ಕರ್ನಾಟಕ ರಾಜ್ಯ ಔಷಧ ನಿಯಂತ್ರಣ ಇಲಾಖೆಯ ಇಬ್ಬರು ಅಧಿಕಾರಿಗಳನ್ನು ಅವರ ಕರ್ತವ್ಯದಿಂದ ರಾಜ್ಯ ಸರಕಾರ ಇತ್ತೀಚಿಗೆ ವಜಾ ಗೊಳಿಸಿದೆ.
ಕಲಬುರ್ಗಿ ವೃತ್ತದ ಸಹಾಯಕ ಔಷಧ ನಿಯಂತ್ರಕ ಗೋಪಾಲ ರಾವ್ ಭಂಡಾರಿ ಮತ್ತು ಹುಬ್ಬಳ್ಳಿ ವೃತ್ತದ ಔಷಧ ಪರೀವೀಕ್ಷಕ ಮಂಜುನಾಥ ಎಸ್.ಎಸ್.,ವಜಾ ಗೊಂಡ ಅಧಿಕಾರಿಗಳು.
2015 ನೇ ಇಸ್ವಿಯಲ್ಲಿ ರಾಯಚೂರು ವೃತ್ತದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ಪ್ರಶಾಂತ ಮೆಡಿಕಲ್ ಸ್ಟೊರ್ಸ್ ಸಿರವಾರ,ಈ ಸಂಸ್ಥೆಯ ಮಾಲೀಕ ವಿಜಯ ಕುಮಾರ್ ಪಾಟೀಲ್ ಅವರಿಂದ ಲಂಚ ಸ್ವೀಕರಿಸುವಾಗ, ಲೋಕಾಯುಕ್ತರ ಬಲೆಗೆ ಬಿದ್ದಿದ್ದರು.
ಈ ಇಬ್ಬರೂ ಅಧಿಕಾರಿಗಳನ್ನು ಕರ್ತವ್ಯದಿಂದ ವಜಾ ಗೊಳಿಸಲು ಲೋಕಾಯುಕ್ತರು ಹಲವಾರು ವರ್ಷಗಳ ಹಿಂದೆಯೇ ಸರಕಾರಕ್ಕೆ ಆದೇಶಿಸಿದ್ದರೂ ಕರ್ನಾಟಕ ರಾಜ್ಯ ಸರಕಾರ ಈ ಅಧಿಕಾರಿಗಳನ್ನು ಸೇವೆಯಿಂದ ವಜಾ ಗೊಳಿಸಲು ವಿಳಂಭ ಮಾಡುತ್ತಾ ಬಂದಿತ್ತು.
ಹೀಗಾಗಿ ಈ ಇಬ್ಬರು ಅಧಿಕಾರಿಗಳೂ ಸುಮಾರು 9 ವರ್ಷಗಳ ಹಿಂದೆ ಲಂಚ ಪಡೆದ ಅಪಾದನೆ ಹೊಂದಿದ್ದರೂ ಸರಕಾರಿ ಸೇವೆಯಲ್ಲಿ ಮುಂದುವರೆದಿದ್ದರು.ಗೋಪಾಲ ರಾವ್ ಭಂಡಾರಿ ಕಲಬುರ್ಗಿ ವೃತ್ತದ ಸಹಾಯಕ ಔಷಧ ನಿಯಂತ್ರಕ ಹುದ್ದೆಯ ಜೊತೆಗೆ ಕಲಬುರ್ಗಿ ವಿಭಾಗದ ಪ್ರಭಾರಿ ಉಪ ಔಷಧ ನಿಯಂತ್ರಕರಾಗಿ ಕಾರ್ಯನಿರ್ವಹಿಸುತ್ತಿದ್ದರು. ಬಾಗಲಕೋಟ ವೃತ್ತದ ಔಷಧ ಪರಿವೀಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿದ್ದ ಮಂಜುನಾಥ ಎಸ್.ಎಸ್.,ತೀರಾ ಇತ್ತೀಚೆಗೆ ಹುಬ್ಬಳ್ಳಿ ವೃತ್ತಕ್ಕೆ ವರ್ಗವಾಗಿದ್ದರು.ಕಳೆದ 9 ವರ್ಷಗಳಿಂದ ಸಂಭಳದ ಜೊತೆಗೆ ಲಂಚವನ್ನು ಪಡೆದು ಕಾರ್ಯನಿರ್ವಹಿಸಿದರು,ಹೀಗಾಗಿ ಇವರಿಗೆ ಆರ್ಥಿಕ ತೊಂದರೆಯಾಗುವುದಿಲ್ಲ ಎಂದು ಹಲವು ಔಷಧ ವ್ಯಾಪಾರಿಗಳು ಅಸಮಧಾನ ವ್ಯಕ್ತಪಡಿಸಿದ್ದಾರೆ.