Dr. Umesh appointed as Additional Drug Controller for the Karnataka state
ಕರ್ನಾಟಕ ರಾಜ್ಯದ ಔಷಧ ನಿಯಂತ್ರಣ ಇಲಾಖೆಯ ನೂತನ ಅಪರ ಔಷಧ ನಿಯಂತ್ರಕರಾಗಿ ಉಪ ಔಷಧ ನಿಯಂತ್ರಕರಾಗಿರುವ ಡಾ.ಉಮೇಶ್ ನೇಮಕವಾಗಿದ್ದಾರೆ.ನ್ಯಾಯಾಲಯದ ಆದೇಶದಂತೆ ನಜೀರ್ ಅಹಮ್ಮದ ಸ್ಥಾನದಲ್ಲಿ ಡಾ.ಉಮೇಶ್ ಅವರನ್ನು ನೇಮಿಸಲಾಗಿದೆ.
ಕರ್ನಾಟಕ ಆಡಳಿತ ಮಂಡಳಿಯು ಅರ್ಜಿ ಸಂಖ್ಯೆ:1712/2024ರ ಪ್ರಕರಣದಲ್ಲಿ ದಿನಾಂಕ: 11.06.2024ರಂದು ನೀಡಿದ ಆದೇಶ ಮತ್ತು ಮಾನ್ಯ ಉಚ್ಚ ನ್ಯಾಯಾಲಯವು ರಿಟ್ ಅರ್ಜಿ ಸಂಖ್ಯೆ: 15849 /2024 ಪ್ರಕರಣದಲ್ಲಿ ದಿನಾಂಕ:05.07.2024 ರಂದು ನೀಡಿರುವ ಆದೇಶದಂತೆ ನಜೀರ್ ಅಹಮ್ಮದ್, ಉಪ ಔಷಧ ನಿಯಂತ್ರಕರು ಇವರಿಗೆ ಅಪರ ಔಷಧ ನಿಯಂತ್ರಕ ವೃಂದದ ಹುದ್ದೆಗೆ ಮುಂಬಡ್ತಿ ನೀಡಲಾಗಿದ್ದ ಸರ್ಕಾರದ ಅಧಿಸೂಚನೆ ಸಂಖ್ಯೆ ಆಕುಕ 23 ಐಎಂಎಂ 2024, ದಿನಾಂಕ:02.04.2024ನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಿಂಪಡೆಯಲಾಗಿದೆ.
ಮುಂದುವರೆದು, ಔಷಧ ನಿಯಂತ್ರಣ ಇಲಾಖೆಯ ಡಾ. ಉಮೇಶ್ ಎಸ್., ಉಪ ಔಷಧ ನಿಯಂತ್ರಕರು-1, ಕೇಂದ್ರ ಕಛೇರಿ, ಬೆಂಗಳೂರು ಇವರಿಗೆ ರೂ.74,400-1,09,600ರ ವೇತನ ಶ್ರೇಣಿಯ ಅವರ ಔಷಧ ನಿಯಂತ್ರಕರ ವೃಂದದ ಹುದ್ದೆಗೆ ಮುಂಬಡ್ತಿ ನೀಡಿ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಸ್ಥಳ ನಿಯುಕ್ತಿಗೊಳಿಸಿ ಆದೇಶಿಸಿದೆ.
ನಜೀರ್ ಅಹಮ್ಮದ್, ಉಪ ಔಷಧ ನಿಯಂತ್ರಕರು ಇವರನ್ನು ಸ್ತಳ ನಿಯುಕ್ತಿಗಾಗಿ ಸರ್ಕಾರದಲ್ಲಿ ವರದಿ ಮಾಡಿಕೊಳ್ಳಲು ಆದೇಶಿಸಿದೆ.
ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ ಸರ್ಕಾರದ ಅಧೀನ ಕಾರ್ಯದರ್ಶಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ (ಭಾವೈವ ಮತ್ತು ಸಮನ್ವಯ) ದಿ:18-07-2024 ರಂದು ಅಧಿಸೂಚನೆ ಹೊರಡಿಸಿದೆ.
