ಬೆಂಗಳೂರು: ಕರ್ನಾಟಕ ರಾಜ್ಯ ಔಷಧ ನಿಯಂತ್ರಣ ಇಲಾಖೆಯ ರಾಜ್ಯ ಔಷಧ ನಿಯಂತ್ರಕರಾಗಿದ್ದ ಬಿ.ಟಿ.ಖಾನಾಪುರೆ ಅವರು ದಿನಾಂಕ:31-07-2024 ರಂದು ವಯೋ ನಿವೃತ್ತಿ ಹೊಂದಿದ್ದಾರೆ.
ಈ ಹಿನ್ನೆಲೆಯಲ್ಲಿ ಇತ್ತೀಚಿಗೆ ಅಪರ ರಾಜ್ಯ ಔಷಧ ನಿಯಂತ್ರಕರಾಗಿ ನೇಮಕವಾಗಿದ್ದ ಡಾ.ಎಸ್.ಉಮೇಶ್ ಅವರನ್ನು ರಾಜ್ಯ ಔಷಧ ನಿಯಂತ್ರಕ ಹುದ್ದೆಗೆ ಸಾರ್ವಜನಿಕರ ಹಿತ ದೃಷ್ಟಿಯಿಂದ,ಆಡಳಿತಾತ್ಮಕ ಮತ್ತು ಸಮವರ್ತಿತ ಪ್ರಭಾರದಲ್ಲಿರಿಸಿ,ದಿನಾಂಕ:01-08-2024 ರಂದು ರಾಜ್ಯ ಸರಕಾರ ನೇಮಕ ಮಾಡಿ ಆದೇಶ ಹೊರಡಿಸಿದೆ.
ಔಷಧ ನಿಯಂತ್ರಕರಿಗೆ ಇದ್ದ ಎಲ್ಲಾ ಅಧಿಕಾರಗಳು, ಸರಕಾರದ ಈ ನೂತನ ಆದೇಶದಿಂದ ಡಾ.ಎಸ್.ಉಮೇಶ್ ಅವರಿಗೆ ಹಸ್ತಾಂತರವಾಗಿವೆ.
ಅಭಿನಂದನೆ:ಈ ಹಿನ್ನೆಲೆಯಲ್ಲಿ ಸುವರ್ಣ ಕರ್ನಾಟಕ ಔಷಧ ವ್ಯಾಪಾರಿಗಳ ಮತ್ತು ವಿತರಕರ ಸಂಘದ ಉಪಾಧ್ಯಕ್ಷ ಮತ್ತು ಕಾನೂನು ಘಟಕದ ಅಧ್ಯಕ್ಷ ಅಶೋಕಸ್ವಾಮಿ ಹೇರೂರ,ಡಾ.ಉಮೇಶ್ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.
ಶುಭ ಹಾರೈಕೆ: ವಯೋ ನಿವೃತ್ತಿ ಹೊಂದಿದ ಬಿ.ಟಿ.ಖಾನಾಪುರೆ ಅವರಿಗೂ ಅಶೋಕಸ್ವಾಮಿ ಹೇರೂರ ಪ್ರಕಟಣೆಯ ಮೂಲಕ ಶುಭ ಹಾರೈಸಿದ್ದಾರೆ.