December 23, 2024

ಬೇರೆ ಬೇರೆ ರಾಜ್ಯಗಳಲ್ಲಿ ಅದು ಹೇಗೋ ? ಕರ್ನಾಟಕದಲ್ಲಿನ ಹಲವು ಔಷಧ ವ್ಯಾಪಾರಿಗಳು ನರಕ ಯಾತನೆ ಅನುಭವಿಸುತ್ತಿದ್ದಾರೆ.ವ್ಯಾಪಾರ ಚನ್ನಾಗಿ ಮಾಡುತ್ತಿರುವವರು ಹಣ ಬಾಚಿಕೊಂಡು ಆರಾಮ್ ಇರಬಹುದು.ಆದರೆ ವ್ಯಾಪಾರ ಇಲ್ಲದವರ ಕಣ್ಣಿರು ಒರೆಸುವವರಿಲ್ಲ.

ಬಹುತೇಕ ನಕಲಿ ವೈಧ್ಯರು ಅಲೋಪತಿ ಔಷಧಗಳನ್ನು ಮಾರಾಟ ಮಾಡುತ್ತಿದ್ದಾರೆ.ಅವರು ಯಾವುದೇ ಲೈಸೆನ್ಸ್ ಪಡೆಯದೇ ವ್ಯಾಪಾರ ಮಾಡುವುದರಿಂದ,ಅಧಿಕಾರಿಗಳು ಅವರತ್ತ ಸುಳಿಯುವುದಿಲ್ಲ.ಅವರು ಅನಾಯಸವಾಗಿ ಹಣ ಮಾಡುತ್ತಾರೆ. ಆದರೆ ಇತ್ತ ಔಷಧ ವ್ಯಾಪಾರಿಗಳು,ವೈಧ್ಯರ ಸಹಕಾರ ಇಲ್ಲದೇ ವ್ಯಾಪಾರ ಮಾಡಲಾಗುವುದಿಲ್ಲ.ಲೈಸೆನ್ಸ್ ಇಲ್ಲದೇ ವ್ಯವಹರಿಸುವಂತಿಲ್ಲ.ಲೈಸೆನ್ಸ್ ಪಡೆಯಲು ಲಂಚ ಕೊಡಬೇಕು,ಅದನ್ನು ಕಾಪಾಡಿಕೊಳ್ಳಲು ಅಧಿಕಾರಿಗಳಿಗೆ ಪ್ರತಿ ವರ್ಷ ವಂತಿಗೆ ಸಲ್ಲಿಸುತ್ತಲೇ ಇರಬೇಕು.ಮಾರಾಟ ತೆರಿಗೆ,ಆದಾಯ ತೆರಿಗೆ,ಕಾರ್ಮಿಕ ಇಲಾಖೆಗಳ ಜೊತೆಗೆ ಸಾಮರಸ್ಯ ಹೊಂದಿರಬೇಕು. ಇಷ್ಟೆಲ್ಲಾ ಆದರೂ ಔಷಧ ಮಾರಾಟದಲ್ಲಿ ಎಲ್ಲಾ ಕಾನೂನುಗಳನ್ನು ಪಾಲಿಸುವುದು ಕಷ್ಟ ಸಾಧ್ಯ. ಔಷಧ ವ್ಯಾಪಾರಿಗಳ ಕ್ಷೇಮ ಕಾಪಾಡುವ ಹೆಸರಿನಲ್ಲಿ ಹುಟ್ಟಿಕೊಂಡ ಹಲವು ಸಂಘಗಳು ಅದೇನು ಮಾಡುತ್ತಿವೆಯೋ ಗೊತ್ತಿಲ್ಲ.ಅವು ನಿಷ್ಕ್ರಿಯದತ್ತ ಸಾಗಲು ಔಷಧ ವ್ಯಾಪಾರಿಗಳೂ ಕಾರಣವಾಗಿರ ಬಲ್ಲರು.ಸಂಘಗಳು ಕರೆದ ಸಭೆಗೆ ಔಷಧ ವ್ಯಾಪಾರಿಗಳು ಗೈರು ಹಾಜರಿಯಾಗುವುದು,ಪಿತೂರಿ ಮಾತುಗಳಿಗೆ ಬಲಿಯಾಗುವುದು.ಇಂತಹ ಹಲವು ಕಾರಣಗಳು ಮಾತ್ರವಲ್ಲ , ಸಂಘದ ಮುಖ್ಯಸ್ಥರ ಮೇಲೆ ಅಪನಂಬಿಕೆ ಪಡುವುದು ಸಹ ಇವುಗಳಲ್ಲೊಂದು.  ವರ್ಗವಾದ ಹಲವು ಅಧಿಕಾರಿಗಳು ಅಲ್ಲಿನ ಸಂಘಗಳಲ್ಲಿ ಒಡಕು ಉಂಟಾಗುವಂತೆ ‘ಹುಳಿ’ ಹಿಂಡಿಯೇ ಆಯಾ ಜಿಲ್ಲೆಯಿಂದ ಕಾಲ್ಕೀಳುತ್ತಾರೆ,ಆದರೆ ಇದನ್ನು ಔಷಧ ವ್ಯಾಪಾರಿಗಳು ನಂಬುತ್ತಾರೆ.ಇಂತಹ ಹಲವು ವಿಷಯಗಳು ಕ್ರೀಯಾಶೀಲ ಔಷಧ ವ್ಯಾಪಾರಿಗಳ ಸಂಘಗಳನ್ನು ನಿಷ್ಕ್ರಿಯ ಗೊಳಿಸುತ್ತವೆ. ಔಷಧ ವ್ಯಾಪಾರಿಗಳು ತಮ್ಮ ತಮ್ಮ ಸಂಘಗಳ ಮೇಲೆ ಸ್ವಾಭಿಮಾನ ಇಟ್ಟು ಕೊಳ್ಳದಿರುವುದು,ತಮ್ಮ ವ್ಯವಹಾರಿಕ ತಪ್ಪುಗಳನ್ನು ಮುಚ್ಚಿಕೊಳ್ಳಲು ಔಷಧ ವ್ಯಾಪಾರಿಗಳ ಸಂಘಗಳನ್ನು ಸಂಪರ್ಕಿಸದೆ, ರಾಜಕಾರಣಿಗಳಿಂದ ಅಧಿಕಾರಿಗಳಿಗೆ ಶಿಫ಼ಾರಸ್ಸು ಮಾಡಿಸುವುದು,ಇಂತಹ ಮುಂತಾದ ಅಸಹಜ ಕಾರಣಗಳಿಂದಾಗಿ ರಾಜ್ಯದ ಜಿಲ್ಲೆಯ ಮತ್ತು ತಾಲೂಕಿನ ಸಂಘಗಳ ಕ್ರೀಯಾಶೀಲತೆ ಕಡಿಮೆಯಾಗುತ್ತಿದೆ. ಎಲ್ಲಾ ಜಿಲ್ಲೆಗಳಲ್ಲಿ ತಮ್ಮ ಸಂಘಗಳು ಸರಿಯಾಗಿವೆ ಎಂದು ಸಂಘದ ನೇತೃತ್ವ ವಹಿಸಿದವರು ಹೇಳಬಹುದು. ಆದರೆ ನೇತೃತ್ವದ ಒಳಗುದಿ ಬೇರೆಯೇ ಇದೆ. ಸಂಘಗಳನ್ನು ಬಹಳಷ್ಟು ಹಚ್ಚಿಕೊಳ್ಳಬಾರದು, ಅಧಿಕಾರಿಗಳ ಸೆಂಡ್ ಆಫ಼್, ವೆಲ್ ಕಮ್  ಕಾರ್ಯಕ್ರಮಗಳಿಗೆ ಮಾತ್ರ ಸಂಘ ಸೀಮಿತವಾಗಿರಬೇಕು ಮತ್ತು ಅಧಿಕಾರಿಗಳಿಗೆ ಕಲೆಕ್ಷನ್ ಮಾಡಿ ಕೊಡುವಲ್ಲಿ ನಿಷ್ಠೆ ಹೊಂದಿರಬೇಕು.ಇಷ್ಟು ಕೆಲಸಗಳಿಗೆ ಮಾತ್ರ ಸೀಮಿತವಾಗಿರುವ ಸಂಘಗಳು ಅಧಿಕಾರಿಗಳ ಮತ್ತು ಔಷಧ ವ್ಯಾಪಾರಿಗಳ ದೃಷ್ಟಿಯಲ್ಲಿ ತುಂಬಾ ಒಳ್ಳೆಯ ಸಂಘಗಳು. ಔಷಧ ವ್ಯಾಪಾರಿಗಳ ಎಲ್ಲಾ ತಪ್ಪುಗಳನ್ನು ಅಧಿಕಾರಿಗಳ ಕುರ್ಚಿಯ ಕೆಳಗೆ ಹಾಕಿಸಿ,ಅಧಿಕಾರಿಗಳಿಗೆ ಒಂದಿಷ್ಟು ಭಕ್ಷಿಸ್ಸು ಕೊಟ್ಟು ,ಸಾಧ್ಯವಾದರೆ ಪಾರ್ಟಿ ಮಾಡಿಸಿ,ಸರಿ ಮಾಡಿ ಬಿಟ್ಟರೆ ಸಂಘದ ಅಧ್ಯಕ್ಷರು/ಕಾರ್ಯದರ್ಶಿ ತುಂಬಾ ಒಳ್ಳೆಯವರು.

ಕಾಯ್ದೆ ಪಾಲಿಸಿ,ನಿಯಮ ಓದಿ ಎಂದರೆ,ಔಷಧ ವ್ಯಾಪಾರಿಗಳ ಕುತ್ತಿಗೆಗೆ ಬರುತ್ತದೆ.ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬರುವ ಮೊದಲು ಲಂಚದ ವ್ಯವಸ್ಥೆ ಇದ್ದಿಲ್ಲ. ಸ್ವಾತಂತ್ರ್ಯ ಬಂದ ನಂತರ ಲಂಚದ ಹಾವಳಿ ಎಲ್ಲಾ ಇಲಾಖೆಯಲ್ಲೂ ಮಿತಿ ಮೀರಿದೆ.ಇದನ್ನು ನಿರ್ಬಂಧಿಸಬೇಕಾದವರೇ ಲಂಚ ಪಡೆದವರಿಂದ ‘ಲಂಚ’ ಪಡೆದು ಲಂಚ ಪಡೆದವರನ್ನು ರಕ್ಷಿಸುವ ಸ್ಥಿತಿ ನಿರ್ಮಾಣವಾಗಿದೆ.ಇದೊಂದು ತರಹ ಬೇಲಿಯೇ ಎದ್ದು ಹೊಲ ಮೇಯ್ದಂತೆ. ಕಾಯ್ದೆ ಪಾಲಿಸಿ,ನಿಯಮ ಓದಿ ಎಂದರೆ,ಔಷಧ ವ್ಯಾಪಾರಿಗಳ ಕುತ್ತಿಗೆಗೆ ಬರುತ್ತದೆ.ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬರುವ ಮೊದಲು ಲಂಚದ ವ್ಯವಸ್ಥೆ ಇದ್ದಿಲ್ಲ. ಸ್ವಾತಂತ್ರ್ಯ ಬಂದ ನಂತರ ಲಂಚದ ಹಾವಳಿ ಎಲ್ಲಾ ಇಲಾಖೆಯಲ್ಲೂ ಮಿತಿ ಮೀರಿದೆ.ಇದನ್ನು ನಿರ್ಬಂಧಿಸಬೇಕಾದವರೇ ಲಂಚ ಪಡೆದವರಿಂದ ‘ಲಂಚ’ ಪಡೆದು ಲಂಚ ಪಡೆದವರನ್ನು ರಕ್ಷಿಸುವ ಸ್ಥಿತಿ ನಿರ್ಮಾಣವಾಗಿದೆ.ಇದೊಂದು ತರಹ ಬೇಲಿಯೇ ಎದ್ದು ಹೊಲ ಮೇಯ್ದಂತೆ.

ಔಷಧ ವ್ಯಾಪಾರಿಗಳ ಮನಸ್ಸುಗಳು ಸರಿಯಾದರೆ, ಔಷಧ ವ್ಯಾಪಾರಿ ಸಂಘಗಳು ಗಟ್ಟಿಯಾದಾವು.ಅವು ಗಟ್ಟಿಯಾದರೆ,ವ್ಯಾಪಾರಿಗಳ ರಕ್ಷಣೆಯೂ ಆದೀತು ! ನಾನು ನನ್ನ ವ್ಯಾಪಾರ ಎಂದವನು ಮಾತ್ರ ಇಲ್ಲಿ ಜಾಣ.ಸಂಘ,ಸದಸ್ಯರು,ಅಭಿಮಾನ,ಸ್ವಾಭಿಮಾನ ಎಂದವನು ಇಲ್ಲಿ ‘ದಡ್ಡ’ ! ವಿಸಿಟಿಂಗ್ ಕಾರ್ಡ ಅಧ್ಯಕ್ಷರಿಗೆ ಇಲ್ಲಿ ಗೌರವ.ಕರ್ತವ್ಯ, ಜಾಗ್ರತೆ ಎಂದವನು ಇಲ್ಲಿ ವಿಲನ್ ! ಸಹಕಾರ ಇಲ್ಲ, ಸಹಾಯ ಇಲ್ಲ ! ಆದರೂ ಬೆನ್ನ ಹಿಂದೆ ಮಾತನಾಡುವವರು ಜಾಸ್ತಿ.ಅಂತಹವರ ಹೆಡೆಮುರಿ ಕಟ್ಟಿದರೆ,ಸಂಘ ಮತ್ತು ಔಷಧ ವ್ಯಾಪಾರ ಸರಿಯಾಗುತ್ತದೆ.ಆದರೆ ಇಂತಹ ಧೈರ್ಯ,ಎದೆಗಾರಿಕೆ ಎಲ್ಲರಲ್ಲಿಯೂ ಇರುವುದಿಲ್ಲ.ಅದೇ ದುರಾದೃಷ್ಟ.

-ಅಶೋಕಸ್ವಾಮಿ ಹೇರೂರ.

About The Author

Leave a Reply