ಗಂಗಾವತಿ: ನಗರದ ಗಣೇಶ ಸರ್ಕಲ್ ನಲ್ಲಿ ಇರುವ ಪಬ್ಲಿಕ್ ಮೆಡಿಕಲ್ ಸ್ಟೋರ್ಸನಲ್ಲಿ ಬುಧವಾರ ರಾತ್ರಿ ಕಳ್ಳತನ ನಡೆದಿದೆ.6 ರಿಂದ 7 ಸಾವಿರ ರೂಪಾಯಿಗಳನ್ನು ಕಳ್ಳರು ದೋಚಿದ್ದಾರೆ ಎಂದು ಅಂಗಡಿಯ ಮಾಲೀಕ ನವೀನ ಚವ್ಹಾಣ ಮಾಹಿತಿ ನೀಡಿದ್ದಾರೆ.
ಇದೇ ಮಾದರಿಯಲ್ಲಿ ಕೋರ್ಟ ಹತ್ತಿರದ ಪಬ್ಲಿಕ್ ಕ್ಲಬ್ ಕಾ೦ಪ್ಲೆಕ್ಸ್ ನಲ್ಲಿರುವ ವಿರೇಶ ಫ಼ಾರ್ಮಸಿಯಲ್ಲಿಯೂ ಸಹ ಗುರುವಾರ ಕಳ್ಳತನ ನಡೆದಿದ್ದು,5-6 ಸಾವಿರ ರೂಪಾಯಿಗಳನ್ನು ಕದ್ದೊಯ್ಯಲಾಗಿದೆ ಎಂದು ಅಂಗಡಿಯ ಮಾಲೀಕ ವಿರೇಶ್ ತಿಳಿಸಿದ್ದಾರೆ.
ಮೇಲ್ಭಾಗದ ಡಾ.ರಾಜು ಅವರ ಆಸ್ಪತ್ರೆ,ಕಂಪ್ಯೂಟರ್ ಅಂಗಡಿ ಮತ್ತು ಕನ್ನಡ ರಕ್ಷಣಾ ವೇದಿಕೆಯ ಕಚೇರಿಯಲ್ಲಿಯೂ ಕಳ್ಳತನ ಮಾಡಲಾಗಿದೆ ಎಂದು ತಿಳಿದು ಬಂದಿದೆ.ಪೋಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ ಎಂದು ಅಂಗಡಿಗಳ ಮಾಲೀಕರು ತಿಳಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಔಷಧ ಅಂಗಡಿಗಳಲ್ಲಿ ಯಾರೂ ಹಣವನ್ನು ಇಟ್ಟು ಕೊಳ್ಳದಿರಲು ಔಷಧ ವ್ಯಾಪಾರಿಗಳ ಸಂಘದ ಅಧ್ಯಕ್ಷ ಅಶೋಕಸ್ವಾಮಿ ಹೇರೂರ ಔಷಧ ವ್ಯಾಪಾರಿಗಳಿಗೆ ಸೂಚಿಸಿದ್ದಾರೆ.