ಬಳ್ಳಾರಿ: ಜಿಲ್ಲೆಯ ಜಿಂದಾಲ್ ಉಕ್ಕಿನ ಕಾರ್ಖಾನೆಯ ಭಾಗದ ಸುತ್ತ ಮುತ್ತಲಿನ ಪ್ರದೇಶದಲ್ಲಿ ನಕಲಿ ವೈದ್ಯರ ಹಾವಳಿ ತುಂಬಾ ಹೆಚ್ಚಾಗಿದೆ.ಇದರಿಂದ ಅಲೋಪತಿ ಔಷಧಗಳ ದುರುಪಯೋಗ ಹೆಚ್ಚಾಗುತ್ತಿದೆ ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ.
ಕಾರ್ಖಾನೆಯಲ್ಲಿ ಕೆಲಸ ಮಾಡುವ ಕೂಲಿ ಕಾರ್ಮಿಕರ ಸಂಖ್ಯೆ ಇಲ್ಲಿ ತುಂಬಾ ಹೆಚ್ಚಾಗಿರುವುದರಿಂದ, ಅಲ್ಲಿ ವಿಪರೀತ ಸಂಖ್ಯೆಯ ನಕಲಿ ವೈಧ್ಯರು ಕಾರ್ಯ ನಿರ್ವಹಿಸುತ್ತಿದ್ದಾರೆನ್ನಲಾಗಿದೆ.ಬಂಗಾಳಿ ನಕಲಿ ವೈಧ್ಯರು ಮತ್ತು ಸ್ಥಳೀಯ ನಕಲಿ ವೈಧ್ಯರು ಅಲೋಪತಿ ಔಷಧಗಳನ್ನು ಹಾಗೂ ಫ಼ಿಜಿಷಿಯನ್ ಶ್ಯಾಂಪಲ್ ಗಳನ್ನು ಖರೀಧಿಸಿ,ವಿವಿಧ ಜಿಲ್ಲೆಯ ವಿವಿಧ ತಾಲೂಕಿನ ಡ್ರಗ್ ಪೆಡ್ಲರ್ ಗಳಿಗೆ ಮಾರಾಟ ಮಾಡುತ್ತಿದ್ದಾರೆಂದು ಅನುಮಾನಿಸಲಾಗಿದೆ.
ಈ ಬಗ್ಗೆ ಹಲವು ಅಂತೆ-ಕಂತೆಗಳು ಕೇಳಿ ಬರುತ್ತಿದ್ದು, ಅಧಿಕಾರಿಗಳ ತನಿಖೆಯಿಂದ ಮಾತ್ರ ಸತ್ಯಾ ಸತ್ಯತೆ ಬಯಲಿಗೆ ಬರಲು ಸಾಧ್ಯ.
ಜಿಂದಾಲ್ ಭಾಗದ ವಡ್ಡು ,ತೋರಣಗಲ್ ಮತ್ತಿತರ ಗ್ರಾಮಗಳಲ್ಲಿ ಪರವಾನಿಗೆ ರಹಿತ ಔಷಧ ವ್ಯಾಪಾರಿಗಳ ಸಂಖ್ಯೆ ಹೆಚ್ಚಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.