December 23, 2024
IMG-20211001-WA0002

ಬೆಂಗಳೂರು-ಗಂಗಾವತಿ ಟ್ರೇನ್ : ಚೇಂಬರ್ ಆಫ಼್ ಕಾಮರ್ಸ ನಿಂದ ರೇಲ್ವೆ ಮ್ಯಾನೇಜರ್ ಗೆ ಮನವಿ

ಗಂಗಾವತಿ:ಬೆಂಗಳೂರು-ಹೊಸಪೇಟೆ ನಡುವೆ ಸಂಚರಿಸುತ್ತಿರುವ ರೇಲ್ವೆಯನ್ನು ಗಂಗಾವತಿ ನಗರದವರೆಗೂ ವಿಸ್ತರಿಸಬೇಕೆಂದು ನೈರುತ್ಯ ರೈಲ್ವೆಯ ಹುಬ್ಬಳ್ಳಿ ವಿಭಾಗದ, ವಿಭಾಗಿಯ ಮ್ಯಾನೇಜರ್ ಗೆ ಕೊಪ್ಪಳ ಜಿಲ್ಲಾ ಚೇಂಬರ್ ಆಫ್ ಕಾಮರ್ಸ & ಇಂಡಸ್ಟ್ರಿ ಈ ಸಂಸ್ಥೆಯ ವತಿಯಿಂದ  ಮೌಖಿಕವಾಗಿ ಮನವಿ ಮಾಡಲಾಯಿತು.

ಶುಕ್ರವಾರ ಗಂಗಾವತಿ ನಗರದ ರೇಲ್ವೆ ಸ್ಟೇಷನ್ ಗೆ ಆಗಮಿಸಿದ್ದ ಅಧಿಕಾರಿಗಳಿಗೆ ಈ ಮನವಿ ಮಾಡಿದ ಸಂಸ್ಥೆಯ ಅದ್ಯಕ್ಷ ಅಶೋಕಸ್ವಾಮಿ ಹೇರೂರ ಗಂಗಾವತಿ-ದರೋಜಿ ಹೊಸ ಬ್ರಾಡ್ ಗೇಜ್ ರೇಲ್ವೆ ಲೈನ್ ಮಾರ್ಗದ ಕಾಮಗಾರಿ ಆರಂಭಿಸಲು ಲಿಖಿತ ಮನವಿ ನೀಡಿದರು.

ಮನವಿಗೆ ಸ್ಪಂದಿಸಿದ ಅಧಿಕಾರಿಗಳು ಈ ಬಗ್ಗೆ ಮೇಲಾಧಿಕಾರಿಗಳಿಗೆ ವರದಿ ಸಲ್ಲಿಸುವುದಾಗಿ ಹೇಳಿದರು.ಈ ಸಂಧರ್ಭದಲ್ಲಿ ಉದ್ಯಮಿಗಳಾದ ಶ್ರೀನಿವಾಸ ನೆಕ್ಕ೦ಟಿ,ಮುಷ್ಟಿ ವಿರುಪಾಕ್ಷಪ್ಪ , ನಾಗರಾಜ ಸ್ವಾಮಿ ಸಿದ್ರಾಂಪೂರ ಮಠ ಮತ್ತಿತರರು ಹಾಜರಿದ್ದರು.

About The Author

Leave a Reply