July 13, 2025
IMG-20211102-WA0000-2
ಅಯೋದ್ಯಕ್ಕೆ ರೈಲು,ಸಂಗಣ್ಣ ಕರಡಿಯವರಿಂದ ಪತ್ರ
ಗಂಗಾವತಿ: ತಾಲೂಕಿನ ಅಂಜನಾದ್ರಿಗೆ ಭೇಟಿ ಕೊಡಲು ಅನುಕೂಲವಾಗುವಂತೆ ಅಯೋದ್ಯಯಿಂದ ಗಂಗಾವತಿ ನಗರಕ್ಕೆ ರೇಲ್ವೆ ಸೌಲಭ್ಯ ಒದಗಿಸುವಂತೆ ಕೊಪ್ಪಳ ಕ್ಷೇತ್ರದ ಸಂಸದ ಸಂಗಣ್ಣ ಕರಡಿ,ಕೇಂದ್ರ ಪ್ರವಾಸೋದ್ಯಮ ಸಚಿವ ಶ್ರೀಪಾದ ಎಸ್ಸೊ ನಾಯಕ್ ಅವರಿಗೆ ಪತ್ರ ಬರೆದಿದ್ದಾರೆ.

ಅಯೋದ್ಯಾದಿಂದ ಗಂಗಾವತಿ ನಗರದವರಿಗೆ ನೂತನ ರೇಲ್ವೆ ಆರಂಭಿಸುವುದರಿಂದ ಕೊಪ್ಪಳ ಜಿಲ್ಲೆಯಲ್ಲಿ ಪ್ರವಾಸೋದ್ಯಮದ ಬೆಳವಣಿಗೆಯಾಗಲಿದೆ ಎಂದು ಅವರು ಸಚಿವರಿಗೆ ಬರೆದ ಪತ್ರದಲ್ಲಿ ವಿವರಿಸಿದ್ದಾರೆ.ವಿಧಾನ ಪರಿಷತ್ ಮಾಜಿ ಸದಸ್ಯ ಎಚ್.ಆರ್.ಶ್ರೀನಾಥ ಈ ಮಾಹಿತಿಯನ್ನು ಒದಗಿಸಿದ್ದಾರೆ.

ಇದೇ ಸಂಧರ್ಭದಲ್ಲಿ ಸೊಲ್ಲಾಪುರ-ಗದಗ ರೇಲ್ವೆ ಸಂಚಾರವನ್ನು ಗದಗ ನಗರದಿಂದ ಗಂಗಾವತಿ ನಗರದವರೆಗೂ ವಿಸ್ತರಿಸಲು ಮುತುವರ್ಜಿ ವಹಿಸಬೇಕೇಂದು ಕೊಪ್ಪಳ ಜಿಲ್ಲಾ ವಾಣಿಜ್ಯೋದ್ಯಮ ಮತ್ತು ಕೈಗಾರಿಕಾ ಸಂಸ್ಥೆಯ ಅದ್ಯಕ್ಷ ಅಶೋಕಸ್ವಾಮಿ ಹೇರೂರ,ಸಂಸದ ಸಂಗಣ್ಣನವರಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ.

ಭಕ್ತರು ಶಿರಡಿಯಿಂದ  ಆಂಜನಾದ್ರಿಗೆ ಬೇಟಿಕೊಡಲು ಮತ್ತು ಕೊಪ್ಪಳ ಜಿಲ್ಲೆಯ ಜನತೆ ಶಿರಡಿಗೆ ಪ್ರಯಾಣಿಸಿ, ಸಾಯಿಬಾಬಾ ದರ್ಶನ ಪಡೆಯಲು ಅನುಕೂಲವಾಗಲಿದೆ ಎಂದು ಅವರು ಹೇಳಿದ್ದಾರೆ.

About The Author

Leave a Reply