ಪರವಾಗಿ ಅಮಾನತ್ತಾದರೂ ವ್ಯಾಪಾರ ಮುಂದುವರಿಸಿದ ಅಪೋಲೋ ಫ಼ಾರ್ಮಸಿ.
ಗಂಗಾವತಿ: ನಗರದಲ್ಲಿ ನಡೆಯುತ್ತಿದ್ದ ಡ್ರಗ್ ಮಾಫ಼ೀಯಾ ಬಗ್ಗೆ ಹಲವು ಪತ್ರಿಕೆ ಮತ್ತು ದೃಶ್ಯ ಮಾಧ್ಯಮಗಳಲ್ಲಿ ವರದಿಯಾಗಿತ್ತು.ಈ ಕಾರಣಕ್ಕಾಗಿ ಬಳ್ಳಾರಿ ವಿಭಾಗದ ಉಪ ಔಷಧ ನಿಯಂತ್ರಕರ ವ್ಯಾಪ್ತಿಯಲ್ಲಿ ಬರುವ ಕೊಪ್ಪಳ,ಬಳ್ಳಾರಿ, ರಾಯಚೂರು ಮತ್ತು ಯಾದಗಿರಿ ವೃತ್ತಗಳ ಸಹಾಯಕ ಔಷಧ ನಿಯಂತ್ರಕರ ತಂಡ ಗಂಗಾವತಿ ನಗರದ ಕೆಲವು ಔಷಧ ಮಾರಾಟ ಮಳಿಗೆಗಳ ಮೇಲೆ ದಾಳಿ ಮಾಡಿ, ಪರಿಕ್ಷಾರ್ತವಾಗಿ ಮಂಪರು ಬರುವ ಔಷಧಗಳನ್ನು ಖರೀದಿ ಮಾಡಿದ್ದರು.
ಇಂತಹ ಔಷಧಗಳನ್ನು ತಜ್ಞ ವೈದ್ಯರ ಸಲಹಾ ಚೀಟಿಯಿಲ್ಲದೆ ಮಾರಾಟ ಮಾಡಿದ್ದಕ್ಕಾಗಿ ಒಟ್ಟು ಹನ್ನೊಂದು ಔಷಧ ಅಂಗಡಿಗಳ ಪರವಾನಗೆಗಳನ್ನು ಕೊಪ್ಪಳ ವೃತ್ತದ ಸಹಾಯಕ ಔಷಧ ನಿಯಂತ್ರಕರು
ಕೆಲ ದಿನಗಳ ಕಾಲ ಅಮಾನತ್ತಿನಲ್ಲಿ ಇರಿಸಿದ್ದರು.
ಅದರಂತೆ ಬಸ್ ಸ್ಟ್ಯಾಂಡ್ ರಸ್ತೆಯ,ನೀಲಕಂಠೇಶ್ವರ ವೃತ್ತದಲ್ಲಿರುವ ಅಪೋಲೋ ಫ಼ಾರ್ಮಸಿಯ ಪರವಾನಿಗೆಗಳನ್ನು ದಿನಾಂಕ:18-11-2024 ರಿಂದ 21-11-2024 ರವರೆಗೂ ಅಮಾನತ್ತಿನಲ್ಲಿ ಇರಿಸಿದ್ದರು.
ಆದರೆ ಈ ಸಂಸ್ಥೆ ಈ ಅವಧಿಯಲ್ಲಿ ಅದೇಶ ಉಲ್ಲಂಘಿಸಿ, ವ್ಯಾಪಾರ ನಡೆಸಿದ್ದು ಕಂಡು ಬಂದಿದೆ. ದಿನಾಂಕ:18-11-2024 ರಂದು ಮತ್ತು 19-11-2024 ರಂದು ಈ ಫ಼ಾರ್ಮಸಿಯಲ್ಲಿ ವಹಿವಾಟು ಎಂದಿನಂತೆ ನಡೆದಿರುವುದನ್ನು ಕಂಡ ಓರ್ವರು ದಿನಾಂಕ:19-11-2024 ರಂದು ದಿನಾಂಕ ಮತ್ತು ಸಮಯ ಬರುವಂತೆ ಫ಼ೋಟೋ ತೆಗೆದಿದ್ದಾರೆ.
ಇಂತಹ ಆದೇಶ ಉಲ್ಲಂಘನೆಗಾಗಿ ಈ ಫ಼ಾರ್ಮಸಿಯ ಪರವಾನಿಗೆಯನ್ನು ರದ್ದು ಮಾಡಬೇಕೆಂದು ಹಲವಾರು ಔಷಧ ವ್ಯಾಪಾರಿಗಳು ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.