
ಡಾ.ಉಮೇಶ್ ಎಸ್.ಅವರು ರಾಜ್ಯ ಔಷಧ ನಿಯಂತ್ರಣ ಇಲಾಖೆಯ ಪ್ರಭಾರ ಔಷಧ ನಿಯಂತ್ರಕರಾಗಿ ನೇಮಕವಾದಾಗಿನಿಂದ ಇಲಾಖೆಯಲ್ಲಿ ಈಗ ತೀವ್ರ ಸಂಚಲನೆ ಉಂಟಾಗಿದೆ.
ಡಾ.ಉಮೇಶ್ ಅವರು ಔಷಧ ಪರಿವೀಕ್ಷಕರಾಗಿದ್ದಾಗ, ಸಹಾಯಕ ಔಷಧ ನಿಯಂತ್ರಕರಾಗಿದ್ದಾಗ,ಉಪ ಔಷಧ ನಿಯಂತ್ರಕರಾಗಿದ್ದಾ ತುಂಬಾ ಕ್ರೀಯಾಶೀಲತೆಯಿಂದ ಕೆಲಸ ಮಾಡುತ್ತಾ ಬಂದವರು.ಉಪ ಔಷಧ ನಿಯಂತ್ರಕರಾಗಿದ್ದಾಗ ಫೊಷ್ಟಿಂಗ್ ಇಲ್ಲದೆ ಗಟ್ಟಿಯಾದ ಕೆಲಸ ಮಾಡಲು ಅಡಚಣೆ ಉಂಟಾದಗಲೂ ಅವರು ಎದೆ ಗುಂದಿರಲಿಲ್ಲ.
ರಾಜ್ಯದ ಫ಼ಾರ್ಮಸಿ ಕಾಲೇಜಿನ ಎಕ್ಸಾಮಿಂಗ್ ಅಥಾರಿಟಿಯ ಮೆಂಬರ್ ಸೆಕ್ರೇಟರಿಯಾದಾಗ ಅಲ್ಲಿ ಹಲವು ಬದಲಾವಣೆಗಳನ್ನು ಜಾರಿಗೆ ತಂದ ಕೀರ್ತಿ ಅವರಿಗೆ ಸಲ್ಲುತ್ತದೆ.
ಸದಾ ಹಸನ್ಮುಖಿ,ಗಟ್ಟಿಯಾದ ಕೆಲಸ ನಿರ್ವಹಿಸುವಾಗಿನ ಶ್ರದ್ಧೆ ,ಟ್ರಬಲ್ ಶೂಟರ್ ವ್ಯಕ್ತಿತ್ವದ ಡಾ.ಉಮೇಶ್, ಇಲಾಖೆಯ ಮುಖ್ಯಸ್ಥರಾದಾಗಿನಿಂದ ಪರಿವೀಕ್ಷಣೆ, ತಪಾಸಣೆ,ದಾಳಿ,ದೂರುಗಳ ತೀವ್ರ ಪರಿಗಣನೆಯಿಂದಾಗಿ ರಾಜ್ಯ ಔಷಧ ನಿಯಂತ್ರಣ ಇಲಾಖೆ ಈಗ ಸಂಪೂರ್ಣ ಕ್ರೀಯಾ ಶೀಲವಾಗಿದೆ.
ಬೆಂಗಳೂರು ನಗರದಲ್ಲಿ ನಡೆಯುತ್ತಿದ್ದ ಹಲವು ಅದ್ವಾನಗಳಿಗೆ ಬ್ರೆಕ್ ಹಾಕಲು ಈಗಾಗಲೇ ಅವರು ಮುಂದಾಗಿದ್ದಾರೆ.ಮುಂದಿನ ದಿನಗಳಲ್ಲಿ ಇಡೀ ರಾಜ್ಯಾದ್ಯಂತ ಈ ಕಾರ್ಯಗಳು ಮುಂದುವರಿಯುತ್ತವೆ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ.
ಪರವಾನಿಗೆ ರಹಿತ ಔಷಧ ವ್ಯಾಪಾರಿಗಳಾದ ಕಿರಾಣಿ ಮತ್ತು ಸ್ಟೇಷನರಿ ಅಂಗಡಿ ಮಾಲೀಕರು ಹಾಗೂ ನಕಲಿ ವೈಧ್ಯರು,ಅನಧಿಕೃತ ವೈಧ್ಯರು ಔಷಧ ಮಾರಾಟ ಮಾಡುವ ತಮ್ಮ ದಂಧೆಗೆ ವಿದಾಯ ಹೇಳಬೇಕಾದ ಸಮಯ ಬಂದಿದೆ.ಅಧಿಕೃತ ವೈಧ್ಯರು ಸಹ ಶೆಡ್ಯೂಲ್ ಕೆ.ಯಲ್ಲಿ ವಿವರಿಸಿದಂತೆ ನಡೆದು ಕೊಳ್ಳುವುದು ಅನಿವಾರ್ಯವಾಗಲಿದೆ ಎಂಬುದು ಅಷ್ಟೇ ಮುಖ್ಯವಾಗಬಹುದು.
ವೈಧ್ಯರಿಗೆ ನೇರವಾಗಿ ಅಲೋಪತಿ ಔಷಧ ಸರಬರಾಜು ಮಾಡುವ ಔಷಧ ವಿತರಕರು ಹಾಗೂ ಔಷಧ ವ್ಯಾಪಾರಿಗಳು ಕೂಡಲೇ ತಮ್ಮ ಅಡ್ಡ ದಾರಿಯ ವ್ಯಾಪಾರಕ್ಕೆ ಪೂರ್ಣ ವಿರಾಮ ಹೇಳುವುದು ಈಗ ತುಂಬಾ ಸೂಕ್ತ.
ಇದರಂತೆ ನಕಲಿ ವೈಧ್ಯರ ಪಕ್ಕದಲ್ಲಿ ಕಾರ್ಯ ನಿರ್ವಹಿಸುವ ಔಷಧ ಅಂಗಡಿಗಳು ಸ್ಥಳಾಂತರಗೊಳ್ಳಬೇಕಾದ್ದು ಮತ್ತು ಔಷಧ ಅಂಗಡಿಯ ಆವರಣದಲ್ಲಿಯೇ ಕಾರ್ಯ ನಿರ್ವಹಿಸುವ ಅನಧಿಕೃತ ವೈಧ್ಯರನ್ನು ಅಲ್ಲಿಂದ ಹೊರ ಹಾಕುವ ಕೆಲಸ ಔಷಧ ವ್ಯಾಪಾರಿಗಳಿಗೆ ಅನಿವಾರ್ಯವಾಗಬಹುದು.
ಸರಕಾರಿ, ಅರೆ ಸರಕಾರಿ ಅಥವಾ ಇನ್ಯಾವುದೋ ಖಾಸಗಿ ಹುದ್ದೆಯಲ್ಲಿ ತೊಡಗಿರುವ ರಿಜಿಸ್ಟರ್ಡ್ ಫ಼ಾರ್ಮಾಸಿಸ್ಟಗಳ ಹೆಸರಿನಲ್ಲಿ ನಡೆಯುವ ಔಷಧ ಅಂಗಡಿಗಳಿಗೆ ಬೀಗ ಬೀಳುವ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ.ಅದಕ್ಕಾಗಿ ಔಷಧ ವ್ಯಾಪಾರಿಗಳು ಅಗತ್ಯ ಮಾರ್ಪಾಡುಗಳನ್ನು ಮಾಡಿಕೊಳ್ಳುವುದು ತುಂಬಾ ಅನಿವಾರ್ಯವಾಗಬಹುದು.
ಅಧಿಕಾರಿಗಳು ಸಹ ಕಚೇರಿಯಲ್ಲಿ ಕೆಲಸ ಮಾಡುವಲ್ಲಿ,
ಸರಿಯಾದ ಸಮಯಕ್ಕೆ ಪರಿವೀಕ್ಷಣೆ ನಡೆಸುವಲ್ಲಿ ಸಬೂಬು ಹೇಳುವುದಕ್ಕೆ ಕೊನೆಯಾಗಬಹುದು. ದೂರುಗಳನ್ನು ನಿರ್ಲಕ್ಷಿಸುವಂತಹ ಕೆಲಸಗಳು ಸಹ ಅಧಿಕಾರಿಗಳಿಂದ ನಡೆಯಲಾರವು ಎಂಬ ವಿಷಯ, ಡಾ.ಉಮೇಶ್ ಅವರ ವ್ಯಕ್ತಿತ್ವ ಬಲ್ಲವರು ಹೇಳದೇ ಇರಲಾರರು.
ಡಾ.ಉಮೇಶ್ ಅವರ ವ್ಯಕ್ತಿತ್ವ ಹಾಗೂ ವಿಚಾರಗಳನ್ನು ಬಲ್ಲವರ ವಿಶ್ವಾಸಕ್ಕೆ ದಕ್ಕೆ ಬರಲಾರದು,ಡಾ.ಉಮೇಶ್ ಅವರು ಸಹ ಔಷಧ ವ್ಯಾಪಾರಿಗಳ,ಫ಼ಾರ್ಮಾಸಿಸ್ಟಗಳ ನಿರೀಕ್ಷೆಗಳನ್ನು ಹುಸಿ ಮಾಡಲಾರರು ಎಂದಷ್ಟೇ ಈಗ ಹೇಳಲು ಸಾಧ್ಯ !
-ಅಶೋಕಸ್ವಾಮಿ ಹೇರೂರ.