May 14, 2025
1001678670

ಯಾವುದೇ ಘಟನೆ ನಡೆದರೂ,ಸಮಸ್ಯೆ ಬಂದರೂ ಕರ್ನಾಟಕದ ಔಷಧ ವ್ಯಾಪಾರಿಗಳ ಪ್ರತಿಕ್ರೀಯೆ ನೀರಸವಾಗಿರುತ್ತದೆ.ರಾಜ್ಯದ ಬಹುತೇಕ ಔಷಧ ವ್ಯಾಪಾರಿಗಳ ಮತ್ತು ರಿಜಿಸ್ಟರ್ಡ್ ಫ಼ಾರ್ಮಸಿಸ್ಟಗಳ ಸೆಲ್ ನಂಬರ್ ಗಳು ನನ್ನ  ಮೂರು ಫ಼ೋನ್ ಗಳಲ್ಲಿವೆ.ಈ ನಂಬರ್ ಗಳ ವ್ಯಾಟ್ಸಾಪ್ ಗ್ರೂಪ್ ಗಳನ್ನು ಸಹ ರಚಿಸಿದ್ದೇನೆ.ವ್ಯಾಟ್ಸಾಪ್ ನ ಅನೌನ್ಸ್ ಮಿಡಿಯಾ ವ್ಯವಸ್ಥೆಯಲ್ಲಿ ಬಹಳಷ್ಟು ಗ್ರೂಪ್ ಗಳನ್ನು ಅದರಲ್ಲಿ ಅಳವಡಿಸಿದ್ದೇನೆ.ಹೀಗಾಗಿ ವ್ಯಾಟ್ಸಾಪ್ ಮೆಸೇಜ್ ಕಳುಹಿಸುವುದು ಬಹಳ ಸರಳವಾಗಿದೆ.ಆದರೆ ಯಾವ ಮೆಸೇಜ್ ಗಳನ್ನು ಔಷಧ ವಾಪಾರಿಗಳು/ಫ಼ಾರ್ಮಸಿಸ್ಟಗಳು ಓದುವ,ನೋಡುವ ಕೆಲಸವನ್ನು  ಮಾಡುವುದೇ ಇಲ್ಲ.

ತಮಗೆ ಅವಶ್ಯಕತೆ ಇದ್ದಾಗ ಮಾಹಿತಿ ಕೇಳುತ್ತಾರೆ,ಆಗ ನಾವು ‘ಔಷಧೀಯ ವಾರ್ತೆ’ಯಲ್ಲಿ ಈ ಬಗ್ಗೆ ಪ್ರಕಟಿಸಿದ್ದೇವೆ ಎಂದರೆ ಪತ್ರಿಕೆ ನಮಗೆ ಬರುವುದಿಲ್ಲ ಎನ್ನುತ್ತಾರೆ.ಹಾಗಂತ ಪತ್ರಿಕೆಯನ್ನು ಪುಕ್ಕಟೆ ಕಳುಹಿಸಲಾದೀತೇ ? ವ್ಯಾಟ್ಸಾಪ್ ಗ್ರೂಪ್ ನಲ್ಲಿ ಹಾಕಿದ್ದೇವೆ ಎಂದು ಕೇಳಿದರೆ,ಇಲ್ಲ ನೋಡದೆ ಡಿಲಿಟ್ ಮಾಡಿದ್ದೇವೆ ಎನ್ನುತ್ತಾರೆ.

ಮೆಸೇಜ್ ನೋಡಿಲ್ಲ ,ಪತ್ರಿಕೆ ಓದಲ್ಲ ಎನ್ನುವವರು ಬದಲಾಗುವುದಾದರೂ ಹೇಗೆ ? ಔಷಧೀಯ ವಾರ್ತೆ ಪತ್ರಿಕೆಯ ಮಾತಿರಲಿ,ದಿನ ಪತ್ರಿಕೆಗಳನ್ನೂ ಬಹಳಷ್ಟು ಜನ ಓದುವುದಿಲ್ಲ ಎಂದರೆ ಹೇಗೆ ? ದೇಶದಲ್ಲಿ ನಡೆಯುವ ಸುದ್ದಿಗಳು ಇವರಿಗೆ ಬೇಡವೆ ? ಸಧ್ಯ ನಮಗಿರುವ ನೆಟ್ ವರ್ಕನಲ್ಲಿ ಔಷಧ ವ್ಯಾಪಾರಿಗಳಿಗೆ ಮತ್ತು ಫ಼ಾರ್ಮಸಿಸ್ಟಗಳಿಗೆ ಸರಿ ಸುಮಾರು 75 ಸಾವಿರ ಮಂದಿಗೆ ಮೆಸೇಜ್ ಗಳು ರವಾನೆಯಾಗುತ್ತವೆ.ಈ ಸಂಖ್ಯೆಯ 1% ಕೂಡ ನಮ್ಮ ಔಷಧೀಯ ವಾರ್ತೆ ಪತ್ರಿಕೆಗೆ ಚಂದಾದಾರರು ಆಗಿಲ್ಲ.ಇದೊಂದು ದೊಡ್ಡ ವಿಪರ್ಯಾಸ.

ಔಷಧ ವ್ಯಾಪಾರಿಗಳು ಜಾಗ್ರತರಾಗಲಿ ಎಂದು ವ್ಯಾಟ್ಸಾಪ್ ಗ್ರೂಪ್ ಗಳನ್ನು ರಚಿಸಿದ್ದರೂ ಅದನ್ನು ಓಪನ್ ಮಾಡದೇ ಡಿಲಿಟ್ ಮಾಡುತ್ತಾರೆಂದರೆ,ಇವರಿಗೆ ಏನು ಹೇಳಬೇಕು ? ಔಷಧೀಯ ವಾರ್ತೆ ಪತ್ರಿಕೆಯನ್ನು ಪಿ.ಡಿ.ಎಫ಼್.ಮೂಲಕ ಆನ್ ಲೈನ್ ನಲ್ಲಿ ಹಾಕಿದರೂ ಓದುವವರು ಬಹಳ ಕಡಿಮೆ.ಡಾಟಾ ಖರ್ಚಾಗುತ್ತದೆ ಎನ್ನುವ ಆತಂಕ ಅವರದ್ದು.ಸಭೆ-ಸಮಾರಂಭಗಳೆಂದರೆ, ದೂರ.ಪುಕ್ಕಟೆ ಅವೇರನೆಸ್ ನೀಡಿದರೂ ಔಷಧ ವ್ಯಾಪಾರಿಗಳಿಗೆ ಬೇಕಾಗಿಲ್ಲ.

ಮೈಸೂರ ನಿಂದ ತುಮಕೂರು ರಸ್ತೆಯಲ್ಲಿ ಬರುವ ಕಂಡ ಎಲ್ಲಾ ಔಷಧ ವ್ಯಾಪಾರಿಗಳನ್ನು ಭೇಟಿಯಾಗಿ ನಮ್ಮ  ಪತ್ರಿಕೆಗೆ ಚಂದಾದಾರರಾಗಲು ಕೋರಿದಾಗ ಆದ ಅನುಭವ ಹೇಳ ತೀರದು.ಇವರಿಗೆ ತಲೆಗೆ ‌ಮೊಳೆ ಹೊಡೆದಂತೆ ಲಂಚ ಕೇಳುವ ಅಧಿಕಾರಿಗಳೇ ಸೈ ! ನಮಗಿರುವ ಕನಿಷ್ಠ ಜ್ಞಾನದಿಂದ ಔಷಧ ವ್ಯಾಪಾರಿಗಳು ಗೌರವ ಕಳೆದು ಕೊಳ್ಳುತ್ತಿದ್ದೇವೆ.ನಾನು,ನನ್ನ ಮನೆ,ನನ್ನ ವ್ಯವಹಾರ ಎಂದರೆ ಹೇಗೆ ? ಸಮಾಜಕ್ಕೆ ನಮ್ಮದೂ ಎಂದು ಕೊಡುಗೆ ಏನಾದರೂ ಇರಬೇಕಲ್ಲ !

ನಾವು ಹೀಗೆ ಕೂಪ ಮಂಡೂಕಗಳಾದರೆ,ಚೈನ್ ಸ್ಟೊರ್ಸಗಳು ಹೆಚ್ಚಾಗದೆಯೇ ಇರುತ್ತವೆಯೆ ? ಕೆಲವೇ ಕೆಲವು ದಿನಗಳಲ್ಲಿ ಔಷಧ ಅಂಗಡಿ,ಆಸ್ಪತ್ರೆಗಳು ಮಲ್ಟಿ ಮಿನಿಯರ್ ಗಳ ಪಾಲಾಗುದರಲ್ಲಿ ಸಂಧೇಹವೇ ಇಲ್ಲ. ಸಭೆ,ಸಮಾರಂಭ,ಜಾಗ್ರತೆ ಎಲ್ಲಾ ಮಣ್ಣು-ಮಸಿ.ಲಂಚ ಕೊಡುವುದಿದೆ,ವ್ಯಾಪಾರ ಮಾಡುವುದಿದೆ ಅಲ್ಲವೆ ?

ಭಾಷಣ,ಪತ್ರಿಕೆ,ವ್ಯಾಟ್ಸಾಪ್ ಮೆಸೇಜ್ ಎಲ್ಲವೂ ವೇಸ್ಟ. ಔಷಧ ವ್ಯಾಪಾರಿಗಳಿಗೆ ಸಂಘಗಳೇ ಬೇಕಾಗಿಲ್ಲ. ಅಧಿಕಾರಿಗಳು ಕರೆದಾಗ ಸಭೆ,ಲಂಚ ಕೊಡುವಾಗ ಒಂದಿಷ್ಟು ಮಾತುಕತೆ.ಇಷ್ಟೇ ಔಷಧ ವ್ಯಾಪಾರಿಗಳ ಒಳ ವ್ಯವಹಾರ.

ಔಷಧ ವ್ಯಾಪಾರಿಗಳು ಬದಲಾಗುವುದೇ ಇಲ್ಲವೆಂದ ಮೇಲೆ ಇವರ ಪರ ಕಳ-ಕಳಿಯಿಂದ ಬರೆಯುವುದಾದರೂ ಏನನ್ನು ? ಔಷಧ ವ್ಯಾಪಾರಿಗಳನ್ನು ಅಟ್ಟಕ್ಕೇರಿಸಿ,ಅಧಿಕಾರಿಗಳ ಬಗ್ಗೆ ವಿರುದ್ಧವಾಗಿ ಬರೆದರೆ ಏನು ಪ್ರಯೋಜನವಾಗಿದೆ ? ಅವರವರು ಒಳ ಒಪ್ಪಂದ ಮಾಡಿಕೊಂಡ ಮೇಲೆ ಯಾವ ಪತ್ರಿಕೆ,ಯಾವ ಸಭೆ,ಸಮಾರಂಭಗಳಿಂದ ಏನು ಫ಼ಲ ? ಅಲ್ಲವೆ ?

ಔಷಧ ಗ್ರಾಹಕರ ಪರವಾಗಿ ಬರೆದರೆ,ಸಾರ್ವಜನಿಕರಿಗೆ ಒಂದಿಷ್ಟು ಸಹಾಯವಾದರೂ ಆದೀತು ! ಔಷಧೀಯ ವಾರ್ತೆ ಪತ್ರಿಕೆಯಲ್ಲಿ ಜನರು ಕೊಡುವ ದೂರುಗಳನ್ನು ಬರೆದರೆ ಸಾಕು,ಪತ್ರಿಕೆಗೆ ಒಳ್ಳೆಯ ಹೆಸರು ಬರುವುದರಲ್ಲಿ ಅನುಮಾನವಿಲ್ಲ.ಅಧಿಕಾರಿಗಳಿಗೂ ಒಂದಿಷ್ಟು ಕೆಲಸ ಕೊಟ್ಟಂತಾಗುತ್ತದೆ ! ಅಲ್ಲವೆ ? ಕಳೆದ 25 ವರ್ಷಗಳಿಂದ ಔಷಧ ವ್ಯಾಪಾರಿಗಳ ಬಗ್ಗೆ ಬರೆದಿದ್ದರಿಂದ ಏನೂ ಬದಲಾಗಿಲ್ಲ.ಅದರ ಬದಲು ಔಷಧ ನಿಯಂತ್ರಣ ಇಲಾಖೆಯಿಂದ ಎರಡು ಕೇಸ್ ಹಾಕಿಸಿಕೊಂಡು 20 ವರ್ಷ ಕೋರ್ಟಗೆ ಅಲೆದಾಡಿದ್ದೇನೆ.ಈ ಎಲ್ಲಾ ಅನುಭವಗಳಿಂದ ಮುಂದಿನ ದಿನಗಳಲ್ಲಿ ಯಾವ ನಿರ್ಣಯ ತೆಗೆದುಕೊಳ್ಳಬೇಕಾಗಬಹುದು ನೋಡೋಣ.

-ಅಶೋಕಸ್ವಾಮಿ ಹೇರೂರ.

About The Author

Leave a Reply