July 13, 2025
1002485195

ಗಂಗಾವತಿ: ಔಷಧ ಮಾರಾಟ ಪರವಾನಿಗೆ ಇಲ್ಲದೆ, ಅಲೋಪತಿ ಔಷಧಗಳನ್ನು ದಾಸ್ತಾನು ಮಾಡಿದ್ದ ನಕಲಿ  ವೈಧ್ಯನಿಗೆ ನ್ಯಾಯಾಲಯದಲ್ಲಿ ಒಟ್ಟು ಒಂದು ಲಕ್ಷ ಮೂವತ್ತು ಸಾವಿರ ರೂಪಾಯಿಗಳ ದಂಡ ಮತ್ತು ಒಂದು ದಿನದ ಜೈಲು ಶಿಕ್ಷೆಯನ್ನು ಇಲ್ಲಿಯ ಸಿವಿಲ್ ನ್ಯಾಯಾಧೀಶರು ಮತ್ತು ಜೆ.ಎಮ್.ಎಫ಼್.ಸಿ ಗಂಗಾವತಿ ಇವರು ಆದೇಶಿಸಿದ್ದಾರೆ.

ನಾಗಪ್ಪ ಗ್ಯಾನಪ್ಪ ಚಳ್ಳೂರು, ಮನೆ. ನಂ. 132 ನಂ.28 ಮತ್ತು 29, ಡಬ್ಲ್ಯೂ.ನಂ.1, ಸರ್ಕಾರಿ ಪ್ರೌಢಶಾಲೆ ಹತ್ತಿರ, ಕೆಸರಹಟ್ಟಿ ಈ ಆರೋಪಿಯ ಮೇಲೆ ಸಿ.ಸಿ. ನಂಬರ್

1222/24,ಎಫ಼್.ಆರ್. ಸಂಖ್ಯೆ: P.C.R/31/2024 ಹಾಗೂ ನೋಂದಣಿ ಸಂಖ್ಯೆ: ಪಿ.ಸಿ.ಆರ್./63/2024 ಪ್ರಕಾರ ವೆಂಕಟೇಶ ರಾಠೊಡ ಸಹಾಯಕ ಔಷಧ ನಿಯಂತ್ರಕರು,ಕೊಪ್ಪಳ ಇವರು ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು.

ಕ್ರಿಮಿನಲ್ ಪ್ರೊಸೀಜರ್ ಕೋಡ್, 1973 ಅಂಡರ್ ಸೆಕ್ಷನ್ 200 ರ ಪ್ರಕಾರ ಡ್ರಗ್ಸ್ ಮತ್ತು ಕಾಸ್ಮೆಟಿಕ್ಸ್ ಆಕ್ಟ್. 18(ಸಿ),18-ಆಂಡ್ 22(1)(ಸಿಸಿಎ) ಪ್ರಕಾರ ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿತ್ತು.

ಸೆಕ್ಷನ್ 27(ಬಿ)(ii), 28 ಮತ್ತು 22(3) ರ ಅಡಿಯಲ್ಲಿ ಶಿಕ್ಷಾರ್ಹವಾಗಿರುವ ಡ್ರಗ್ಸ್ ಮತ್ತು ಕಾಸ್ಮೆಟಿಕ್ಸ್ ಆಕ್ಟ್, 1946 ರ ಸೆಕ್ಷನ್ 18(ಸಿ), 18-ಎ ಮತ್ತು 22(1) (ಸಿಸಿಎ) ಅಡಿಯಲ್ಲಿನ ಅಪರಾಧಕ್ಕಾಗಿ ಆರೋಪಿತ ವ್ಯಕ್ತಿಯ ವಿರುದ್ಧ ಸಂಜ್ಞೆ ತೆಗೆದುಕೊಳ್ಳುವಂತೆ ದೂರುದಾರರು  ನ್ಯಾಯಾಲಯದಲ್ಲಿ ಪ್ರಾರ್ಥಿಸಿದ್ದರು.

ಆರೋಪಿಯು ತಪ್ಪನ್ನು ಒಪ್ಪಿ ಕೊಂಡಿದ್ದರಿಂದ ಶ್ರೀದೇವಿ ಜೆ ದರಬಾರೆ,ಪ್ರಿನ್ಸಿಪಲ್ ಸಿ.ಜೆ ಮತ್ತು ಮತ್ತು ಜೆ.ಎಮ್.ಎಫ಼್.ಸಿ ಗಂಗಾವತಿ.ಇವರು ಆರೋಪಿಯ ತಪ್ಪೊಪ್ಪಿಗೆ ಮನವಿಯನ್ನು ಪರಿಗಣಿಸಿ, ಸಿ.ಆರ್.ಪಿ.ಸಿ.ಯ ಅಂಡರ್ ಸೆಕ್ಷನ್ 252 ರ ಪ್ರಕಾರ ಆರೋಪಿಗೆ ಶಿಕ್ಷೆ ವಿಧಿಸಿದ್ದಾರೆ.

ಡ್ರಗ್ಸ್ ಮತ್ತು ಕಾಸ್ಮೆಟಿಕ್ಸ್ ಆಕ್ಟ್ 1940 ಕಾಯಿದೆಯ ಅಡಿಯಲ್ಲಿ ಬರುವ 18(c) ಯ u/s 27(b)(ii) ಶಿಕ್ಷಾರ್ಹ ಅಪರಾಧಕ್ಕಾಗಿ ಒಂದು ಲಕ್ಷ ರೂಪಾಯಿ, ಅಂಡರ್ ಸೆಕ್ಷನ್ 18(A) ಅಂಡರ್ ಸೆಕ್ಷನ್ 28 ರ ಅಪರಾಧಕ್ಕಾಗಿ ರೂ. 25 ಸಾವಿರ ಮತ್ತು ಅಂಡರ್ ಸೆಕ್ಷನ್ 22(1) u/s 22(3) ಉಲ್ಲಂಘನೆಗಾಗಿ ರೂ.5000 ದಂಡ ವಿಧಿಸಿ,ನ್ಯಾಯಾಲಯದ ಅವಧಿ ಮುಗಿಯುವರೆಗಿನ ಸಮಯವನ್ನು ಒಂದು ದಿನದ ಜೈಲು ಎಂದು ತೀರ್ಪು ನೀಡಿದ್ದಾರೆ.

About The Author

Leave a Reply