December 24, 2024
1001154139

ಪರವಾನಿಗೆ ಪ್ರಾಧಿಕಾರದ ಅಧಿಕಾರಿಗಳು ಔಷಧ ಮಾರಾಟದ ಪರವಾನಿಗೆಗಳನ್ನು ಅತೀ ಸರಳವಾಗಿ ಕೊಡುತ್ತಾರೆ.ಕೊಡುವಾಗ ಯಾವ ಕಾಯ್ದೆ ಮತ್ತು ನಿಯಮಗಳನ್ನು ಅವರಿಗೆ ತಿಳಿಸಿ ಹೇಳುವುದಿಲ್ಲ. ಮೆಡಿಕಲ್ ಸ್ಟೊರ್ಸನಲ್ಲಿ  ರಿಜಿಸ್ಟರ್ಡ್ ಫ಼ಾರ್ಮಾಸಿಸ್ಟ ಆಗಿ ಕೆಲಸಮಾಡಲು ಒಪ್ಪಿ ನೇಮಕವಾಗಿರುವ ಫ಼ಾರ್ಮಾಸಿಸ್ಟಗಳ ಜವಾಬ್ದಾರಿಗಳ ಬಗ್ಗೆ ಅವರಿಗೆ ತಿಳಿ ಹೇಳುವುದಿಲ್ಲ.  

ಇನ್ನೂ ಔಷಧ ವಿತರಕರಿಗೆ ಲೈಸೆನ್ಸ್ ಕೊಡುವಾಗಲು ಅಧಿಕಾರಿಗಳು ಹೋಲ್ ಸೇಲ್ ಲೈಸೆನ್ಸ್ ಪಡೆದ ವ್ಯಕ್ತಿಗಳಿಗೆ ಒಂದಿಷ್ಟು ಕಟ್ಟಳೆಗಳ ಬಗ್ಗೆ ಹೇಳುವುದಿಲ್ಲ. ಹೀಗಾಗಿ ಅವರು ನಕಲಿ ವೈಧ್ಯರಿಗೆ ಮತ್ತು ಆಯುಷ್ ವೈಧ್ಯರಿಗೆ ಯಾವ ಭಯವೂ ಇಲ್ಲದೆ,ಅಲೋಪತಿ ಔಷಧಗಳನ್ನು ಸರಬರಾಜು ಮಾಡುತ್ತಿದ್ದಾರೆ.ಇದರಿಂದ ಪರವಾನಿಗೆ ಪಡೆದ ಹಲವಾರು ಔಷಧ ವ್ಯಾಪಾರಿಗಳಿಗೆ  ತೊಂದರೆಯಾಗುತ್ತಿದೆ.

ಇದ್ಯಾವುದನ್ನು ಗಮನಿಸದ ಅಧಿಕಾರಿಗಳು ಪರವಾನಿಗೆ ಪಡೆದವರನ್ನೇ ಗುರಿಯಾಗಿಸಿಕೊಂಡು ಪರಿವೀಕ್ಷಣೆ ನಡೆಸುತ್ತಾರೆ.ಮೊದಲು ಔಷಧ ನಿಯಂತ್ರಣ ಇಲಾಖೆಯ ಲೈಸೆನ್ಸ್ ಇಲ್ಲದೇ ಯಾವ ವ್ಯಕ್ತಿಯೂ ಅಲೋಪತಿ ಔಷಧಗಳನ್ನು ಮಾರಾಟ ಮಾಡಬಾರದು.ಈ ವ್ಯವಸ್ಥೆ ಬಂದಾಗ ಮಾತ್ರ ಔಷಧ ವ್ಯಾಪಾರಿಗಳು ನಿಟ್ಟುಸಿರು ಬಿಟ್ಟಾರು.

ಒಂದೆಡೆ ರಿಲಿಯನ್ಸ್, ಮೆಡ್ ಪ್ಲಸ್,ಅಪೋಲೋ ಮುಂತಾದ ಚೈನ್ ಸ್ಟೊರ್ಸಗಳ ಪೈಪೋಟಿ ಮತ್ತೊಂದೆಡೆ ಆಯುಷ್ ಮತ್ತು ನಕಲಿ ವೈಧ್ಯರಿಂದ ಪ್ರಪಗಂಡಾ ಔಷಧಗಳ ಮಾರಾಟ,ಇದರಿಂದ ಕಳಪೆ ದರ್ಜೆಯ ಔಷಧಗಳ ನುಸುಳುವಿಕೆಯ ಸಾಧ್ಯತೆಗಳು ಹೆಚ್ಚಾಗ ಬಹುದು.ಇದರಿಂದ ಔಷಧ ವ್ಯಾಪಾರಿಗಳಿಗೆ ತೊಂದರೆಯಾಗಬಹುದು.

ಫ಼ಿಜಿಷಿಯನ್ ಶ್ಯಾಂಪಲ್,ಜನರಿಕ್ ಹಾಗೂ ಪ್ರಪಗಂಡಾ ಕಂಪನಿಗಳ ಔಷಧಗಳ ಮಾರಾಟ ನಕಲಿ ವೈಧ್ಯರಿಂದ ಹವ್ಯಾಹಿತವಾಗಿ ನಡೆದಿದೆ.ಈ ಬಗ್ಗೆ ಔಷಧ ವ್ಯಾಪಾರಿಗಳು ಆಯಾ ವಿಭಾಗದ ಉಪ ಔಷಧ ನಿಯಂತ್ರಕರಿಗೆ,ವೃತ್ತದ ಸಹಾಯಕ ಔಷಧ ನಿಯಂತ್ರಕರಿಗೆ ಮತ್ತು ಔಷಧ ಪರಿವೀಕ್ಷಕರಿಗೆ ದೂರು ಸಲ್ಲಿಸುವ ಧೈರ್ಯ ಮಾಡಬೇಕು ಇಲ್ಲದಿದ್ದರೆ ಈ ಪಿಡುಗು ನಿಲ್ಲುವುದಿಲ್ಲ.

ಭಯಸ್ಥರು ನಮ್ಮ ಪತ್ರಿಕೆಯ ವಿಳಾಸಕ್ಕೆ ದೂರು ಸಲ್ಲಿಸಬಹುದು.ದೂರುದಾರರು ತಮ್ಮ ಹೆಸರು ಬರೆಯದೇ ದೂರು ಕಳುಹಿಸಬಹುದು.ಆದಷ್ಟು ಪತ್ರಿಕೆಯಿಂದ ನ್ಯಾಯ ದೊರಕಿಸಿ ಕೊಡಲು ಪ್ರಯತ್ನಿಸಲಾಗುವುದು.ಪತ್ರಿಕೆಯಲ್ಲಿ ಅಂತಹ ದೂರುಗಳ ವರದಿಗಳನ್ನು ಪ್ರಕಟಿಸಲು ಪತ್ರಿಕಾ ಬಳಗ ಸಿದ್ಧವಿದೆ.ದೂರು ಕಳುಹಿಸುವವರು ಫ಼ೋಟೊ ಸಮೇತ ಮಾಹಿತಿ ನೀಡಿದರೆ ಅನುಕೂಲ.

ತಮಗೆ ತೊಂದರೆಯಾಗುವ,ಸಾಮಾನ್ಯ ಜನರ ಆರೋಗ್ಯಕ್ಕೆ ಅಪಾಯವನ್ನು೦ಟು ಮಾಡುವ ಧುರುಳರ ಬಗ್ಗೆ ದೂರು ಕೊಡುವುದು ಪ್ರತಿಯೊಬ್ಬ ಫ಼ಾರ್ಮಾಸಿಸ್ಟ ಮತ್ತು ಔಷಧ ವ್ಯಾಪಾರಿಗಳ ಕರ್ತವ್ಯ.ಯಾರೂ ಯಾವುದಕ್ಕೂ ಹೆದರುವ ಅಗತ್ಯವಿಲ್ಲ.

ಔಷಧ ವ್ಯಾಪಾರಿಗಳ ಮೇಲೆ ಕೇಂದ್ರಿಕೃತವಾಗಿರುವ ಅಧಿಕಾರಿಗಳ ಕೆಲಸವನ್ನು ಇಂತಹ ದೂರುಗಳಿಂದ ಅವರ ಕೆಲಸವನ್ನು ಡೈವರ್ಟ ಮಾಡುವ ಮೂಲಕ ಅವರು ಉತ್ಸಾಹದಿಂದ ಕಾರ್ಯನಿರ್ವಹಿಸುವಂತಹ ವಾತಾವರಣ ನಿರ್ಮಿಸಬಹುದು.ಔಷಧ ವ್ಯಾಪಾರಿ ಸಂಘಗಳು ಕೂಡ ದೂರು ಕೊಡುವ,ಅಧಿಕಾರಿಗಳಿಗೆ ಸಾಥ್ ನೀಡುವ ಕೆಲಸವನ್ನು ಮಾಡಬೇಕು.

ಔಷಧ ವ್ಯಾಪಾರಿಗಳಿಗೆ ಲೈಸೆನ್ಸ್ ಇದೆ,ಜೊತೆಗೆ ಅಧಿಕಾರಿಗಳು ಇದ್ದಾರೆ,ದೂರು ಕೊಡಲು ಹಿಂಜರಿಯದೇ ಔಷಧ ವ್ಯಾಪಾರಿಗಳು ಅಧಿಕಾರಿಗಳ ಅಧಿಕಾರವನ್ನು ಸದುಪಯೋಗ ಪಡಿಸಿಕೊಳ್ಳುವತ್ತ ಗಮನಹರಿಸಲಿ.ಇದರಿಂದ ಅಧಿಕಾರಿಗಳಿಗೂ ತೃಪ್ತಿ , ಔಷಧ ವ್ಯಾಪಾರಿಗಳಿಗೂ ಸಂತೃಪ್ತಿ.

-ಅಶೋಕಸ್ವಾಮಿ ಹೇರೂರ.

About The Author

Leave a Reply