

ಬಳ್ಳಾರಿಯ ಬಾಣಂತಿಯರ ಸರಣಿ ಸಾವಿನ ಘಟನೆಯ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ಔಷಧ ನಿಯಂತ್ರಣ ಇಲಾಖೆಯ ಅಪರ ಔಷಧ ನಿಯಂತ್ರಕರು ಮತ್ತು ಪ್ರಭಾರ ರಾಜ್ಯ ಔಷಧ ನಿಯಂತ್ರಕರಾಗಿದ್ದ ಉಮೇಶ್ ಎಸ್.ಅವರನ್ನು ಸರಕಾರ ಅಮಾನತ್ತು ಗೊಳಿಸಿತ್ತು.
ಡಾ: ಉಮೇಶ್ ಎಸ್, ಅಪರ ಔಷಧ ನಿಯಂತ್ರಕರು ಹಾಗೂ ಔಷಧ ನಿಯಂತ್ರಕರು (ಪ್ರಭಾರ) ಇವರನ್ನು ಅಮಾನತ್ತಿನಿಂದ ತೆರವುಗೊಳಿಸಿ ಸೇವೆಗೆ ಪುನರ್ ಸ್ಥಾಪಿಸಲಾಗಿದೆ.
1. ಸರ್ಕಾರದ ಆದೇಶ ಸಂಖ್ಯೆ: ಆಕುಕ 301 ಪಿಟಿಡಿ 2024, ದಿನಾಂಕ:02.12.2024.
2. ಡಾ: ಉಮೇಶ್ ಎಸ್. ಇವರ ಮನವಿ ದಿನಾಂಕ:03.01.2025.
3. ಆಯುಕ್ತರು, ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇವರ ಪತ್ರ :/5/໕໖໐໖/2024-25, 20:06.02.2025.
ಕ್ರ. ಸಂ. (1)ರ ಸರ್ಕಾರದ ಆದೇಶದಲ್ಲಿ ಡಾ.ಉಮೇಶ್ ಎಸ್, ಅಪರ ಔಷಧ ನಿಯಂತ್ರಕರು,ಹಿಂದಿನ ಔಷಧ ನಿಯಂತ್ರಕರು(ಪ್ರಭಾರ), ರಾಜ್ಯ ಔಷಧ ನಿಯಂತ್ರಣ ಇಲಾಖೆ ಇವರ ವಿರುದ್ಧದ ಕರ್ತವ್ಯ ಲೋಪದ ಆರೋಪಗಳಿಗೆ ಸಂಬಂಧಿಸಿದಂತೆ ಇಲಾಖಾ ವಿಚಾರಣೆ ಕಾಯ್ದಿರಿಸಿ, ತಕ್ಷಣದಿಂದ ಜಾರಿಗೆ ಬರುವಂತೆ ಇವರನ್ನು ಸರ್ಕಾರಿ ಸೇವೆಯಿಂದ ಅಮಾನತ್ತುಗೊಳಿಸಿ ಆದೇಶಿಸಲಾಗಿತ್ತು.
ಕ್ರ.ಸಂ. (2)ರ ಮನವಿಯಲ್ಲಿ ಡಾ: ಉಮೇಶ್ ಎಸ್ . ರವರು ಅಪರ ಔಷಧ ನಿಯಂತ್ರಕರು ಹಾಗೂ ಹಿಂದಿನ ಔಷಧ ನಿಯಂತ್ರಕರು (ಪ್ರಭಾರ) ಪ್ರಸ್ತುತ ಅಮಾನತ್ತಿನಲ್ಲಿರುವವರು ದಿನಾಂಕ: 01.8.2024ರಿಂದ ಔಷಧ ನಿಯಂತ್ರಕರ ಹುದ್ದೆಯ ಪ್ರಭಾರವನ್ನು ವಹಿಸಿಕೊಂಡು ದಕ್ಷತೆಯಿಂದ ಮತ್ತು ಶ್ರದ್ಧೆಯಿಂದ ಕಾರ್ಯನಿರ್ವಹಿಸಿರುತ್ತೇನೆ.ದಿನಾಂಕ: 02.12.2024ರ ಅಮಾನತ್ತು ಆದೇಶದಲ್ಲಿ ನನ್ನ ವಿರುದ್ಧ ಮಾಡಿರುವ ಆರೋಪಗಳಂತೆ ನಾನು ಯಾವುದೇ ಕರ್ತವ್ಯ ಲೋಪ ನಿರ್ಲಕ್ಷ್ಯತನ ಎಸಗಿರುವುದಿಲ್ಲ ಮತ್ತು ಉದಾಸೀನತೆ ತೋರಿರುವುದಿಲ್ಲವಾದ್ದರಿಂದ, ಆರೋಪಗಳನ್ನು ಕೈಬಿಡುವಂತೆ ಹಾಗೂ ದಿನಾಂಕ: 02.12.2024ರ ಅಮಾನತ್ತು ಆದೇಶವನ್ನು ಹಿಂಪಡೆದು ನನ್ನನ್ನು ಸೇವೆಗೆ ಪುನರ್ ಸ್ಥಾಪಿಸಿ ಈ ಹಿಂದೆ ನಾನು ನಿರ್ವಹಿಸುತ್ತಿದ್ದ ಹುದ್ದೆಗಳಲ್ಲಿ ಮುಂದುವರೆಸಿ, ಎಲ್ಲಾ ಸೇವಾ ಸೌಲಭ್ಯಗಳನ್ನು ವಿಸ್ತರಿಸಿ ಅಮಾನತ್ತು ಅವಧಿಯನ್ನು ಕರ್ತವ್ಯದ ಅವಧಿಯೆಂದು ಪರಿಗಣಿಸುವಂತೆ ಕೋರಿದ್ದರು.
ಕ್ರ. ಸಂ. (3)ರ ಪತ್ರದಲ್ಲಿ ಆಯುಕ್ತರು,ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆ ಇವರು ಇಲಾಖೆಯಲ್ಲಿ ಅಪರ ಔಷಧ ನಿಯಂತ್ರಕರ ಹುದ್ದೆ 01 ಮಾತ್ರ ಮಂಜೂರಾಗಿರುವುದರಿಂದಡಾ: ಉಮೇಶ್ ಎಸ್. ರವರನ್ನು ಅಪರ ಔಷಧ ನಿಯಂತ್ರಕರ ಹುದ್ದೆಗೆ ಪುನರ್ ಸ್ಥಾಪಿಸಬಹುದಾಗಿದೆ ಎಂಬ ಅಭಿಪ್ರಾಯದೊಂದಿಗೆ ವರದಿಯನ್ನು ಸಲ್ಲಿಸಿರುತ್ತಾರೆ.
ಮೇಲಿನ ಅಂಶಗಳ ಹಿನ್ನಲೆಯಲ್ಲಿ ಹಾಗೂ ಲಭ್ಯವಿರುವ ಅಗತ್ಯ ದಾಖಲೆಗಳನ್ನು ಕೂಲಂಕಷವಾಗಿ ಪರಿಶೀಲಿಸಿದ ಸರ್ಕಾರವು ಈ ಕೆಳಕಂಡಂತೆ ಆದೇಶಿಸಿದೆ.
ಸರ್ಕಾರದ ಆದೇಶ ಸಂಖ್ಯೆ: ಆಕುಕ 301 ಪಿಟಿಡಿ 2024, ಬೆಂಗಳೂರು, ໖:05.03.2025.
ಅಮಾನತ್ತಿನಲ್ಲಿರುವ ಡಾ: ಉಮೇಶ್ ಎಸ್. ಅಪರ ಔಷಧ ನಿಯಂತ್ರಕರು ಇವರ ವಿರುದ್ಧದ ಆರೋಪಗಳಿಗೆ ಸಂಬಂಧಿಸಿದಂತೆ ಶಿಸ್ತು ಕ್ರಮ ಬಾಕಿಯಿರಿಸಿ ಸದರಿಯವರ ಅಮಾನತ್ತನ್ನು ತೆರವುಗೊಳಿಸಿ, ಇವರನ್ನು ಸೇವೆಗೆ ಪುನರ್ ಸ್ಥಾಪಿಸಿ ಅಪರ ಔಷಧ ನಿಯಂತ್ರಕರು, ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆ, ಬೆಂಗಳೂರು ಈ ಹುದ್ದೆಗೆ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಸ್ಥಳನಿಯುಕ್ತಿಗೊಳಿಸಿ ಆದೇಶಿಸಿದೆ.