

ರಾಯಚೂರು ವೃತ್ತದ ಸಹಾಯಕ ಔಷಧ ನಿಯಂತ್ರಕರ ಕಚೇರಿ (ಎ.ಡಿ.ಸಿ) ಬೆಂಕಿಗೆ ಆಹುತಿಯಾಗಿದ್ದು , ತಡವಾಗಿ ಬೆಳಕಿಗೆ ಬಂದಿದೆ.ದಿನಾಂಕ:13-01-2025 ರಂದು ಗುರುವಾರ ಬೆಳಿಗ್ಗೆ 7.30 ರ ಸಮಯಕ್ಕೆ ಕಚೇರಿಗೆ ಬೆಂಕಿ ತಗಲಿದ ಬಗ್ಗೆ ಪತ್ರಿಕೆಗೆ ಮಾಹಿತಿ ದೊರಕಿದೆ.
ಕಚೇರಿಗೆ ಬೆಂಕಿ ಹತ್ತಿದ ಸುದ್ದಿ ಮೊದಲು ಪರಿಚಾರಿಕೆಗೆ ತಲುಪಿದೆ.ಈ ಸುದ್ದಿ ತಿಳಿದ ರಾಯಚೂರು ಜಿಲ್ಲಾ ಔಷಧ ವ್ಯಾಪಾರಿಗಳ ಸಂಘದ ಪ್ರಧಾನ ಕಾರ್ಯದರ್ಶಿ ಜಿ.ಮುರುಘೇಂದ್ರ ಸ್ಥಳಕ್ಕೆ ಆಗಮಿಸಿ,ಅಗ್ನಿಶಾಮಕ ದಳಕ್ಕೆ ಫ಼ೋನ್ ಮಾಡಿದ್ದಾರೆ.ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದಾಗ ರಾಯಚೂರು ನಗರದಲ್ಲಿಯೇ ಇದ್ದ ಓರ್ವ ಎ.ಡಿ.ಸಿ.ಸ್ಥಳಕ್ಕೆ ಆಗಮಿಸಿದ್ದಾರೆ.ಮತ್ತೊಬ್ಬ ಎ.ಡಿ.ಸಿ.ಮತ್ತು ಕಚೇರಿಯ ಸುಪರಿಂಡೆ೦ಟ್ ಹೆಡ್ ಕ್ವಾರ್ಟರ್ ನಲ್ಲಿ ಇರಲಿಲ್ಲ ಎಂದು ತಿಳಿದು ಬಂದಿದೆ.
ಕಚೇರಿಯ ಕಡತಗಳು ಮತ್ತು ಕಂಪ್ಯೂಟರ್ ಬೆಂಕಿಗೆ ಆಹುತಿಯಾಗಿದ್ದು ,ರಾಯಚೂರಿನ ಎರಡೂ ವೃತ್ತದ ದಾಖಲೆಗಳು ನಾಶವಾಗಿವೆ. ಅವುಗಳನ್ನು ಮರು ಸೃಷ್ಟಿ ಮಾಡುವ ಯತ್ನ ನಡೆದಿರುವ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿಲ್ಲ.ಸುದ್ದಿ ಮಾಧ್ಯಮಗಳಲ್ಲಿ ಈ ಘಟನೆ ವರದಿಯಾಗಿಲ್ಲದಿರುವುದು ಅನುಮಾನಕ್ಕೆ ಕಾರಣವಾಗಿದೆ. ಮೇಲಾಧಿಕಾರಿಗಳಿಗೆ ಈ ಸುದ್ದಿ ತಲುಪಿರುವ ಬಗ್ಗೆ ಯಾವುದೇ ಖಚಿತತೆ ಇಲ್ಲ.