ಕಾರಟಗಿ-ಯಶವಂತಪೂರ ರೈಲು: ಸಮಯದಲ್ಲಿ ಬದಲಾವಣೆ.
ಗಂಗಾವತಿ: ಕಾರಟಗಿ-
ಯಶವಂತಪುರ ಎಕ್ಸ್ಪ್ರೆಸ್ ರೈಲಿನ ವೇಳಾಪಟ್ಟಿಯಲ್ಲಿ ಬದಲಾವಣೆಯಾಗಿದೆ.
ಕಾರಟಗಿ-ಯಶವಂತಪುರ ಎಕ್ಸ್ ಪ್ರೆಸ್ ರೈಲು ಸಂಖ್ಯೆ 16546 ಕಾರಟಗಿಯಿಂದ ಸಂಜೆ 6ಕ್ಕೆ ಹೊರಟು ಗಿಣಗೇರಾ ಮಾರ್ಗದಿಂದ ಹುಲಗಿ ರೇಲ್ವೆ ನಿಲ್ದಾಣವನ್ನು ರಾತ್ರಿ 8 ಕ್ಕೆ , ಹೊಸಪೇಟೆಯನ್ನು 8.30 ಕ್ಕೆ ಬಳ್ಳಾರಿಯನ್ನು 10.20 ತಲುಪಲಿದೆ.
ಮುಂದೆ ರಾಯದುರ್ಗ, ಚಿತ್ರದುರ್ಗ, ತುಮಕೂರು ಮಾರ್ಗವಾಗಿ ಯಶವಂತಪುರವನ್ನು ಮರುದಿನ ಮುಂಜಾನೆ 8.35ಕ್ಕೆ ತಲುಪಲಿದೆ.
ಈ ಮಾಹಿತಿಯನ್ನು ಕೊಪ್ಪಳ ಜಿಲ್ಲಾ ವಾಣಿಜ್ಯೋದ್ಯಮ ಮತ್ತು ಕೈಗಾರಿಕಾ ಸಂಸ್ಥೆಯ ಅದ್ಯಕ್ಷ ಅಶೋಕಸ್ವಾಮಿ ಹೇರೂರ ಪತ್ರಿಕಾ ಪ್ರಕಟಣೆಯಲ್ಲಿ ಹಂಚಿಕೊಂಡಿದ್ದಾರೆ.