December 23, 2024
1001374770

ಗಂಗಾವತಿ:ವೈಧ್ಯರ ಸಲಹಾ ಚೀಟಿ ಇಲ್ಲದೇ,ನಿರ್ದಿಷ್ಟ ಪಡಿಸಿದ ಔಷಧಗಳ ಮಾರಾಟ ಮಾಡಿದರೆ,ಔಷಧ ಕಾಯ್ದೆ-1940 ಮತ್ತು ನಿಯಮ-1945 ರ ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದು ಕೊಪ್ಪಳ ವೃತ್ತದ ಸಹಾಯಕ ಔಷಧ ನಿಯಂತ್ರಕ ವೆಂಕಟೇಶ ರಾಠೋಡ ಎಚ್ಚರಿಸಿದರು.

ರವಿವಾರ ನಗರದ ಔಷಧೀಯ ಭವನದಲ್ಲಿ ಹಮ್ಮಿ ಕೊಳ್ಳಲಾಗಿದ್ದ ಔಷಧ ವ್ಯಾಪಾರಿಗಳ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು.ಕೆಲವು ವ್ಯಸನಿಗಳು,ಅಮಲು‌ ಬರಿಸುವಂತಹ ಸೈಕೊಟ್ರೊಪಿಕ್ ಔಷಧಗಳನ್ನು ಅಸಹಜ ಸೇವನೆಯ ಮೂಲಕ ದೇಹಕ್ಕೆ ಸೇರಿಸಿಕೊಳ್ಳುವ ವರದಿಗಳು ಗಂಗಾವತಿಯಲ್ಲಿ ಕಂಡು ಬರುತ್ತಿರುವ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗಿತ್ತು.ಈ ಕಾರಣಕ್ಕಾಗಿ ಬಳ್ಳಾರಿ ವಿಭಾಗ ವ್ಯಾಪ್ತಿಯ ಸಹಾಯಕ ಔಷಧ ನಿಯಂತ್ರಕರ ಮತ್ತು ಔಷಧ ಪರಿವೀಕ್ಷಕರ ತಂಡದಿಂದ ಔಷಧ ಅಂಗಡಿಗಳ ಮೇಲೆ ಧಿಡೀರ್ ದಾಳಿ‌ ನಡೆಸಲಾಗಿದೆ,ಈ ಸಂದರ್ಭದಲ್ಲಿ ಕಂಡು ಬಂದ ನ್ಯೂನ್ಯತೆಗಳ ಬಗ್ಗೆ ಕ್ರಮ ಕೈಗೊಳ್ಳುವ ಪ್ರಕ್ರೀಯೆ ನಡೆದಿದೆ ಎಂದು ತಿಳಿಸಿದರು.

ಔಷಧ ಮಾರಾಟ ಮಳಿಗೆಗಳಲ್ಲಿ ರಿಜಿಸ್ಟರ್ಡ್ ಫ಼ಾರ್ಮಾಸಿಸ್ಟ ಗೈರು ಹಾಜರಿ ಕಂಡು ಬಂದರೆ,ಅಂತಹ ಅಂಗಡಿಗಳ ಪರವಾನಿಗೆ ರದ್ದು ಗೊಳಿಸಲಾಗುವುದು ಎಂದು ರಾಠೋಡ ಎಚ್ಚರಿಸಿದರು.

ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಔಷಧ ಅಂಗಡಿಗಳ ಪರಿವೀಕ್ಷಣೆ ನಡೆಸಲಾಗುವುದು, ನೂನ್ಯತೆಗಳು ಕಂಡು ಬಂದಲ್ಲಿ ನಿರ್ಧಾಕ್ಷಿಣ್ಯ ಕ್ರಮ ಜರುಗಿಸಲಾಗುವುದು ಎಂದರು.

About The Author

Leave a Reply