ಫ಼ಾರ್ಮಸಿಸ್ಟಗಳನ್ನು ವೈದ್ಯಕೀಯ ವಲಯದಲ್ಲಿ ನಿರ್ಲಕ್ಷಿಸಲಾಗುತ್ತಿದೆ -ಅಶೋಕಸ್ವಾಮಿ ಹೇರೂರ.
ಗಂಗಾವತಿ:ಫ಼ಾರ್ಮಾಸಿಸ್ಟಗಳನ್ನು ವೈಧ್ಯಕೀಯ ವಲಯದಲ್ಲಿ ಗೌರವದಿಂದ ಕಾಣುವ ಬದಲು ನಿರ್ಲಕ್ಷಿಸಲಾಗುತ್ತಿದೆ ಎಂದು ಕರ್ನಾಟಕ ರಾಜ್ಯ ಔಷಧ ತಜ್ಞರ ಸಂಘದ ಅಧ್ಯಕ್ಷ ಅಶೋಕಸ್ವಾಮಿ ಹೇರೂರ ಹೇಳಿದರು.
ನಗರದ ಸೇ೦ಟ್ ಫ಼ಾಲ್ಸ್ ಡಿ.ಫ಼ಾರ್ಮಸಿ ಕಾಲೇಜನಲ್ಲಿ ಶನಿವಾರ ನಡೆದ ವಿಧ್ಯಾರ್ಥಿಗಳ ಸ್ವಾಗತ ಮತ್ತು ಬೀಳ್ಕೊಡಿಗೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಫ಼ಾರ್ಮಸಿ ಕೌನ್ಸಿಲ್ ಬದಲಾಗಿ ಫ಼ಾರ್ಮಸಿ ಕಮಿಷನ್ ಅಸ್ತಿತ್ವಕ್ಕೆ ಬರಲು,ಫ಼ಾರ್ಮಸಿ ಅಭ್ಯಾಸದ ವಿಷಯಗಳನ್ನು ಬದಲಿಸಲು ರಾಜ್ಯ ಔಷಧ ತಜ್ಞರ ಸಂಘ ಪ್ರಯತ್ನಿಸಿ,ಯಶಸ್ವಿಯಾಗಿದೆ.ಮತ್ತು ಕರ್ನಾಟಕ ರಾಜ್ಯ ಫ಼ಾರ್ಮಸಿ ಕೌನ್ಸಿಲ್ ಮೇಲೆ ಕರ್ನಾಟಕದ ರಾಜ್ಯದ ಉಚ್ಚ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿ, ಫ಼ಾರ್ಮಾಸಿಸ್ಟಗಳ ಕಾರ್ಯ ಚಟುವಟಿಕೆಗಳ ಮೇಲೆ ಕ್ರಮ ಕೈಗೊಳ್ಳಲು ಆದೇಶ ಮಾಡಿಸಲಾಯಿತು.
ಅದೇ ರೀತಿ ಫ಼ಾರ್ಮಾಸಿಸ್ಟ ಸೇವೆಯನ್ನು ಪಡೆಯದೇ ಇರುವ ಔಷಧ ಮಾರಾಟ ಮಳಿಗೆಗಳ ಮೇಲೆ ಕ್ರಮ ಕೈಗೊಳ್ಳಲು ತಾರತಮ್ಯ ಎಸಗಿದ್ದಕ್ಕಾಗಿ ಔಷಧ ನಿಯಂತ್ರಣ ಇಲಾಖೆಯ ಪರವಾನಗಿ ಪ್ರಾಧಿಕಾರದ ಅಧಿಕಾರಿಗಳ ಮೇಲೆ ಹೈಕೋರ್ಟ್ ನಲ್ಲಿ ರಿಟ್ ಅರ್ಜಿ ಸಲ್ಲಿಸಲಾಗಿದ್ದು ,ವಿಚಾರಣೆ ನಡೆಯುತ್ತಿದೆ ಎಂದವರು ಸಮಾರಂಭದಲ್ಲಿ ಮಾಹಿತಿ ನೀಡಿದರು.
ಭಾರತ ದೇಶದಲ್ಲಿ ಫ಼ಾರ್ಮಾಸಿಸ್ಟಗಳು ವೈಧ್ಯರನ್ನು ಅವಲಂಬಿಸಿ, ಬದುಕಬೇಕಾಗಿದ ಅನಿವಾರ್ಯತೆ ಇದ್ದು, ವಿದೇಶಗಳಲ್ಲಿ ಇರುವಂತೆ ಫ಼ಾರ್ಮಸಿ ಶಿಕ್ಷಣ ಪಡೆದವರು ಸ್ವಾಭಿಮಾನದಿಂದ ಬದುಕಲು ಸಾಧ್ಯವಾಗುತ್ತಿಲ್ಲ. ಅದಕ್ಕಾಗಿ ಸಧ್ಯದ ಕಾಯ್ದೆ ಮತ್ತು ನಿಯಮಗಳಿಗೆ ಸೂಕ್ತ ಬದಲಾವಣೆ ಆಗಬೇಕಿದೆ.ಫ಼ಾರ್ಮಸಿ ನಿಭಂದನೆಗಳು ಸಹ ಅಸಮರ್ಪಕವಾಗಿವೆ ಎಂದು ಅಭಿಪ್ರಾಯ ಪಟ್ಟರು.
ಫ಼ಾರ್ಮ ಡಿ.ಅಥವಾ ಫ಼ಾರ್ಮಸಿಯಲ್ಲಿ ಪಿ.ಎಚ್.ಡಿ., ಮಾಡಿದವರು ಸಹ ವೈದ್ಯಕೀಯ ಕ್ಷೇತ್ರದಲ್ಲಿ ಸ್ವತಂತ್ರವಾಗಿ ಕಾರ್ಯ ನಿರ್ವಹಿಸಲು ಸಾಧ್ಯವಾಗುತ್ತಿಲ್ಲ ಎಂದು ಅಶೋಕಸ್ವಾಮಿ ಹೇರೂರ ವಿಷಾದ ವ್ಯಕ್ತ ಪಡಿಸಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಇನ್ನೊರ್ವ ಅತಿಥಿ ಮಕ್ಕಳ ತಜ್ಞ ಡಾ.ಎಸ್.ಜಿ.ಮಟ್ಟಿ ಅವರು ಮಾತನಾಡಿ ವಿಧ್ಯಾರ್ಥಿಗಳು ಉತ್ತಮ ರೀತಿಯಲ್ಲಿ ಅಭ್ಯಾಸ ಮಾಡಿ,ಉದ್ದೇಶಿತ ಗುರಿಯನ್ನು ಸಾಧಿಸಬೇಕು. ಫ಼ಾರ್ಮಾಸಿಸ್ಟಗಳಾಗಿ ದಕ್ಷತೆಯಿಂದ ಕಾರ್ಯ ನಿರ್ವಹಿಸ ಬೇಕೆಂದು ಕರೆ ನೀಡಿದರು.ವಿಧ್ಯಾರ್ಥಿಗಳು ಉತ್ತಮ ರೀತಿಯಲ್ಲಿ ಸಾಧನೆ ಮಾಡಿದರೆ ಪಾಲಕರಿಗೆ ಮಾತ್ರವಲ್ಲ ,ಸಮಾಜಕ್ಕೂ ಉತ್ತಮ ಕೊಡುಗೆ ನೀಡಬಹುದು ಎಂದರು.
ಸೇ೦ಟ್ ಫ಼ಾಲ್ಸ್ ಫ಼ಾರ್ಮಸಿ ಕಾಲೇಜ್ ಉತ್ತಮ ರೀತಿಯ ಶಿಕ್ಷಣ ನೀಡುತ್ತಿರುವುದರಿಂದ ವಿಧ್ಯಾರ್ಥಿಗಳು ಉತ್ತಮ ಅಂಕಗಳಿಂದ ಉತ್ತೀರ್ಣರಾಗುತ್ತಿದ್ದಾರೆ ಎಂದು ಕಾಲೇಜ್ ಪ್ರಾಚಾರ್ಯರಾದ ಮಂಜುನಾಥ ಹಿರೇಮಠ ಬೂದಗುಂಪಾ ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸೇ೦ಟ್ ಫ಼ಾಲ್ಸ್ ವಿಧ್ಯಾ ಸಂಸ್ಥೆಯ ಕಾರ್ಯದರ್ಶಿ ಸರ್ವೇಶ ವಸ್ತ್ರದ ಮಾತನಾಡಿ,ಗಂಗಾವತಿ ನಗರವು ವಿವಿಧ ಕ್ಷೇತ್ರದಲ್ಲಿ ಅಭಿವೃದ್ಧಿಯತ್ತ ಸಾಗಿದ್ದು, ಜೊತೆಗೆ ಶೈಕ್ಷಣಿಕವಾಗಿಯೂ ಮುಂದುವರಿದಿದೆ ಇದು ಸಂತೋಷದ ಸಂಗತಿ ಎಂದು ಹೇಳಿದರು.
ಶ್ರೀಮತಿ ಸಂಧ್ಯಾ ಅಶೋಕಸ್ವಾಮಿ ಹೇರೂರ ಮಾತನಾಡಿ,ತಮ್ಮ ಮಕ್ಕಳು ಇದೇ ಶಿಕ್ಷಣ ಸಂಸ್ಥೆಯಲ್ಲಿ ಪ್ರಾಥಮಿಕ ವಿಧ್ಯಾಭ್ಯಾಸ ಮಾಡಿದ್ದು,ಈಗ ವೈಧ್ಯರಾಗಿದ್ದು ಅದು ಸೇ೦ಟ್ ಫ಼ಾಲ್ಸ್ ಸಮೂಹ ಸಂಸ್ಥೆಗೆ ಸಂದ ಗೌರವ ಎಂದರು.
ಡಾ.ಎಸ್.ಜಿ.ಮಟ್ಟಿ ಹಾಗೂ ಅಶೋಕಸ್ವಾಮಿ ಹೇರೂರ ದಂಪತಿಗಳನ್ನು ಈ ಕಾರ್ಯಕ್ರಮದಲ್ಲಿ ಸನ್ಮಾನಿಸಿ, ಗೌರವಿಸಲಾಯಿತು.ಈ ಸಂಧರ್ಭದಲ್ಲಿ ಕಾಲೇಜ್ ಆಡಳಿತ ಮಂಡಳಿಯ ಸದಸ್ಯರು ಹಾಗೂ ಉಪನ್ಯಾಸಕರು ಉಪಸ್ಥಿತರಿದ್ದರು.