

ಮಾಡುತ್ತದೆ.ವೀರ್ಯ ಕೋಶವು ಅಂಡಾಣುವನ್ನು ಫಲವತ್ತಾಗಿಸಿದರೆ ಅದು ಝೈಗೋಟ್ ಎಂಬ ಹೊಸ ಕೋಶವಾಗಿ ಬೆಳೆಯುತ್ತದೆ.ಈ ಕೋಶವೇ ಮಗುವಾಗಿ ರೂಪಗೊಳ್ಳುತ್ತದೆ.
ಮಕ್ಕಳು ಬೇಕೆನ್ನುವ ನವ ದಂಪತಿಗಳು ಉತ್ತಮ ಆಹಾರ,ಉಲ್ಲಾಸಕರ ಮನಸ್ಸು ಹೊಂದಿರಬೇಕು. ಯಾವುದೇ ಆತಂಕ, ಮುಜುಗರವಿಲ್ಲದೇ ಬೆರೆಯಬೇಕು.
ಲೈಂಗಿಕ ಶಕ್ತಿಗೆ ನಾವು ಸೇವಿಸುವ ಆಹಾರ ಬಹಳ ಮುಖ್ಯ.ಅಂತಹ ಆಹಾರವನ್ನು ಪ್ರತಿದಿನ ಸೇವಿಸುವುದು ಅವಶ್ಯ.
ಅಮೇರಿಕಾದಂತಹ ದೇಶಗಳಲ್ಲಿ ನೈಸರ್ಗಿಕ ರೀತಿಯಲ್ಲಿ ಹೆರಿಗೆಯನ್ನು ಮಾಡಿಸಲಾಗುತ್ತದೆ.ಗರ್ಭಿಣಿಯರಿಗೆ ಯಾವುದೇ ಶಕ್ತಿದಾಯಕ ಔಷಧಗಳನ್ನು ನೀಡುವುದಿಲ್ಲ.
ಇದರಿಂದ ಮಗು ಅನಾವಶ್ಯಕವಾಗಿ ಬೆಳವಣಿಗೆಯಾಗುವುದಿಲ್ಲ.ಇದರಿಂದ ಸರಳ ಹಾಗೂ ಸಹಜ ಹೆರಿಗೆಯಾಗುತ್ತದೆ.ಆದರೆ ನಮ್ಮಲ್ಲಿ ಎಲ್ಲವೂ ಉಲ್ಟಾ. ಗರ್ಭಿಣಿಯರಲ್ಲಿ ಮಗು ಬೆಳೆಯಲು ವಿಪರೀತ ಸಪ್ಲಿಮೆ೦ಟ್ಸ್ ಗಳನ್ನು ನೀಡುತ್ತಾರೆ.ನಂತರ ಪ್ರಸವಕ್ಕೆ ತೊಂದರೆಯಾದಾಗ ಸೀಸರಿಯನ್ ಮಾಡಿ,ಕೂಸನ್ನು ಹೊರ ತೆಗೆಯುತ್ತಾರೆ.ಮಹಿಳೆಯರು ನೋವಿಲ್ಲದ ಹೆರಿಗೆಯನ್ನು ಬಯಸುತ್ತಾರೆ.ಆದರೆ ಹುಟ್ಟುವ ಮಗು ಯೋನಿಯಿಂದ ಬಂದರೆ ಮಾತ್ರ ಒಳ್ಳೆಯದು ಎಂಬುದನ್ನು ವೈದ್ಯರು ಹೇಳುವುದಿಲ್ಲ ,ಪತಿ-ಪತ್ನಿಯರು ಕೇಳುವುದಿಲ್ಲ ,ಎಲ್ಲಾ ಅನೈಸರ್ಗಿಕ.
ಪ್ರಸ್ತುತ,ಅಸಮರ್ಪಕ ವಿಧಾನಗಳದ್ದೇ ಪಾರುಪತ್ಯ. ಮದುವೆಯಾದ ಕೂಡಲೇ ಆರಂಭವಾಗುವ ವೈದ್ಯರ ಚಿಕಿತ್ಸೆ ,ಮಕ್ಕಳಾಗುವವರೆಗೂ ಮುಂದುವರೆದಿರುತ್ತದೆ. ಮಕ್ಕಳಾಗುವ ಬಗ್ಗೆ ಅನುಮಾನ, ಪ್ರಸವವಾಗುವವರೆಗೂ ಆತಂಕ.ಪ್ರಸವ ಆದ ನಂತರವೂ ಮಗುವಿನ ಲಾಲನೆ,ಪಾಲನೆಯ ಬಗ್ಗೆಯೂ ಸಮಯವಿಲ್ಲ.ಇಂತಹ ಹಲವಾರು ಒತ್ತಡಗಳು ಲೈಂಗಿಕ ನಿರಾಸಕ್ತಿಗೆ ಕಾರಣವಾಗುತ್ತಿವೆ.ಅದಕ್ಕಾಗಿ ಜೀವನ ಪದ್ದತಿಯನ್ನು ಬದಲಿಸಿಕೊಳ್ಳುವುದು ಮುಖ್ಯ.
-ಅಶೋಕಸ್ವಾಮಿ ಹೇರೂರ
ಔಷಧ ತಜ್ಞರು ಮತ್ತು ವಕೀಲರು.