July 11, 2025
IMG-20211015-WA0000

ಅಲೋಪತಿ ಔಷಧ ಬಳಸಿ,ದೇಹ-ದೇಶ ಎರಡನ್ನೂ ಹಾಳು ಮಾಡಬೇಡಿ-ಡಾ.ಬದಾಮಿ ಕಿವಿ ಮಾತು.
ಗಂಗಾವತಿ: ನಮ್ಮ ದೇಶದ ಆಯುರ್ವೇದ ಚಿಕಿತ್ಸಾ ಪದ್ದತಿ ಅಮೂಲ್ಯವಾದದ್ದು.ಆಯುಷ್ ವೈದ್ಯರು ಅಲೋಪತಿ ಔಷಧಗಳನ್ನು ಬಳಸಿ, ಆರ್ಥಿಕವಾಗಿ ನಮ್ಮ ದೇಶವನ್ನು ಮತ್ತು  ಸಾಮಾನ್ಯರ ಆರೋಗ್ಯವನ್ನು ಹಾಳು ಮಾಡಬಾರದು ಎಂದು ಔಷಧ ತಜ್ಞ ಮತ್ತು ಪರಿಸರವಾದಿ ಡಾ.ಶ್ರೀಶೈಲ ಬದಾಮಿ ಹೇಳಿದರು.
ಅವರು ಇತ್ತೀಚಿಗೆ ಗಂಗಾವತಿ ನಗರದ ವೈದ್ಯಕೀಯ ಭವನದಲ್ಲಿ ನಡೆದ ಫ಼ಾರ್ಮಸಿಸ್ಟಗಳಿಗೆ ಏಪ್ರಾನ್ ವಿತರಣಾ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಮಾತನಾಡುತ್ತಿದ್ದರು.

ಅಲೋಪತಿ ವೈದ್ಯ ಪದ್ದತಿ ಎಂದೂ,ಯಾವತ್ತಿಗೂ ಆಯುರ್ವೇದ ವೈದ್ಯ ಪದ್ದತಿಗೆ ಸರಿ ಸಾಟಿ ಆಗಲಾರದು.ತಾತ್ಕಾಲಿಕವಾದ ಮತ್ತು ಕೆಮಿಕಲ್ ಯುಕ್ತವಾದ ಇಂಗ್ಲೀಷ್ ಔಷಧಗಳನ್ನು ಬಳಸಿ, ಸ್ವದೇಶಿ ಆಯುರ್ವೇದ ಚಿಕಿತ್ಸಾ ಪದ್ದತಿಯನ್ನು ಕಡೆಗಣಿಸುವುದು ದೇಶಕ್ಕೆ ದ್ರೋಹ ಬಗೆದಂತೆ ಎಂದರು.

1994 ರಿಂದ ಇಡೀ ಜಗತ್ತಿನ ಜನರು ಹರ್ಬಲ್ ಔಷಧಗಳ ಬಗ್ಗೆ ಒಲವು ತೋರುತ್ತಿದ್ದಾರೆ.ವರ್ಲ್ಡ್‌ ಹೆಲ್ತ್ ಆರ್ಗನೈಸೇಶನ್(W.H.O.) ಅವರ ಮಾಹಿತಿ ಪ್ರಕಾರ 2010 ಇಸ್ವಿಯ ಹೊತ್ತಿಗೆ 180 ಬಿಲಿಯನ್ ಡಾಲರ್ ಮೊತ್ತದ ಆಯುರ್ವೇದ ಔಷಧಗಳು  ಮಾರಾಟವಾಗಿವೆ.

2050 ನೇ ಇಸ್ವಿಯ ಹೊತ್ತಿಗೆ 5 ಟ್ರಿಲಿಯನ್ ಡಾಲರ್ ಆಯುರ್ವೇದ ಔಷಧಗಳು ಮಾರಾಟವಾಗಲಿವೆ ಎಂದು W.H.O.ಅಂದಾಜಿಸಿದೆ.ಇಂತಹ ಸಂಧರ್ಭದಲ್ಲಿ ಭಾರತೀಯರಾದ ನಾವು ಆಯುರ್ವೇದ ವೈದ್ಯ ಪದ್ದತಿಯನ್ನು ಕಡೆಗಣಿಸಿದರೆ ಹೇಗೆ ಎಂದು ಪ್ರಶ್ನಿಸಿದರು.

ಜಗತ್ತಿಗೆ ಜ್ಞಾನ ನೀಡಿದವರು,ನೀಡುವವರು ಭಾರತೀಯರು.ಆದರೆ ಜಗತ್ತಿನಲ್ಲಿನ ಅಜ್ಞಾನವನ್ನು ಕೊಳ್ಳುವವರೂ ಭಾರತೀಯರು ಎಂಬುದು ಸುಳ್ಳಲ್ಲ. ಭಾರತದಲ್ಲಿ ಇದ್ದಿಲು ಮತ್ತು  ಉಪ್ಪಿನಿಂದ ಹಲ್ಲುಜ್ಜುವುದನ್ನು ಅಸಹ್ಯವಾಗಿ ಕಂಡ ವಿದೇಶಿಯರು ಈಗ ಟೂಥ ಪೇಸ್ಟ ನಲ್ಲಿ ಉಪ್ಪು ಇದೆಯೇ ಎಂದು ಪ್ರಚಾರ ಮಾಡಿ , ಇದ್ದಿಲು ಇರುವ ಟೂಥ ಪೇಸ್ಟ್ ಮಾರಾಟ ಮಾಡುವ ಹಂತಕ್ಕೆ ಬಂದಿದ್ದಾರೆ. 

ಬಾಯಿಯಲ್ಲಿನ ಬ್ಯಾಕ್ಟೀರಿಯಾ ನಿರ್ಮೂಲ ಮಾಡುತ್ತೇವೆ ಎಂದು ಪ್ರಚಾರ ಮಾಡುವ ಟೂಥ್ ಪೇಸ್ಟ್ ತಯಾರಕರು ಅದರಲ್ಲಿ ಕ್ರೀಮಿ ನಾಶಕ ಅಂಶಗಳನ್ನು ಸೇರಿಸಿದ್ದಾರೆ.ಆದ್ದರಿಂದ ಪೇಸ್ಟ್  ಹಾಗೂ ಬ್ರಷ್  ಬದಲಿಗೆ ಹಲ್ಲುಗಳನ್ನು ಪುಡಿಯಿಂದ ಬೆರಳಿನಿಂದ ತಿಕ್ಕಬೇಕು.

ಹಲ್ಲುಜ್ಜಲು ಆಯುರ್ವೇದ ಟೂಥ ಪೌಡರ್ ಬಳಸಬೇಕು. ಇದರಿಂದ ಹಲ್ಲುಗಳು ಆರೋಗ್ಯಕರವಾಗಿರುತ್ತವೆ ಮತ್ತು ವಸಡುಗಳಿಗೆ ಮಸಾಜ್ ಆಗುವುದರಿಂದ ಅವು ಗಟ್ಟಿಯಾಗುತ್ತವೆ ಎಂದರು.

ಮಕ್ಕಳ ಕೈಗೆ ಟೂಥ ಪೇಸ್ಟ್ ಕೊಡಬೇಡಿ,ತೊಂದರೆ ಯಾದರೆ Poison Control Board ಗೆ ಸಂಪರ್ಕಿಸಿ ಎಂದು ವಿದೇಶಿ ಟೂಥ ಪೇಸ್ಟ್ ಗಳ ಮೇಲೆ ಬರೆಯಲಾಗಿದೆ.ವಿಪರ್ಯಾಸವೆಂದರೆ ನಮ್ಮ ದೇಶದಲ್ಲಿ ಇಂತಹ ಸಂಸ್ಥೆಯಿಲ್ಲ.ಹಾಗಾದರೆ ಭಾರತೀಯರು ಯಾರನ್ನು ಸಂಪರ್ಕಿಸಬೇಕು ಎಂದು ಪ್ರಶ್ನೆ ಮಾಡಿದರು.

ತಮ್ಮ ಕಂಪನಿ ತಯಾರಿಸುವ ಆಹಾರ ಉತ್ಪನ್ನಗಳು ಕ್ಷೇಮಕರವಲ್ಲ ಎಂದು ನೆಸ್ಟ್ಲೆ ಕಂಪನಿ ಹೇಳಿಕೊಂಡರೂ ಅಂತಹ ಉತ್ಪನ್ನಗಳನ್ನು ಭಾರತೀಯರು ಸೇವಿಸುತ್ತಿರುವುದಕ್ಕೆ ಅವರು ವಿಷಾದ ವ್ಯಕ್ತಪಡಿಸಿದರು.

ಮಕ್ಕಳಿಗೆ ನೂಡಲ್ಸ್ ಕೊಡಬೇಡಿ.ಕೂಲ್ ಡ್ರಿಂಕ್ಸ್ ಕುಡಿಯಬೇಡಿ.ಇದರಿಂದ ದೇಹ ಹಾಳಾಗುವುದು ಅಲ್ಲದೆ ಸ್ವದೇಶಿ ಆಹಾರ ಪದ್ದತಿಗಳು,ಪಾನೀಯಗಳು ಮರೆಯಾಗುತ್ತವೆ ಎಂದು ಆತಂಕ ವ್ಯಕ್ತಪಡಿಸಿದರು. ಇಂತಹ ಉತ್ಪನ್ನಗಳನ್ನು ವಿದ್ಯಾವಂತರೆ ಸೇವಿಸುತ್ತಿರುವುದು ಕಂಡು ಬಂದಿದೆ.ಇದು ನಿಲ್ಲ ಬೇಕು.ಈ ಬಗ್ಗೆ ಜಾಗ್ರತೆ ಉಂಟಾಗಬೇಕು,ಈ ನಿಟ್ಟಿನಲ್ಲಿ ಕಾರ್ಯನಿರ್ವಹಿಸಿ ಎಂದು ಔಷಧ ವ್ಯಾಪಾರಿಗಳಿಗೆ ಕರೆ ನೀಡಿದರು.

About The Author

Leave a Reply