

ಇಡೀ ರಾಜ್ಯಾದ್ಯಂತ ನಕಲಿ/ಅನಧಿಕೃತ ವೈದ್ಯರ ಸಲಹಾ ಚೀಟಿಯ ಆಧಾರದ ಮೇಲೆ ಆಂಟಿಬಯೋಟಿಕ್, ಸ್ಟೀರೈಡ್, ಸೈಕೊಟ್ರೊಪಿಕ್ ಡ್ರಗ್ಸ್ ಮಾರಾಟವಾಗುತ್ತಿವೆ. ಇದರಿಂದ ಜನ ಸಾಮಾನ್ಯರ ಆರೋಗ್ಯ ಹಾಳಾಗುತ್ತಿವೆ ಎಂದು ಭಾರತೀಯ ವೈಧ್ಯಕೀಯ ಸಂಘದ ಸದಸ್ಯರು ಕಳವಳ ವ್ಯಕ್ತ ಪಡಿಸಿದ್ದಾರೆ.
ಎಲ್ಲಾ ಜಿಲ್ಲೆಗಳಿಗೂ ಔಷಧ ನಿಯಂತ್ರಣ ಇಲಾಖೆ ಅಧಿಕಾರಿಗಳ ಟೀಮ್ ಕಳುಹಿಸಿ,ಔಷಧ ಮಾರಾಟ ಮಳಿಗಳಲ್ಲಿ ಟೆಸ್ಟ್ ಪರ್ಚೇಸ್ ಮಾಡಿಸಿ,ಉಲ್ಲಂಘನೆ ಕಂಡು ಬಂದರೆ, ಪ್ರಕರಣ ದಾಖಲಿಸಬೇಕೆಂದು ಅವರು ಒತ್ತಾಯಿಸಿದ್ದಾರೆ.ಸ್ಥಳೀಯ ಅಧಿಕಾರಿಗಳನ್ನು ಅವಲಭಿಸದೇ ಔಷಧ ನಿಯಂತ್ರಣ ಇಲಾಖೆಯ ಮುಖ್ಯಸ್ಥರು,ಬೇರೆ ಬೇರೆ ಅಧಿಕಾರಿಗಳಿಂದ ತನಿಖೆ ನಡೆಸಬೇಕು ಎಂದು ಅವರು ಹೇಳಿದ್ದಾರೆ.
ಮೊದಲ ಹಂತದಲ್ಲಿ ನಕಲಿ ವೈದ್ಯರ ಪಕ್ಕದ ಮೆಡಿಕಲ್ ಸ್ಟೊರ್ಸ್ ಗಳ ಮೇಲೆ ಮತ್ತು ಅನಧಿಕೃತ ವೈದ್ಯರ ಆಸ್ಪತ್ರೆಯ ಒಳಗಿರುವ ಮೆಡಿಕಲ್ ಶಾಪ್ ಗಳಲ್ಲಿ ಟೆಸ್ಟ್ ಪರ್ಚೇಸ್ ಮಾಡಿಸಿ,ಜನರ ಆರೋಗ್ಯ ಕಾಪಾಡುವ ಅವಶ್ಯಕತೆ ಇದೆ.ವಿವಿಧ ಕಡೆ ಔಷಧ ಅಂಗಡಿಯ ಆವರಣದ ಒಳಗೆ ನಕಲಿ ಹಾಗೂ ಅನಧಿಕೃತ ವೈಧ್ಯರು ಪ್ರ್ಯಾಕ್ಟೀಸ್ ಮಾಡುತ್ತಿದ್ದಾರೆ.ಈ ಬಗ್ಗೆ ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಅವರು ಆಗ್ರಹಿಸಿದ್ದಾರೆ.