ಗಂಗಾವತಿ-ದರೋಜಿ ರೇಲ್ವೆ ಲೈನ್, ಬೋರ್ಡ್ ಗಮನಕ್ಕೆ !
ಗಂಗಾವತಿ:ಗಂಗಾವತಿ-ದರೋಜಿ ನೂತನ ರೇಲ್ವೆ ಮಾರ್ಗ ರಚನೆಯ ವಿಷಯವನ್ನು ಭಾರತದ ರೇಲ್ವೆ ಮಂಡಳಿ ಗಮನಕ್ಕೆ ತರಲಾಗಿರುವ ಬಗ್ಗೆ ಹುಬ್ಬಳ್ಳಿ ರೇಲ್ವೆ ವಿಭಾಗದ ಡೆಪ್ಯುಟಿ ಜನರಲ್ ಮ್ಯಾನೇಜರ್ ದಾಖಲೆ ಸಮೇತ ಉತ್ತರಿಸಿದ್ದಾರೆ.
ಈ ಬಗ್ಗೆ ಕೊಪ್ಪಳ ಜಿಲ್ಲಾ ಚೇಂಬರ್ ಆಫ್ ಕಾಮರ್ಸ & ಇಂಡಸ್ಟ್ರಿ ಅದ್ಯಕ್ಷ ಅಶೋಕಸ್ವಾಮಿ ಹೇರೂರ ಅವರಿಗೆ ಪತ್ರ ಬರೆದಿರುವ ಅವರು ಬೆಂಗಳೂರಿನ ರೇಲ್ವೆ ಇಲಾಖೆಯ ಮುಖ್ಯ ಆಡಳಿತಾಧಿಕಾರಿಗಳು ಭಾರತದ ರೇಲ್ವೆ ಬೋರ್ಡಗೆ ಬರೆದ ಪತ್ರವನ್ನು ಉಲ್ಲೇಖಿಸಿದ್ದಾರೆ.
ಹುಬ್ಬಳ್ಳಿ ರೇಲ್ವೆ ವಿಭಾಗದ ಡೆಪ್ಯುಟಿ ಜನರಲ್ ಮ್ಯಾನೇಜರ್,ಕೊಪ್ಪಳ ಜಿಲ್ಲಾಧಿಕಾರಿ, ಬೆಂಗಳೂರಿನ ರೇಲ್ವೆ ಕಚೇರಿಯ ಆಡಳಿತಾಧಿಕಾರಿ,ಭಾರತೀಯ
ರೇಲ್ವೆ ಬೋರ್ಡ ಮತ್ತು ಜಿಲ್ಲಾ ಚೇಂಬರ್ ಆಫ್ ಕಾಮರ್ಸನಿಂದ ಬರೆಯಲಾಗಿರುವ ಎಲ್ಲಾ ಪತ್ರಗಳನ್ನು ಉಲ್ಲೇಖಿಸಿ, ಹುಬ್ಬಳ್ಳಿಯ ಡೆಪ್ಯುಟಿ ಜನರಲ್ ಮ್ಯಾನೇಜರ್ ಪತ್ರವನ್ನು ಬರೆದಿದ್ದಾರೆ.
ಈ ಎಲ್ಲಾ ಮಾಹಿತಿ ಹೊಂದಿರುವ ಪತ್ರದ ಪ್ರತಿಯನ್ನು ಶ್ರೀಮತಿ ಕಲಾವತಿ ಉಪ ಕಾರ್ಯದರ್ಶಿ ಮೂಲ ಸೌಲಭ್ಯ ಮತ್ತು ಅಭಿವೃದ್ಧಿ, ವಿಕಾಸ ಸೌಧ ಕರ್ನಾಟಕ ಸರಕಾರ ಇವರಿಗೆ ಕಳುಹಿಸಿದ್ದಾರೆ.