ಕೊಪ್ಪಳ ಜಿಲ್ಲಾ ವಾಣಿಜ್ಯೋದ್ಯಮ ಮತ್ತು ಕೈಗಾರಿಕಾ ಸಂಸ್ಥೆ ಮತ್ತು ಔಷಧ ವ್ಯಾಪಾರಿಗಳ ಸಂಘದ ಜಿಲ್ಲಾದ್ಯಕ್ಷ ಅಶೋಕಸ್ವಾಮಿ ಹೇರೂರ ಅವರ ಪುತ್ರಿ
ಡಾ.ಅಭಿಲಾಷಾ ಹೇರೂರ ಸ್ನಾತಕೋತ್ತರ ಪದವಿ ಪಡೆಯಲು ಪ್ರತಿಷ್ಠಿತ ಕಾಲೇಜಿನಲ್ಲಿ ಪ್ರವೇಶ ಪಡೆದಿದ್ದಾಳೆ.
ದಂತ ವೈದ್ಯಕೀಯ ಪದವೀಧರರ ರಾಷ್ಟ್ರೀಯ ಅರ್ಹತಾ ಪರೀಕ್ಷೆಯಲ್ಲಿ ಕಲ್ಯಾಣ ಕರ್ನಾಟಕದ ಭಾಗದಲ್ಲಿ ಪ್ರಥಮ ಸ್ಥಾನ ಪಡೆದಿದ್ದ ಡಾ.ಅಭಿಲಾಷಾ ಅಶೋಕಸ್ವಾಮಿ ಹೇರೂರ, ಬೆಂಗಳೂರಿನ ಪ್ರತಿಷ್ಠಿತ ಎಮ್.ಎಸ್.ರಾಮಯ್ಯ ವೈದ್ಯಕೀಯ ಕಾಲೇಜಿನಲ್ಲಿ ಸ್ನಾತಕೋತ್ತರ ಪದವಿಯ ಸರ್ಜರಿ ವಿಭಾಗದಲ್ಲಿ ಪ್ರವೇಶ ಪಡೆಯುವಲ್ಲಿ ಯಶಸ್ವಿಯಾಗಿದ್ದಾಳೆ.
ಮುಖದ ಮೇಲಿನ ಮೂಳೆ,ದವಡೆ ಮುರಿತ ಮತ್ತು ಮುಖದ ಮೇಲಿನ ಯಾವುದೇ ವಿಕಲತೆಯನ್ನು ಸರಿಪಡಿಸುವ ವಿಭಾಗ ಇದಾಗಿದ್ದು , ಬ್ಲ್ಯಾಕ್ ಫ಼ಂಗಸ್ ಚಿಕಿತ್ಸೆ ಕೂಡ ಈ ಸರ್ಜರಿ ವಿಭಾಗದ ವ್ಯಾಪ್ತಿಗೆ ಒಳಪಡುತ್ತದೆ.
ಬಳ್ಳಾರಿಯ ಸರಕಾರಿ ವಿಜಯನಗರ ದಂತ ವೈದ್ಯಕೀಯ ಮಹಾ ವಿದ್ಯಾಲಯದಲ್ಲಿ ದಂತ ವೈದ್ಯಕೀಯ ಪದವಿಯಲ್ಲಿ ಮೊದಲ ಸ್ಥಾನದಲ್ಲಿ ಉತ್ತೀರ್ಣಳಾಗಿದ್ದ ಡಾ.ಅಭಿಲಾಷಾ ಅತಿ ಕ್ಲಿಷ್ಟಕರವಾದ ಸರ್ಜರಿ ವಿಭಾಗ ಆಯ್ಕೆ ಮಾಡಿಕೊಂಡಿದ್ದಾಳೆ.
ಬಳ್ಳಾರಿಯಲ್ಲಿ ಅಭ್ಯಾಸ ಮಾಡುವಾಗ ಕರಡಿ ಕಡಿತಕ್ಕೊಳಗಾದ ಮತ್ತು ಅಫ಼ಘಾತಕ್ಕೀಡಾದ ರೋಗಿಗಳಿಗೆ ಉತ್ಸಾಹದಿಂದ ಚಿಕಿತ್ಸೆ ನೀಡುತ್ತಿದ್ದ ಡಾ.ಅಭಿಲಾಷಾ ಸಹಜವಾಗಿ ಸ್ನಾತಕೋತ್ತರ ಪದವಿಯಲ್ಲಿ ಸರ್ಜರಿ ವಿಭಾಗ ಆಯ್ಕೆ ಮಾಡಿಕೊಂಡಿದ್ದಾಳೆ ಎಂದು ಪಾಲಕರಾದ ಅಶೋಕಸ್ವಾಮಿ ಹೇರೂರ ಮತ್ತು ಶ್ರೀಮತಿ ಸಂದ್ಯಾ ಪಾರ್ವತಿ ಸಂತಸ ವ್ಯಕ್ತ ಪಡಿಸಿದ್ದಾರೆ.
ಪ್ರತಿಷ್ಠಿತ ಕಾಲೇಜ್ ನಲ್ಲಿ ಪ್ರವೇಶ ಪಡೆದ ಡಾ.ಅಭಿಲಾಷಾ ಹೇರೂರ