

ಗೋವಾ,ಸೋಲಾಪುರ ರೇಲ್ವೆ ಸೌಲಭ್ಯಕ್ಕಾಗಿ ಮನವಿ.
ಕೊಪ್ಪಳ:ಜಿಲ್ಲೆಯ ಕಾರಟಗಿ ತಾಲೂಕು ಕೇಂದ್ರದಿಂದ ಸಂಚಾರ ಆರಂಭಿಸಲಿರುವ ಕಾರಟಗಿ-ಹುಬ್ಬಳ್ಳಿ ರೇಲ್ವೆಯನ್ನು ಗೋವಾ ರಾಜ್ಯದ ಪಣಜಿಯವರೆಗೆ ಮುಂದುವರಿಸಲು ಮತ್ತು ಸೊಲ್ಲಾಪುರ-ಗದಗ ರೇಲ್ವೆ ಓಡಾಟವನ್ನು ಕಾರಟಗಿಯವರೆಗೂ ಮುಂದುವರಿಸಲು ಕೊಪ್ಪಳ ಜಿಲ್ಲಾ ವಾಣಿಜ್ಯೋದ್ಯಮ ಮತ್ತು ಕೈಗಾರಿಕಾ ಸಂಸ್ಥೆ ಕೊಪ್ಪಳ ಸಂಸದ ಕರಡಿ ಸಂಗಣ್ಣ ಅವರನ್ನು ಒತ್ತಾಯಿಸಿದೆ.
ಬಿ.ಜೆ.ಪಿ.ಧುರಿಣ ಎಚ್.ಗಿರೆಗೌಡ,ನಗರ ಸಭಾ ಸದಸ್ಯ ಮನೋಹರ ಸ್ವಾಮಿ ಹಿರೇಮಠ, ಸಂಸ್ಥೆಯ ಅದ್ಯಕ್ಷ ಅಶೋಕಸ್ವಾಮಿ ಹೇರೂರ, ಕಾರ್ಯದರ್ಶಿ ಉದಯ ಕುಮಾರ ದರೋಜಿ ಹಾಗೂ ಸದಸ್ಯ ಉಮಾ ಮಹೇಶ್ವರ ಸ್ವಾಮಿ ಇವರುಗಳು ರವಿವಾರ ಸಂಸದರನ್ನು ಭೇಟಿ ಮಾಡಿ ಈ ಬಗ್ಗೆ ಮನವಿ ಸಲ್ಲಿಸಿದರು.
ಸಕಾರಾತ್ಮಕವಾಗಿ ಸ್ಪಂದಿಸಿದ ಸಂಸದರು,ಈ ಬಗ್ಗೆ ಕ್ರಮ ಕೈಕೊಳ್ಳುವ ಭರವಸೆ ನೀಡಿ,ಸಂಬಂಧಿಸಿದ ಸಚಿವರನ್ನು ಬೇಟಿಯಾಗಲು ದೇಹಲಿಗೆ ಬರುವಂತೆ ಆಹ್ವಾನಿಸಿದರು.