾರ್ಹ,ಆದರೆ ದರೋಜಿಯಿಂದ-ಬಾಗಲಕೋಟ ನಗರದವರೆಗೂ ಈ ರೇಲ್ವೆ ಲೈನ್ ಆರಂಭವಾದರೆ ಹಿಂದುಳಿದ ಈ ಭಾಗದ ಸಮಗ್ರ ಅಭಿವೃದ್ಧಿಯಾಗುತ್ತದೆ ಎಂದು ದರೋಜಿ-ಬಾಗಲಕೋಟ ನೂತನ ರೇಲ್ವೆ ಲೈನ್ ರಚನಾ ಹೋರಾಟ ಸಮಿತಿಯ ಸಂಚಾಲಕ,ಮಾಜಿ ವಿಧಾನ ಪರಿಷತ್ ಸದಸ್ಯ ಎಚ್.ಆರ್.ಶ್ರೀನಾಥ್ ಅಭಿಪ್ರಾಯ ಪಟ್ಟರು.
ಅವರು ಸೋಮವಾರ ಕನಕಗಿರಿ ಪಟ್ಟಣದ ಎ.ಪಿ.ಎಮ್.ಸಿ.ಆವರಣದಲ್ಲಿ ಹಮ್ಮಿಕೊಂಡಿದ್ದ ಹೋರಾಟದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು ಎಲ್ಲಾ ಸಂಸದರ,ಶಾಸಕರ ಮತ್ತಿತರ ಜನ ಪ್ರತಿನಿಧಿಗಳ ಪಕ್ಷಾತೀತ ಬೆಂಬಲ ಕೋರಿದರು.
ಕನಕಗಿರಿ ಶಾಸಕ ಬಸವರಾಜ ದಡೇಸೂಗೂರು ಮಾತನಾಡಿ,ಮುಖ್ಯಮಂತ್ರಿಯವರನ್ನು ನಿಯೋಗದ ಮೂಲಕ ಭೇಟಿಯಾಗಿ ಈ ನೂತನ ರೇಲ್ವೆ ಲೈನ್ ರಚನೆಗಾಗಿ ಮ್ಯಾಚಿಂಗ್ ಗ್ರ್ಯಾ೦ಟ್ ಕೊಡಿಸುವ ಭರವಸೆ ನೀಡಿದರು.
ಕೊಪ್ಪಳ ಸಂಸದ ಸಂಗಣ್ಣ ಕರಡಿಯವರೂ ಸಹ ಈ ರೇಲ್ವೆ ಲೈನ್ ಬಗ್ಗೆ ಆಸಕ್ತಿವಹಿಸಿದ್ದಾರೆ,ಅವರು ಸಹ ರೇಲ್ವೆ ಸಚಿವಾಲಯವನ್ನು ಸಂಪರ್ಕಿಸಿ ಅವಶ್ಯ ಕ್ರಮ ಕೈಕೊಳ್ಳುವುದಾಗಿ ಹೇಳಿದ್ದಾರೆಂದು ತಿಳಿಸಿದರು.
ಕಂಪ್ಲಿ , ಗಂಗಾವತಿ, ಕನಕಗಿರಿ,ತಾವರಗೇರಾ ಭಾಗದ ಸಾರ್ವಜನಿಕರು ಭಾಗವಹಿಸಿದ್ದರು.

About The Author

Leave a Reply