

ಹಣ್ಣು ಕತ್ತರಿಸಿ,ವಿನೂತನ ರೀತಿ ಹುಟ್ಟು ಹಬ್ಬ ಆಚರಿಸಿಕೊಂಡ ಅಶೋಕಸ್ವಾಮಿ ಹೇರೂರ.
ಗಂಗಾವತಿ: ಕರ್ನಾಟಕ ರಾಜ್ಯ ಔಷಧ ತಜ್ಞರ ಸಂಘದ ಅದ್ಯಕ್ಷ ಮತ್ತು ಸುವರ್ಣ ಕರ್ನಾಟಕ ಔಷಧ ವ್ಯಾಪಾರಿಗಳ ಮತ್ತು ವಿತರಕರ ಸಂಘದ ರಾಜ್ಯ ಉಪಾದ್ಯಕ್ಷ ಅಶೋಕಸ್ವಾಮಿ ಹೇರೂರ ಸೇಬು ಹಣ್ಣು ಕತ್ತರಿಸುವ ಮೂಲಕ ವಿನೂತನ ರೀತಿಯಲ್ಲಿ ತಮ್ಮ 57 ನೇ ಹುಟ್ಟು ಹಬ್ಬವನ್ನು ಬುಧುವಾರ ಆಚರಿಸಿಕೊಂಡರು.
ತಮ್ಮ ಹುಟ್ಟು ಹಬ್ಬದಂದು ವಿಶ್ವ ಫ಼ಾರ್ಮಸಿಸ್ಟ ದಿನಾಚರಣೆಯನ್ನು ನಗರದ ಭಾರತೀಯ ವೈದ್ಯಕೀಯ ಭವನ (ಐ.ಎಮ್.ಎ.)ದಲ್ಲಿ ಹಮ್ಮಿಕೊಂಡಿದ್ದರು.
ಕೇಕ್ ನಲ್ಲಿ ಬಣ್ಣ , ಸುವಾಸನೆಗಾಗಿ ಬೆರೆಸುವ ಕೃತಕ ರಾಸಾಯನಿಕ ಅಂಶ,ಕ್ರೀಮನಲ್ಲಿ ವಿಷಪೂರಿತ ಅಂಶಗಳು ಇರುವುದರಿಂದ ದಿನಾಂಕ 29 ರಂದೇ ಜನ್ಮದಿನ ಹೊಂದಿರುವ ಗಂಗಾವತಿ ಸೇ೦ಟ್ ಫ಼ಾಲ್ಸ್ ಫ಼ಾರ್ಮಸಿ ಕಾಲೇಜ್ ಪ್ರಿನ್ಸಿಪಾಲ್ ಮಂಜುನಾಥ ಹಿರೇಮಠ ಬೂದಗುಂಪಾ ಮತ್ತು ಫ಼ಾರ್ಮಸಿಸ್ಟ ವೀರೇಂದ್ರ ಅವರೊಂದಿಗೆ ಕೇಕ್ ಬದಲಾಗಿ ಸೇಬು ಹಣ್ಣು ಕತ್ತರಿಸಿ ಜನ್ಮ ದಿನ ಆಚರಿಸಿಕೊಂಡರು.
ಜಿಲ್ಲೆಯ ಫ಼ಾರ್ಮಸಿಸ್ಟ ಮತ್ತು ಔಷಧ ವ್ಯಾಪಾರಿಗಳು ಭಾಗವಹಿಸಿದ ಕಾರ್ಯಕ್ರಮದ ವೇದಿಕೆಯ ಮೇಲೆ ಕರ್ನಾಟಕ ರಾಜ್ಯದ ಫ಼ಾರ್ಮಸಿ ಕೌನ್ಸಿಲ್ ಅದ್ಯಕ್ಷ ಗಂಗಾಧರ ವಿ.ಯಾವಗಲ್, ಔಷಧ ಮತ್ತು ಪರಿಸರ ವಿಜ್ಞಾನಿ ಡಾ.ಶ್ರೀಶೈಲ ಎಮ್.ಬದಾಮಿ,ನ್ಯಾಯವಾದಿ ಸಂದ್ಯಾ ಪಾರ್ವತಿ ಹೇರೂರ,ಸಮಾಜ ಸೇವಕಿ ಶೈಲಜಾ ಹಿರೇಮಠ, ನಗರ ಸಭಾ ಸದಸ್ಯ ಮನೋಹರಸ್ವಾಮಿ ಮುದೇನೂರ ಹೀರೆಮಠ, ಫ಼ಾರ್ಮಸಿಸ್ಟಗಳಾದ ಹನುಮರೆಡ್ಡಿ ಮಾಲಿ ಪಾಟೀಲ್, ಪಾಂಡುರಂಗ ಕನಕಗಿರಿ,
ರಾಜಶೇಖರ ಕರಮುಡಿ, ಶರಣಪ್ಪ ಬೆಟಗೇರಿ,ರಾಜಶೇಖರ ಪಾಟೀಲ ಹಲಗೇರಿ, ಚಂದ್ರಶೇಖರಯ್ಯ ಹೇರೂರ,ವೀರಣ್ಣ ಕಾರಂಜಿ,ಅಶೋಕ ಕುಮಾರ ಕಾರಟಗಿ, ಟಿ.ಮಲ್ಲಿಕಾರ್ಜುನ ಬಳ್ಳಾರಿ, ಚೋರನೂರು ಮಂಜುನಾಥ ಹೊಸಪೇಟೆ, ಫ಼ಾರ್ಮಸಿ ಉಪನ್ಯಾಸಕರಾದ ಜಡಿಸ್ವಾಮಿ ದಾಸನಾಳ ಮತ್ತು ಆಬೀದ್ ಹುಸೈನ್ ಮುಂತಾದವರು ಉಪಸ್ಥಿತರಿದ್ದರು.