May 14, 2025
1002224007

ಮಹಾರಾಷ್ಟ್ರದ ಬುಲ್ದಾನಾ ಜಿಲ್ಲೆಯ 18 ಹಳ್ಳಿಗರ ಜನರಲ್ಲಿ ಹಠಾತ್ ಕೂದಲು ಉದುರುವಿಕೆಗೆ ಪಂಜಾಬ್ ಮತ್ತು ಹರ್ಯಾಣದಿಂದ ಆಮದಾದ ರೇಷನ್ ನಲ್ಲಿ ವಿತರಿಸಲಾದ ಗೋಧಿಯಲ್ಲಿರುವ ಸೆಲೆನಿಯಂ ಅಂಶ ಕಾರಣ ಎಂಬ ಅಚ್ಚರಿಯ ವಿಷಯ ಬೆಳಕಿಗೆ ಬಂದಿದೆ.

ಸೆಲೆನಿಯಂ ಅಂಶ ಚಯಾಪಚಯ ಕ್ರಿಯೆಯ ಮೇಲೆ ವ್ಯತಿರಿಕ್ತ ಪರಿಣಾಮ ಉಂಟುಮಾಡುತ್ತದೆ.2024 ರ ಡಿಸೆಂಬರ್‌ನಿಂದ ಜನವರಿಯ ಅವಧಿಯಲ್ಲಿ ಬುಲ್ದಾನಾ ಜಿಲ್ಲೆಯ 18 ಹಳ್ಳಿಗಳ 279 ಜನರಲ್ಲಿ ದಿಢೀರ್‌ ಕೂದಲು ಉದುರುವಿಕೆ ಸಮಸ್ಯೆ ಶುರುವಾಗಿತ್ತು.ಯುವಕರು, ಯುವತಿಯರು ಎನ್ನದೆ ಎಲ್ಲರ ಕೂದಲೂ ಉದುರಿದ್ದವು.ಇದರ ಮೂಲ ಹುಡುಕಿದ ತಜ್ಞರು ಗೋದಿಯಲ್ಲಿನ ಸೆಲೆನಿಯಂ ಅಂಶವೇ ಇದಕ್ಕೆ ಕಾರಣ ಎಂದು ಹೇಳಿದ್ದಾರೆ.

ರೇಷನ್ ಗೆ ಸರಬರಾಜು ಆದ ಪಂಜಾಬ್ ಮತ್ತು ಹರ್ಯಾಣದ ಗೋದಿ ಮಾತ್ರ ಇದಕ್ಕೆ ಕಾರಣವಾ ? ಅಥವಾ ಇತರ ಕಡೆಗಳಿಂದಲೂ ಸರಬರಾಜು ಆದ ಗೋದಿಯಲ್ಲಿಯೂ ಸೆಲೆನಿಯಂ ಇದೆಯಾ ? ಎಂಬುದನ್ನು ಪರೀಕ್ಷಿಸಲಾಗಿಲ್ಲ.ಸಾಧಾರಣ ಗೋಧಿಯಿಂದಲೂ ಹಲವಾರು ತೊಂದರೆಗಳು ಸಂಭವಿಸುತ್ತವೆ.ಗೋಧಿ,ದೇಹದಲ್ಲಿನ ಇನ್ಸುಲಿನ್ ಬಿಡುಗಡೆಗೆ ಅಡಚಣೆಯನ್ನು ಉಂಟು ಮಾಡುತ್ತದೆ ಎಂದು ಹೇಳಲಾಗುತ್ತಿದೆ.ಅದಕ್ಕಾಗಿ ಸಕ್ಕರೆ ಖಾಯಿಲೆ ಇಲ್ಲದವರೂ,ಇದ್ದವರೂ ಗೋಧಿ ಸೇವನೆಯಿಂದ ದೂರ ಇರಬೇಕೆಂದು ತಜ್ಞರು ಎಚ್ಚರಿಸುತ್ತಲೇ ಬರುತ್ತಿದ್ದಾರೆ. ಸಕ್ಕರೆ ಖಾಯಿಲೆಗೆ ಈಡಾದವರಿಗೆ ಪಾಲೀಸ್ ಮಾಡಿಲ್ಲದ ಅಕ್ಕಿ ಸೇವನೆ ಒಳ್ಳೆಯದು ಎಂದು ಹೇಳಲಾಗುತ್ತಿದ್ದರೂ,ಹಲವು ವೈದ್ಯರು ರೋಗಿಗಳಿಗೆ ಗೋಧಿಯ ಆಹಾರಗಳನ್ನು ಸೇವಿಸಲು ಸೂಚಿಸುತ್ತಿರುವುದು ಪ್ರಶ್ನಾರ್ಹವಾದದ್ದು.

ಎರಡು ದಶಕಳ ಇತ್ತೀಚಿಗೆ ಗೋಧಿಯಿಂದಲೇ ತಯಾರಾದ ಆಹಾರಗಳು ತುಂಬಾ ಹೆಚ್ಚಾಗಿವೆ. ಇವುಗಳನ್ನು ಮಕ್ಕಳು,ಯುವಕರು ಅತಿಯಾಗಿ ಸೇವಿಸುತ್ತಿದ್ದಾರೆ.ಎಲ್ಲಾ ಹೋಟಲ್,ಬಾರ್ ಗಳಲ್ಲಿ ಗೋಧಿಯ ಉತ್ಪನ್ನಗಳದ್ದೇ ಹಾವಳಿ.ಅವು ರುಚಿಸಲಿ ಎಂದು ವಿವಿಧ ರೀತಿಯ ಕೆಮಿಲ್ ಗಳನ್ನು ಈ ಆಹಾರಕ್ಕೆ ಸೇರಿಸಲಾಗುತ್ತಿದೆ.ದಕ್ಷಿಣ ಭಾರತದಲ್ಲಿಯೂ,ಉತ್ತರ ಭಾರತದ ಶೈಲಿಯ ಆಹಾರವೇ ಪ್ರಮುಖ ಎನಿಸಿಬಿಟ್ಟಿದೆ.

ವಿದೇಶೀ ಪದ್ದತಿಯ ಆಹಾರಗಳು ಸಹ ಗೋಧಿಯ ಉತ್ಪನ್ನಗಳೇ ಆಗಿರುವುದರಿಂದ ಅವುಗಳ ಸೇವನೆಯಿಂದಾಗುವ ಅಡ್ಡ ಪರಿಣಾಮಗಳು ತುಂಬಾ ಜಾಸ್ತಿಯಾಗುತ್ತಿವೆ.ಪಿಜ್ಜಾ ,ಭರ್ಗರ್,ನೂಡಲ್ಸ್ ಗಳನ್ನು ಉಣಬಡಿಸುವ ದೊಡ್ಡ ದೊಡ್ಡ ಶೋರೂಮ್ ತರಹದ ಸೆಂಟರ್ ಗಳು ಕಾರ್ಯನಿರ್ವಹಿಸುತ್ತಿವೆ.ಬೇಕರಿ ಉತ್ಪನ್ನಗಳಲ್ಲಿ ಗೋಧಿಯದ್ದೇ ಸಿಂಹ ಪಾಲು.ಮಕ್ಕಳಿಂದ ಮುದುಕರವರೆಗೂ ಈ ಬೇಕರಿ ಆಹಾರಗಳು ಸೇವಿಸಲ್ಪಡುತ್ತವೆ.ಅವು ರುಚಿಕರವಾಗಿರಲೆಂದು ಕೆಮಿಕಲ್ ಸೇರಿಸುವುದರಿಂದ ಅವುಗಳ ದುಷ್ಪರಿಣಾಮಗಳಿಂದ ಕೂದಲು ಬೆಳ್ಳಗಾಗುವುದು, ಉದುರುವುದು,ಯುವತಿಯರ ಮುಖದ ಮೇಲೆ ಕೂದಲು ಬೆಳೆಯುವುದು,ಥೈರಾಯ್ಡ್ , ಮುಟ್ಟಿನ ದೋಷಗಳು,ಅಂಡಾಣುವಿನ ಉತ್ಪತ್ತಿಯಲ್ಲಿ ಅಡಚಣೆ, ಪುರುಷರಲ್ಲಿ ವೀರ್ಯಾಣುಗಳ ಕೊರತೆ ಹೀಗೆ ಹಲವು ಹತ್ತು ಸಮಸ್ಯೆಗಳು ಆರಂಭವಾಗುತ್ತಿವೆ.

ರೇಷನ್ ಗಳ ಮೂಲಕ ಸರಬರಾಜು ಆಗುವ ಅಕ್ಕಿಯಲ್ಲಿ ವಿಟಾಮಿನ್ ಗಳ ಕೊರತೆ ಇರುವುದರಿಂದ ವಿಟಾಮಿನ್ ಅಂಶ ಇರುವ ಕೃತಕ ಅಕ್ಕಿಗಳನ್ನು ಅದರಲ್ಲಿ ಸೇರಿಸಲಾಗುತ್ತಿದೆ.ಆದರೆ ಅವುಗಳನ್ನು ಪ್ಲಾಸ್ಟಿಕ್ ಅಕ್ಕಿ ಎಂದು ಜನ ಹೆಕ್ಕಿ ಬಿಸಾಡುತ್ತಿದ್ದಾರೆ.ಕೆಲವರು ಅದನ್ನು ಉಂಡೆ ಮಾಡಿ,ಅದು ಪ್ಲಾಸ್ಟಿಕ್ ಉಂಡೆ ಎಂದು ಸೊಸಿಯಲ್ ಮಿಡಿಯಾಗಳಲ್ಲಿ ರೀಲ್ಸ್ ಮಾಡಿದ್ದೂ ಉಂಟು.

ಬಹುತೇಕ ಆಹಾರ ಧಾನ್ಯಗಳು ರಾಸಾಯನಿಕ ಮತ್ತು ಕ್ರಿಮಿ ನಾಶಕಗಳನ್ನೇ ಅವಲಂಬಿಸಿರುವುದರಿಂದ, ಸುರಕ್ಷಿತ ಆಹಾರ ದೊರೆಯುವುದು ಅಪರೂಪ.ಹೀಗಾಗಿ ಆದಷ್ಟು ಗೋಧಿ,ಮೈದಾ,ಪಾಲೀಸ್ ಮಾಡಲಾದ ಅಕ್ಕಿ,  ಸಕ್ಕರೆ ಹಾಗೂ ಅವುಗಳಿಂದ ತಯಾರಿಸಲಾದ ಆಹಾರಗಳನ್ನು ಕಡಿಮೆ ಸೇವಿಸುವುದು ಅನಿವಾರ್ಯ.

ಭೂಮಿಯ ಒಳಗೆ ಬೆಳೆಯುವ ಗೆಣಸು,ಗಜ್ಜರಿ,ಈರುಳ್ಳಿ, ಮೂಲಂಗಿ,ಸೇಂಗಾ ಹಾಗೂ ಇಂತಹ ಆಹಾರಗಳ ಬಳಕೆ ಮಾಡುವುದು ಆರೋಗ್ಯಕ್ಕೆ ಒಳ್ಳೆಯದು.ಸುಲಿದು ತಿನ್ನಬಹುದಾದ ಹಣ್ಣುಗಳು ಸೇವನೆಗೆ ಉತ್ತಮ.ಆದಷ್ಟು ಜನರು ಆಹಾರ ಮತ್ತು ಅದರ ಉತ್ಪನ್ನಗಳ ಸೇವನೆಯಲ್ಲಿ ಎಚ್ಚರವಹಿಸುವುದು ತುಂಬಾ ಅಗತ್ಯ.

-ಅಶೋಕಸ್ವಾಮಿ ಹೇರೂರ

ಔಷಧ ತಜ್ಞರು ಮತ್ತು ವಕೀಲರು

About The Author

Leave a Reply