

ರಾಯಚೂರು:ಜಿಲ್ಲಾ ಔಷಧ ವ್ಯಾಪಾರಿಗಳ ಸಂಘದ ಪ್ರಧಾನ ಕಾರ್ಯದರ್ಶಿ ಜಿ.ಮುರುಘೇಂದ್ರ ಅವರ ಸತತ ಪ್ರಯತ್ನದಿಂದಾಗಿ ರಾಯಚೂರು ವೃತ್ತದ ಸಹಾಯಕ ಔಷಧ ನಿಯಂತ್ರಕರ ಕಚೇರಿ,ನೌಕರರ ಮತ್ತು ಡಿ.ದರ್ಜೆ ನೌಕರರ ಮನೆಗಳು ಉದ್ಘಾಟನೆ ಭಾಗ್ಯ ಕಾಣದೆ,ಹಾಳು ಬಿದ್ದಿವೆ.
ರಾಯಚೂರು ಶಾಸಕರ ಸಂಭಂದಿಯೊಬ್ಬರು,ಕಟ್ಟಡಗಳ ನಿರ್ಮಾಣ ಕೆಲಸವನ್ನು ನಿರ್ವಹಿಸಿದ್ದು , ಅವರಿಗೆ ಸರಕಾರದಿಂದ ಪೇಮೆಂಟ್ ಬಾಕಿ ಇದ್ದು ಅವರು ಕಟ್ಟಡಗಳ ಉದ್ಘಾಟನೆಗೆ ಸಹಕಾರ ನೀಡುತ್ತಿಲ್ಲ ಎಂದು ಹೇಳಲಾಗುತ್ತಿದೆ.
ಈ ಕಟ್ಟಡಗಳ ಉದ್ಘಾಟನೆಗೆ ಜನ ಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕಾಗಿದೆ. ಇಲ್ಲದಿದ್ದರೆ ಕಟ್ಟಡಗಳು ಹಾಳು ಬೀಳುವುದರಲ್ಲಿ ಸಂಶಯವಿಲ್ಲ.ಔಷಧ ವ್ಯಾಪಾರಿಗಳ ಸಂಘ ಮತ್ತು ಔಷಧ ನಿಯಂತ್ರಣ ಇಲಾಖೆಯವರು ಪಟ್ಟ ಪ್ರಯತ್ನ ವ್ಯರ್ಥವಾಗಬಾರದು,ಅದಕ್ಕಾಗಿ ಕೂಡಲೇ ಕಟ್ಟಡಗಳ ಉದ್ಘಾಟನೆ ನೆರವೇರಬೇಕಾಗಿದೆ.