

ಬೆಂಗಳೂರು:ಅಗಷ್ಟ-19,ಬೆಂಗಳೂರು ನಗರದ ಮೂಡಲ ಪಾಳ್ಯ ಭಾಗದ ನಿವೇಶನವೊಂದರಲ್ಲಿ ಪರವಾನಿಗೆ ರಹಿತವಾಗಿ ಸಂಗ್ರಹಿಸಿಡಲಾಗಿದ್ದ ಸುಮಾರು ಏಳು ಲಕ್ಷ ರೂ.ಮೊತ್ತದ ಐ.ವಿ.ಫ಼್ಲೂವಿಡ್ ಗಳನ್ನು ಔಷಧ ನಿಯಂತ್ರಣ ಇಲಾಖೆಯ ಅಧಿಕಾರಿಗಳು ವಶ ಪಡಿಸಿ ಕೊಂಡಿದ್ದಾರೆಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ.
ಸಹಾಯಕ ಔಷಧ ನಿಯಂತ್ರಕರಾದ ಭಾಗ್ಯಜ್ಯೋತಿ, ಮಂಜುನಾಥ ರೆಡ್ಡಿ ,ಮಂಜುಳಾ ಹಾಗೂ ಔಷಧ ಪರಿವೀಕ್ಷರಾದ ಸುಹಾಸಿನಿ, ನೇಹಾ ಮತ್ತು ಉಪ ಔಷಧ ನಿಯಂತ್ರಕರಾದ ಡಾ.ಖಾಲಿದ್ ಅಹಮದ್ ಖಾನ್ ಅವರನ್ನೊಳಗೊಂಡ ಅಧಿಕಾರಿಗಳ ತಂಡ ಈ ದಾಳಿಯಲ್ಲಿ ಭಾಗವಹಿಸಿತ್ತು ಎಂದು ಹೇಳಲಾಗಿದೆ.