

ಹುಬ್ಬಳ್ಳಿ-ಗುಂತಕಲ್ ಡೆಮೊ ರೈಲು ಆರಂಭ
ಬಳ್ಳಾರಿ16: ಗುಂತಕಲ್-ಹುಬ್ಬಳ್ಳಿ ನಡುವೆ ಡೆಮೊ ಪ್ಯಾಸಿರಜ್ ರೈಲು ನಿನ್ನೆಯಿಂದ ಸಂಚಾರವನ್ನು ಆರಂಭಿಸಿದ್ದು , ಈ ದಿನ ಮಧ್ಯಾಹ್ನ 12.40ಕ್ಕೆ ಬಳ್ಳಾರಿ ನಗರದ ರೈಲ್ವೆ ನಿಲ್ದಾಣಕ್ಕೆ ಆಗಮಿಸಿತು.
ಈ ರೈಲನ್ನು ರಾಜ್ಯ ರೈಲ್ವೆ ಕ್ರಿಯಾ ಸಮಿತಿಯ ಅಧ್ಯಕ್ಷ ಕೆ.ಎಮ್. ಮಹೇಶ್ವರಸ್ವಾಮಿ ಹಾಗೂ ಇತರರ ಪದಾಧಿಕಾರಿಗಳು ಸ್ವಾಗತಿಸಿದರು.ಬಳ್ಳಾರಿ ರೈಲ್ವೆ ನಿಲ್ದಾಣದ ಅಧೀಕ್ಷಕ ಬಿ.ಶೇಷಾದ್ರಿಯವರಿಗೆ ಕೆ.ಎಂ.ಮಹೇಶ್ವರಸ್ವಾಮಿ ಮಾಲಾರ್ಪಣೆ ಮಾಡಿ ಕೃತಜ್ಞತೆ ಸಲ್ಲಿಸಿದರು.
ಕಲ್ಯಾಣ ಸ್ವಾಮಿ ಮಠದ ಪೀಠಾಧಿಕಾರಿ ಶ್ರೀ ಕಲ್ಯಾಣ ಮಹಾಸ್ವಾಮಿಗಳು ರೇಲ್ವೆ ಚಾಲಕರಿಗೆ ಮಾಲಾರ್ಪಣೆ ಮಾಡಿ ಶುಭ ಹಾರೈಸಿದರು.
ಡೆಮೊ ರೈಲಿನ ಎರಡು ಬದಿಯಲ್ಲಿ ಇಂಜಿನ್‌ಗಳಿದ್ದು, ಉತ್ತಮವಾದ ಆಸನದ ವ್ಯವಸ್ಥೆ ಹೊಂದಿರುವುದು ಈ ರೈಲಿನ ವಿಶೇಷತೆ.
ಈ ರೈಲು 7.45ಕ್ಕೆ ಹುಬ್ಬಳ್ಳಿಯಿಂದ ಸಂಚಾರ ಆರಂಭಿಸಿ ಅಣ್ಣಿಗೇರೆ, ಗದಗ, ಕೊಪ್ಪಳ, ಮುನಿರಬಾದ, ಹೊಸಪೇಟೆ, ಗಾದಿಗನೂರು, ತೋರಣಗಲ್ಲು ಮುಖಾಂತರ ಬಳ್ಳಾರಿ ನಗರಕ್ಕೆ 12.45 ಕ್ಕೆ ಆಗಮಿಸಿ, ಮಧ್ಯಾಹ್ನ: 2.10ಕ್ಕೆ ಗುಂತಕಲ್ಲು ತಲುಪಲಿದೆ. ಅಲ್ಲಿಂದ ಮಧ್ಯಾಹ್ನ 2.40ಕ್ಕೆ ಹೊರಟು 3.40ಕ್ಕೆ ಬಳ್ಳಾರಿ ತಲುಪಿ, ರಾತ್ರಿ 9.40ಕ್ಕೆ ಹುಬ್ಬಳ್ಳಿ ರೈಲ್ವೆ ನಿಲ್ದಾಣಕ್ಕೆ ತಲುಪಲಿದೆ.
ಈ ಹಿಂದೆ ಹುಬ್ಬಳ್ಳಿ-ಬಳ್ಳಾರಿ ಪ್ಯಾಸಿಜರ್ ರೈಲು ಪ್ರತಿ ನಿತ್ಯ ಈ ಮಾರ್ಗದಲ್ಲಿ ಸಂಚರಿಸುತ್ತಿತ್ತು, ಬಳ್ಳಾರಿಗೆ ಬರುವ ಈ ರೈಲಿನ ಇಂಜನ್ ನ್ನು ರಿವರ್ಸ ಮಾಡಬೇಕಾಗಿತ್ತು. ಈ ಕಾರಣದಿಂದ ಕಳೆದ ತಿಂಗಳು ಈ ರೈಲ್‌ನ್ನು ಗುಂತಕಲ್ ವರೆಗೆ ವಿಸ್ತರಣೆ ಮಾಡಲಾಗಿತ್ತು.ಗುಂತಕಲ್ ರೈಲ್ವೆ ನಿಲ್ದಾಣದಲ್ಲಿ ಇಂಜಿನ್ ರಿರ್ವಸ್ ಮಾಡುವುದರಲ್ಲಿ ತಾಂತ್ರಿಕ ಸಮಸ್ಯೆ ಎದುರಾಗಿದ್ದರಿಂದ ಈ ಪ್ಯಾಸಿಜರ್ ರೈಲನ್ನು ಡೆಮೊ ರೈಲನ್ನಾಗಿ ಪರಿವರ್ತಿಸಿ ಸಂಚಾರದ ವ್ಯವಸ್ಥೆ ಮಾಡಲಾಯಿತು.
ಈ ಡೆಮೊ ಪ್ಯಾಸಿಜರ್ ರೈಲು ಇತರ ರೈಲುಗಳಂತೆ ಇರುವುದಿಲ್ಲ. ಮೆಟ್ರೋ ರೈಲಿನ ಮಾದರಿಯ ವಿನ್ಯಾಸ ಹೊಂದಿದ್ದು, ರೈಲಿನ ಬೋಗಿಗಳು ವಿಶಾಲವಾಗಿದ್ದು, ಉತ್ತಮ ಅಸನ ಸೌಲಭ್ಯ ಹೊಂದಿವೆ.ರೈಲಿನ ಎರಡು ತುದಿಗಳಲ್ಲಿ ಇಂಜಿನ್‌ಗಳಿದ್ದು ಇಂಜಿನ್ ಬದಲಾಯಿಸುವ ಅಗತ್ಯತೆ ಇರುವುದಿಲ್ಲ.
ಈ ಸಂದರ್ಭದಲ್ಲಿ ತುಂಗಭದ್ರ ರೈತ ಸಂಘದ ಅಧ್ಯಕ್ಷ ದರೂರು ಪುರಷೋತ್ತಮಗೌಡ, ಜೆಡ್.ಆರ್.ಯು.ಸಿ.ಸಿ ಮಾಜಿ ಸದಸ್ಯ ಮಹ್ಮದ್ ಗೌಸ್, ಕಾರ್ಮಿಕ ನಾಯಕ ಹಾಲೇಶ್ವರಗೌಡ, ವೀ.ವಿ.ಸಂಘದ ಸದಸ್ಯ ಹೆಚ್.ಎಂ.ಕಿರಣ್ ಕುಮಾರ್, ಸಮಿತಿಯ ಪದಾಧಿಕಾರಿಗಳಾದ ಗಂಗಾವತಿ ವೀರೇಶ್, ಜೀರ್ ಗುರುಮೂರ್ತಿ, ಡಾ|| ಗಾದಿ ಲಿಂಗನಗೌಡ, ಹೆಚ್.ಕೆ.ಗೌರಿ ಶಂಕರ್, ಜಿ.ನೀಲಕಂಠಪ್ಪ, ಹೆಚ್.ಎಂ.ಅಮರೇಶ್, ಸೂರ್ಯಪ್ರಕಾಶ್, ಎ.ಪಿ.ಉಮೇಶ್, ಬಸವರಾಜಸ್ವಾಮಿ ಮತ್ತು ರುದ್ರಮುನಿ ಮೊದಲಾದವರು ಈ ಸಂಧರ್ಭದಲ್ಲಿ ಹಾಜರಿದ್ದರು.