

ರಾಜ್ಯ ಔಷಧ ನಿಯಂತ್ರಕರಾದ ಡಾ.ಉಮೇಶ್ ತಾವೇ ಸ್ವತಃ ಅಧಿಕಾರಿಗಳ ತಂಡದೊಂದಿಗೆ ಫ಼ೀಲ್ಡಿಗಿಳಿದು ನೋವು ನಿವಾರಕ ಔಷಧಗಳ ದುರ್ಬಳಕೆ ಕುರಿತು ಪರಿಶೀಲನೆ ನಡೆಸಿದರು.
ಮೆ.ಅಭಿನವ್ ಮೆಡಿಕಲ್ಸ್, ಕತ್ರಿಗುಪ್ಪೆ ರಸ್ತೆ, ಬೆಂಗಳೂರು-85 ಈ ಸಂಸ್ಥೆಯ ಮೇಲೆ ಹಠಾತ್ ದಾಳಿ ನಡೆಸಿ,ಪರಿಶೀಲನೆ ನಡೆಸಿದರು.
ಈ ಔಷಧ ಮಾರಾಟ ಮಳಿಗೆಯಲ್ಲಿ ಯಾವುದೇ ಸ್ಟಾಕ್ ಕಂಡುಬಂದಿಲ್ಲವಾದರೂ ಅಪಾರ ಪ್ರಮಾಣದಲ್ಲಿ ಟಾಪೆಂಟಾಡಾಲ್ ಮತ್ತು ಇನ್ನಿತರ ನೋವು ನಿವಾರಕಗಳನ್ನು ಖರೀದಿಸಿರುವುದು ಮತ್ತು ಬಿಲ್ಲುಗಳನ್ನು ನೀಡದೇ ಮಾರಾಟ ಮಾಡಿರುವುದು ಕಂಡುಬಂದಿದ್ದು, ತನಿಖೆಯನ್ನು ನಡೆಸಲಾಗುತ್ತಿದೆ.
ಈ ದಾಳಿಯಲ್ಲಿ ಉಪ ಔಷಧ ನಿಯಂತ್ರಕರಾದ ಡಾ.ಖಾಲಿದ್ ಅಹಮದ್ ಖಾನ್,ರಮೇಶ್. ಪಿ,ಹಾಗೂ ಡಾ.ಕೆಂಪಯ್ಯ,ಆ ವೃತ್ತದ ಸಹಾಯ ಔಷಧ ನಿಯಂತ್ರಕರಾದ ಮಂಜುನಾಥ ರೆಡ್ಡಿ , ಶ್ರೀಮತಿ ಮಂಜುಳಾ ಮತ್ತು ಸಿಸಿಬಿ ತಂಡದವರು ತನಿಖೆಯಲ್ಲಿ ಪಾಲ್ಗೊಂಡಿದ್ದರು
ಕಚೇರಿಯಲ್ಲಿಯೇ ಕಡತಗಳೊಂದಿಗೆ ಕಾಲ ಕಳೆಯುತ್ತಿದ್ದ ಹಿಂದಿನ ಹಲವು ರಾಜ್ಯ ಔಷಧ ನಿಯಂತ್ರಕರ ಮಧ್ಯೆ ನೂತನ ಔಷಧ ನಿಯಂತ್ರಕರಾದ ಎಸ್.ಉಮೇಶ್ ನೇರವಾಗಿ ಔಷಧ ಮಾರಾಟ ಮಳಿಗೆಗಳ ಮೇಲೆ ಅಧಿಕಾರಿಗಳೊಂದಿಗೆ ದಾಳಿ ನಡೆಸಿರುವುದು ಅವರ ವಿಶೇಷ ವ್ಯಕ್ತಿತ್ವವನ್ನು ಎತ್ತಿ ತೋರಿಸಿದೆ.ಈ ಬಗ್ಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.