July 12, 2025
20211011_142716

ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯಿಂದ  ಗಂಗಾವತಿ-ದರೋಜಿ ನೂತನ ರೇಲ್ವೆ ಮಾರ್ಗ ರಚನೆಯ ಸರ್ವೆ ಕಾರ್ಯಕ್ಕೆ ಮತ್ತು ಕಾಮಗಾರಿಗಾಗಿ ಮ್ಯಾಚಿಂಗ್ ಗ್ರ್ಯಾಂಟ್ ಮಂಜೂರು ಮಾಡಲು ಕೊಪ್ಪಳ ಜಿಲ್ಲಾ ವಾಣಿಜ್ಯೊದ್ಯಮ ಮತ್ತು ಕೈಗಾರಿಕಾ ಸಂಸ್ಥೆ ಒತ್ತಾಯಿಸಿದೆ.
ಈ ಬಗ್ಗೆ ಪ್ರದೇಶಾಭಿವೃದ್ಧಿ ಮಂಡಳಿಯ ಅದ್ಯಕ್ಷರು ಹಾಗೂ ಶಾಸಕರಾದ ದತ್ತಾತ್ರೇಯ ಸಿ.ಪಾಟೀಲ್ ರೇವೂರ ಅವರಿಗೆ ಚೇಂಬರ್ ಆಫ಼್ ಕಾಮರ್ಸ್ ಅದ್ಯಕ್ಷ ಅಶೋಕಸ್ವಾಮಿ ಹೇರೂರ ಪತ್ರ ಬರೆದಿದ್ದಾರೆ.
ಗಂಗಾವತಿ-ದರೋಜಿ ರೇಲ್ವೆ ಮಾರ್ಗ ರಚನೆಯಿಂದ ಆಂದ್ರ ,ತೆಲಂಗಾಣ,ತಮಿಳುನಾಡು ರಾಜ್ಯಗಳ ನೇರ ಸಂಪರ್ಕ ಏರ್ಪಡುತ್ತದೆ.ಗಂಗಾವತಿ, ಕಾರಟಗಿ, ಕನಕಗಿರಿ,ತಾವರಗೇರಿ ಭಾಗದ ಜನರು ಶ್ರೀಶೈಲ, ತಿರುಪತಿ ಪುಣ್ಯ ಕ್ಷೇತ್ರಗಳಿಗೆ ಹೋಗಿ ಬರಲು ಅನುಕೂಲವಾಗುತ್ತದೆ.
ಬಳ್ಳಾರಿ,ಗುಂತಕಲ್,ಗು೦ಟೂರ್ ರೇಲ್ವೆ ಜಂಕ್ಷನ್ ನೇರ ಸಂಪರ್ಕದಿಂದ ಬೆಂಗಳೂರು,ಚನೈ ಮತ್ತು ಇತರ ನಗರಗಳಿಗೆ ಸಂಚರಿಸಲು ಸರಳವಾಗುತ್ತದೆ ಎಂದು ಪತ್ರದಲ್ಲಿ ವಿವರಿಸಲಾಗಿದೆ.
ಈ ಪತ್ರದ ಪ್ರತಿಗಳನ್ನು ಕೊಪ್ಪಳ ಲೋಕಸಭಾ ಸದಸ್ಯರಾದ ಸಂಗಣ್ಣ ಕರಡಿ, ಬಳ್ಳಾರಿಯ ಸಂಸದ ವಾಯ್.ದೇವೇಂದ್ರಪ್ಪ , ಸಚಿವರಾದ ಬಿ.ಶ್ರೀರಾಮುಲು,ಆನಂದ ಸಿಂಗ್,ಹಾಲಪ್ಪ ಆಚಾರ್,ಶಾಸಕರಾದ ಪರಣ್ಣ ಮುನವಳ್ಳಿ ಗಂಗಾವತಿ, ಬಸವರಾಜ ದಡೆಸಗೂರು ಕನಕಗಿರಿ, ಸೋಮಶೇಖರ್ ರೆಡ್ಡಿ ಬಳ್ಳಾರಿ ನಗರ,ನಾಗೇಂದ್ರ ಬಳ್ಳಾರಿ ಗ್ರಾಮೀಣ, ಗಣೇಶ್ ಕಂಪ್ಲಿ ಇವರುಗಳಿಗೆ ಮಾಹಿತಿ ಮತ್ತು ಕ್ರಮಕ್ಕಾಗಿ ಕಳುಹಿಸಿದ್ದಾರೆ.

About The Author

Leave a Reply