ಬೆಂಗಳೂರು:ಅಗಷ್ಟ 19,ಶೇಷಾದ್ರಿಪುರಂ ಪೊಲೀಸ್ ಠಾಣೆ,ಬೆಂಗಳೂರು-20 ರ ಸಮೀಪವಿರುವ ಮೂರು ಮೆಡಿಕಲ್ ಶಾಪ್‌ಗಳಲ್ಲಿನ ನ್ಯೂನ್ಯತೆಗಳ ಬಗ್ಗೆ ರಾಜ್ಯ ಔಷಧ ನಿಯಂತ್ರಣ ಇಲಾಖೆಯ ಅಧಿಕಾರಿಗಳು ತನಿಖೆ ನಡೆಸಿದ್ದಾರೆ.
ಈ ಔಷಧ ಮಾರಾಟ ಮಳಿಗೆಗಳಲ್ಲಿ ಟೈಡಾಲ್, ಟ್ರಾಮಾಡೋಲ್,ಆಂಕ್ಸಿಟ್,ಟ್ರಾಮಾಜಾಕ್,ಅಲ್ಟ್ರಾ ಕಿಂಗ್ ಮತ್ತು ರೆಸ್ಟೈಲ್ ಈ ಮಾತ್ರೆಗಳು ಮೈಫೆಜೆಸ್ಟ್ ಕಿಟ್ ಈ ಔಷಧಗಳ ಖರೀದಿ ಮತ್ತು ಮಾರಾಟಗಳು ತಾಳೆಯಾಗದಿರುವ ಮತ್ತು ಮಾರಾಟದ ಬಿಲ್‌ಗಳನ್ನು ನೀಡದೆ, ಔಷಧ ಮಾರಾಟ ಮಾಡುತ್ತಿದ್ದುದರಿಂದ ಹಾಗೂ ವೈದ್ಯರ ಮಾದರಿಗಳ ಔಷಧಗಳು ಪರಿವೀಕ್ಷಣಾ ಸಮಯದಲ್ಲಿ ಕಂಡು ಬಂದಿದ್ದರಿಂದ ಈ ಔಷಧ ಮಾರಾಟ ಮಳಿಗೆಗಳ ಮೇಲೆ ಕ್ರಮ ಕೈಗೊಳ್ಳಲು ಅಧಿಕಾರಿಗಳು ಮುಂದಾಗಿದ್ದಾರೆ.
ಉಪ ಔಷಧ ನಿಯಂತ್ರಕರಾದ ಡಾ.ಕೆಂಪಯ್ಯ ಸುರೇಶ್, ಸಹಾಯಕ ಔಷಧ ನಿಯಂತ್ರಕರಾದ ಶ್ರೀಮತಿ ಚಂದ್ರಕಲಾ ಶಿಲ್ಪಾ ಮತ್ತು ಶ್ರೀಮತಿ ನಾಗಜ್ಯೋತಿ ಪರಿವೀಕ್ಷಣೆಯಲ್ಲಿ ಭಾಗವಹಿಸಿದ್ದರು ಎಂದು ತಿಳಿದು ಬಂದಿದೆ.