Honour ನುಗ್ಗೆ ಕೃಷಿ: ತಂದಿತು ಖುಷಿ. Share this:WhatsAppTelegramFacebookXPrintEmailLinkedInTwitter December 6, 2021 ಕೊಪ್ಪಳ ಜಿಲ್ಲೆಯ ಕಾರಟಗಿ ತಾಲ್ಲೂಕಿನ ಪ್ರಗತಿಪರ ರೈತರಾದ ಶ್ರೀ ಬಸಯ್ಯ ಸಿದ್ದಲಿಂಗಯ್ಯ ಹಿರೇಮಠರವರು ಬಿ.ಎಸ್.ಸಿ, (ಐ.ಟಿ.) ವಿದ್ಯಾಭ್ಯಾಸವನ್ನು ಹೊಂದಿರುತ್ತಾರೆ. ಇವರು ಬೆಂಗಳೂರಿನಲ್ಲಿ ಐ.ಟಿ. ಕಂಪನಿಯ ಹುದ್ದೆಯನ್ನು ತೊರೆದು ಕೃಷಿಯಲ್ಲಿ ಆಸಕ್ತಿಯನ್ನು ಬೆಳೆಸಿಕೊಂಡು ತಾವರಗೇರೆಯ ಗ್ರಾಮದ ತಮ್ತ ಸ್ವತಃ 66 ಎಕರೆ ಜಮೀನಿನ ಪ್ರದೇಶದಲ್ಲಿ ಮುಖ್ಯವಾಗಿ ನುಗ್ಗೆ ಬೆಳೆಯನ್ನು ಆಧಾರವಾಗಿ ಸಾವಯವ ಮಾದರಿಯಲ್ಲಿ 2018 ರಿಂದ ಆರಂಭಿಸಿರುತ್ತಾರೆ.ಇದರ ಜೊತೆಗೆ ಹೊಲದ ಬದುವುಗಳ ಮೇಲೆ ವಿವಿಧ ಅರಣ್ಯ ಜಾತಿ ಸಸಿಗಳಾದ ಹೆಬ್ಬೇವು, ಸಾಗುವಾನಿ, ಸಿಲ್ವರ್ ಗಿಡಗಳನ್ನು , ನುಗ್ಗೆ ಬೆಳೆ ಪ್ರದೇಶದ ಸುತ್ತಲೂ ಗಾಳಿಗೆ ತಡೆಗೋಡೆಯಾಗಿ ಬೆಳೆಸಿರುತ್ತಾರೆ. ತೋಟಗಾರಿಕಾ ಬೆಳೆಗಳಾದ ಮಾವು, ಪೇರಲ, ನಿಂಬೆ ಸಪೋಟ, ಸೀತಾಫಲ ಇವುಗಳನ್ನು ನಿರ್ವಹಣೆ ಮಾಡುತ್ತಿದ್ದಾರೆ.ಸಾವಯವ ನುಗ್ಗೆ ಬೇಸಾಯಕ್ಕೋಸ್ಕರ ಬೇಕಾಗಿರುವ ಸುಧಾರಿತ ಕಾಂಪೋಸ್ಟ್ ಬಳಕೆ ಮಾಡುತ್ತಿದ್ದು, ಈ ಕಾಂಪೋಸ್ಟ್ ತಯಾರಿಕೆಗೆ ಬೇಕಾಗಿರುವ ಹಸುವಿನ ಸೆಗಣೆಯನ್ನು ತಾವೇ ನಿರ್ವಹಣೆ ಮಾಡುತ್ತಿದ್ದಾರೆ. ಗಿರ್, ಓಂಗೋಲ್, ಕಿಲಾರ್ ತಳಿಗಳಿಂದ ಪಡೆದುಕೊಳ್ಳುತ್ತಿದ್ದಾರೆ. ಇವುಗಳಲ್ಲದೇ ಎರೆಗೊಬ್ಬರ ತಯಾರಿಕೆ ಮತ್ತು ಜೇನು ಕೃಷಿಯಂತಹ ಉಪ ಕಸುಬುಗಳನ್ನು ಅಳವಡಿಸಿಕೊಂಡಿರುವುದರ ಜೊತೆಗೆ ಗೋಬರ್ ಗ್ಯಾಸ್ ಬಳಕೆಯಿಂದ ಮಣ್ಣಿನಲ್ಲಿ ಸೂಕ್ಷ್ಮ ಜೀವಿಗಳ ಸಂಖ್ಯೆಗಳನ್ನು ಹೆಚ್ಚಿಸುವ ಮುಖಾಂತರ ಮಣ್ಣಿನ ಫಲವತ್ತತೆಯನ್ನು ಕಾಪಾಡುತ್ತಿದ್ದಾರೆ. ಇನ್ನಿತರ ಕೃಷಿ ಉಪಕರಣಗಳಾದ, ಟ್ರ್ಯಾಕ್ಟರ್, ಮೇವು ಕತ್ತರಿಸುವ ಯಂತ್ರ, ಕಳೆ ತೆಗೆಯುವ ಯಂತ್ರ, ಯಾಂತ್ರಿಕ ಸಿಂಪರಕಗಳು ಮತ್ತು ಧಾನ್ಯ ಸಂಸ್ಕರಣ ಉಪಕರಣಗಳನ್ನು ಹೊಂದಿದ್ದಾರೆ. ಶ್ರೀಯುತರು ತಮ್ಮ 66 ಎಕರೆ ಜಮೀನಿನಲ್ಲಿ ಸಾವಯವ ನುಗ್ಗೆ ಬೇಸಾಯದಲ್ಲಿ ಹನಿ ನೀರಾವರಿ ಪದ್ದತಿ ಮತ್ತು ಗುರತ್ವಾಕರ್ಷಣ ಬಲದಿಂದ ನೀರಿನ ನಿರ್ವಹಣೆಯನ್ನು ಮಾಡುತ್ತಿದ್ದು, ಇದರಿಂದ ವಿದ್ಯುತ್ ವ್ಯಯವನ್ನು ಕಡಿಮೆ ಮಾಡಿರುತ್ತಾರೆ ಹಾಗೂ ಕೃಷಿ ಹೊಂಡವನ್ನು ನಿರ್ಮಿಸಿಕೊಂಡು ಕ್ಷೇತ್ರಗಳಿಗೆ ನೀರನ್ನು ಒದಗಿಸುತ್ತಿದ್ದಾರೆ ಮತ್ತು ನಿರ್ದಿಷ್ಟ ಪ್ರದೇಶದಲ್ಲಿ ಹೆಚ್ಚಿನ ಸಂಖ್ಯೆಯ ಸಸಿಗಳಿಗಾಗಿ ಅಧಿಕ ಸಾಂದ್ರತೆಯ ಬೇಸಾಯವನ್ನು ಅಳವಡಿಸಿಕೊಂಡಿದ್ದಾರೆ. ಇವರ ಪ್ರಮುಖ ಉದ್ದೇಶವೆಂದರೆ ಸೂಪರ ಪುಡ್ ಆದ ನುಗ್ಗೆ ಎಲೆಗಳಿಂದ ಉತ್ಕಷ್ಟ ಮಟ್ಟದ ಪುಡಿ, ಗುಳಿಗೆ, ಕ್ಯಾಪ್ಸೂಲ್ ಗಳನ್ನು ತಯಾರಿಸಿ ನೇರ ಮಾರುಕಟ್ಟೆಯ ಮುಖಾಂತರ ಗ್ರಾಹಕರಿಗೆ ಒದಗಿಸುತ್ತಿದ್ದು, ಇದ್ದರಿಂದ ಹೆಚ್ಚು ಲಾಭ ಹಾಗೂ ಅಧಿಕ ಪ್ರಮಾಣದಲ್ಲಿ ಕಬ್ಬಿಣಾಂಶ ಹಾಗೂ ಇತರೆ ಪೋಷಕಾಂಶಗಳ ಹೊಂದಿರುವ ನುಗ್ಗೆ ಎಲೆ ಪದಾರ್ಥವನ್ನು ಅಪೌಷ್ಠಿಕತೆ ನಿರ್ವಹಣೆ ಮಾಡುವುದರಲ್ಲಿ ಪ್ರಮುಖ ಪಾತ್ರ ನಿರ್ವಹಿಸಿಸುತ್ತಿದ್ದಾರೆ. ಇವರು ತಮ್ಮ ನುಗ್ಗೆ ಪದಾರ್ಥಗಳ ಮಾರಾಟಕ್ಕಾಗಿ ಈ FSSI ಪರವಾನಿಗೆ ಪತ್ರ, ಇದರ ಜೊತೆಗೆ ನುಗ್ಗೆ ಸಾವಯವ ಪದಾರ್ಥಗಳಿಗೆ ಸಾವಯವ ಪ್ರಮಾಣ ಪತ್ರವನ್ನು ಪಡೆದುಕೊಂಡಿರುತ್ತಾರೆ. ವಿವಿಧ ನುಗ್ಗೆ ಪದಾರ್ಥಗಳ ತಯಾರಿಕೆಗಾಗಿ ಪಾಲಿಹೌಸ್, ಸೋಲಾರ್ ಡ್ರೈಯರ್ ಹಾಗೂ ಸುಸರ್ಜಿತವಾದ ಪ್ರಯೋಗಾಲಯವನ್ನು ಹೊಂದಿರುತ್ತಾರೆ. ನುಗ್ಗೆಯ ಈ ವಿವಿಧ ಉತ್ಪನ್ನಗಳನ್ನು ನೇರ ರಾಜ್ಯಗಳಾದ ಗುಜರಾತ್, ತಮಿಳುನಾಡ, ಮಹಾರಾಷ್ಟ್ರ, ತೆಲಂಗಾಣ ಇವುಗಳಿಗೆ ರಪ್ತು ಮಾಡುವ ಜೊತೆಗೆ ಹೊರ ದೇಶಗಳಾದ ಪ್ರಾನ್ಸ್, ಜರ್ಮನಿ, ದುಬಾಯಿ, ದಕ್ಷಿಣಕೊರಿಯ, ಜಪಾನ್, ಅಮೇರಿಕಾಗಳಿಗೆ ರಪ್ತು ಮಾಡುತ್ತಿದ್ದಾರೆ. ಇದಲ್ಲದೇ, ಈ ಮಾರುಕಟ್ಟೆಯಲ್ಲಿ ಮಾರಾಟವನ್ನು ಮಾಡುತ್ತಿದ್ದಾರೆ. ಇದರಿಂದ, ಇವರ ಒಟ್ಟು ವಾರ್ಷಿಕ ಆದಾಯ ಸರಾಸರಿ ರೂ.1.476 ಕೋಟಿಯಷ್ಟು ಲಾಭವನ್ನು ಪಡೆಯುತ್ತಾರೆ.ಮುಂದುವರೆದು, ಶ್ರೀಯುತರು ತಮ್ಮ ಹೆಚ್ಚಿನ ಜ್ಞಾನರ್ಜನೆಗೋಸ್ಕರ CFTRI,Mysuru ನಲ್ಲಿ ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸುವುದರ ಜೊತೆಗೆ (TNAU) ತಮಿಳುನಾಡು ಆಯೋಜಿಸದಂತಹ ಮೊರಿಂಗ್ ಸೂಪರ್ ಪುಡ್ ಕಾನ್ಪರೆನ್ಸ್ ನಲ್ಲಿ ಭಾಗವಹಿಸಿರುತ್ತಾರೆ ಜೊತೆಗೆ ಇನ್ನಿತರ ವಿವಿಧ ಅಂತರರ್ಜಾಲ ತರಬೇತಿಗಳಲ್ಲಿ ಕೂಡಾ ಭಾಗವಹಿಸಿ ಹೆಚ್ಚಿನ ಮಾಹಿತಿಯನ್ನು ಪಡೆದುಕೊಂಡಿರುತ್ತಾರೆ. ತಮ್ಮ ಸ್ವತಃ ಉದ್ಯಮೆಯಾದ ನುಗ್ಗೆ ಪದಾರ್ಥಗಳ ರಪ್ತುಗೋಸ್ಕರ APEDA, Hydrabada ಸದಸ್ಯತ್ವವನ್ನು ಹೊಂದಿರುತ್ತಾರೆ. ಒಟ್ಟಾರೆಯಾಗಿ ಶ್ರೀಯುತರು ಸಾವಯವ ನುಗ್ಗೆ ಬೇಸಾಯದಲ್ಲಿ 2018 ರಿಂದ ತಮ್ಮನ್ನು ತಾವು ತೊಡಗಿಸಿಕೊಂಡು ಕೊಪ್ಪಳ ಜಿಲ್ಲೆಯ ಅಪೌಷ್ಟಿಕತೆಯ ನಿರ್ವಹಣೆಗಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ನುಗ್ಗೆಯನ್ನು ಸೂಪರ್ ಫುಡ್ ಎಂದು ಪರಿಗಣಿಸಿ ಉತ್ಕೃಷ್ಟ ಉತ್ಪನ್ನಗಳನ್ನು ತಯಾರಿಸಿ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲೂ ಕೂಡ ತಮ್ಮ ಚಾಪನ್ನು ಮೂಡಿಸಿದ್ದಾರೆ. ಇದಲ್ಲದೇ, ಯುವ ರೈತರನ್ನು ಉತ್ತೇಜಿಸಲು ವಿವಿಧ ಅಂತರರ್ಜಾಲ ತರಬೇತಿಗಳನ್ನು, ಕ್ಷೇತ್ರ ಭೇಟಿಗಳನ್ನು ಮತ್ತು ಸಲಹೆ ಸೂಚನೆಗಳನ್ನು ನೀಡಿ ಹೆಚ್ಚಿನ ಯುವ ರೈತರುಗಳಿಗೆ ಪ್ರೋತ್ಸಾಹಿಸುತ್ತಿದ್ದಾರೆ. About The Author See author's posts Like this:Like Loading... Related Continue Reading Previous Previous post: ಅಯೋದ್ಯಕ್ಕೆ ರೈಲು,ಸಂಗಣ್ಣ ಕರಡಿಯವರಿಂದ ಪತ್ರ.Next Next post: ಅಯೋದ್ಯಾ-ಕಿಷ್ಕಿಂದಾ ರೈಲು ಪರಿಶೀಲನೆ: Leave a ReplyCancel reply Related News ಫ಼ಾರ್ಮಸಿ ಪದವೀಧರರಿಗೆ ಮಾತ್ರ ಸೌಲಭ್ಯ ದೊರೆಯಲಿ. November 11, 2023 ಎನ್.ಆರ್.ಶ್ರೀನಿವಾಸ್ ಅವರಿಗೆ ವಾಣಿಜ್ಯ ರತ್ನ ಪ್ರಶಸ್ತಿ. September 25, 2022