

ನಿಯಂತ್ರಣವಿಲ್ಲದ ಮಿತಿ ಮೀರಿದ ಲಂಚದ ಹಾವಳಿ:
ರಾಜ್ಯ ಔಷಧ ನಿಯಂತ್ರಣ ಇಲಾಖೆಯಲ್ಲಿ ಅಧಿಕಾರಿಗಳ ಲಂಚದ ಹಾವಳಿ ಮಿತಿ ಮೀರಿದೆ.ಇದನ್ನು ಮಟ್ಟ ಹಾಕಲು ಇಲಾಖೆಯ ಮೇಲಾಧಿಕಾರಿಗಳಿಗೂ ಆಗುತ್ತಿಲ್ಲ.
ಹೊಸದಾಗಿ ಲೈಸೆನ್ಸ್ ಪಡೆಯಲು ಕೆಲವು ವೃತ್ತಗಳಲ್ಲಿ ರೂ.50 ಸಾವಿರ ನಿಗದಿಯಾಗಿದೆ.ರೂ.50 ಸಾವಿರ ಪಾವತಿಸಿದರೂ ರೂ.4 ಸಾವಿರ ಟಿ.ಎ.,ಡಿ.ಎ.ಎಂದು ಹೆಚ್ಚಿಗೆ ಕೊಡಬೇಕು.
ಕಚೇರಿ ಕ್ಲಾರ್ಕ್ ಗೆ ರೂ.6000/- ಇತರ ಸಿಬ್ಬಂದಿಗೆ ತಲಾ ಒಂದು ಸಾವಿರ ನೀಡಬೇಕು ಎಂದು ಹೊಸದಾಗಿ ಔಷಧ ವ್ಯಾಪಾರಕ್ಕೆ ಬರುವ ವ್ಯಕ್ತಿಗಳು ದೂರುತ್ತಿದ್ದಾರೆ.
ಮೇಲಾಧಿಕಾರಿಗಳಿಗೆ ನೀಡಬೇಕು ಎಂದೇ ಪರವಾನಗಿ ಪ್ರಾಧಿಕಾರಿಗಳು ಹೇಳುತ್ತಾರೆ.ಪತ್ರಿಕೆಗೆ ಮಾಹಿತಿ ಸಿಕ್ಕ ಪ್ರಕಾರ ಎಲ್ಲಾ ವೃತ್ತದಲ್ಲಿ ಈ ಮಟ್ಟದಲ್ಲಿ ಲಂಚ ಪಾವತಿ ಇಲ್ಲ.ಕಡಿಮೆ ಮೊತ್ತದ ಹಣದ ಬೇಡಿಕೆ ಇದೆ.ಆಯ್ದ ಕೆಲವು ಜಿಲ್ಲೆಗಳಲ್ಲಿ ಮಾತ್ರ ಅರ್ದ ಲಕ್ಷದಷ್ಟು ಮೊತ್ತವನ್ನು ಮೀರಿದೆ.
ಔಷಧ ಪರಿವೀಕ್ಷರು ಮತ್ತು ಉಪ ಔಷಧ ನಿಯಂತ್ರಕರು ಹಣ ಸಂಗ್ರಹಿಸುವ ಬಗ್ಗೆ ಅಷ್ಟಾಗಿ ದೂರು ಕೇಳಿ ಬಂದಿಲ್ಲ.ವರ್ಷದ ಮಾಮೂಲು ಎಂದು 10 ರಿಂದ 15 ಸಾವಿರ ಹಣ ಪಾವತಿಸಬೇಕಾಗುತ್ತದೆ.ಲೈಸೆನ್ಸ್ ರಿನಿವಲ್ ಟೈಮ್ ನಲ್ಲಿ ಹಗ್ಗ ಜಗ್ಗಾಟ ಇದ್ದದ್ದೆ.ಒಂದಿಷ್ಟು ಚೌಕಾಸಿ ಮಾಡಿ,ವರ್ಷದ ಮಾಮೂಲಿನ ಜೊತೆಗೆ ರಿನಿವಲ್ ಮಾಮುಲು ಕೊಡಬೇಕಾಗುತ್ತದೆ.
ಹೊಸ ಅಂಗಡಿ ಆರಂಭಿಸುವ ಹುಮ್ಮಸ್ಸಿನಲ್ಲಿ ಔಷಧ ಮಾರಾಟದ ಪರವಾನಗಿ ಪಡೆಯುವವರು, ಅಧಿಕಾರಿಗಳು ಕೇಳಿದಷ್ಟು ಹಣ ಪಾವತಿಸುತ್ತಿರುವುದು ಕಂಡು ಬಂದಿದೆ.ಅಂಗಡಿ ಶಿಫ಼್ಟಿಂಗ್,ಪಾರ್ಟನರ್ ಶಿಪ್ ಬದಲಾವಣೆಯ ಸಂದರ್ಭದಲ್ಲೂ ಔಷಧ ವ್ಯಾಪಾರಿಗಳು ಅಸಾಹಯಕರಾಗಿ ಕಚೇರಿಯಲ್ಲಿ ಕೇಳಿದಷ್ಟು ಹಣ ಪಾವತಿಸಬೇಕಾದ ಉಸಿರು ಗಟ್ಟುವಂತಹ ವಾತಾವರಣ ಇದೆ.
ಬರೀ ಔಷಧ ನಿಯಂತ್ರಣ ಇಲಾಖೆ ಮಾತ್ರವಲ್ಲ ಎಲ್ಲಾ ಸರಕಾರಿ ಕಚೇರಿಗಳಲ್ಲಿಯೂ ಲಂಚದ ಹಾವಳಿ ಇದ್ದದ್ದೆ. ಇದನ್ನು ಒಂದೋ ಸರಕಾರ ನಿಗ್ರಹಿಸಬೇಕು.ಇಲ್ಲಾ ಸಂಘ ಸಂಸ್ಥೆಗಳು ಲಂಚ ನಿರ್ಮೂಲನೆಗೆ ಮುಂದಾಗ ಬೇಕು.
ಎ.ಸಿ.ಬಿ.ಚನ್ನಾಗಿತ್ತು.ಲೋಕಾಯುಕ್ತದಲ್ಲಿ ಹೆಚ್ಚಿನ ಪ್ರೊಸಿಜರ್ ಇದೆ ಎನ್ನುತ್ತಾರೆ ಲಂಚ ವಿರೋಧಿ ಸಂಘಟನೆಗಳು.ಏನೇ ರೇಡ್ ಆದರೂ ಸಹ ನ್ಯಾಯಾಲದಲ್ಲಿ ಪ್ರಕರಣಗಳು ಬಿದ್ದು ಹೋಗುವ ಉದಾಹರಣೆಗಳು ಇಲ್ಲದೇ ಇಲ್ಲ.ಬರೀ ಅಡ್ಜಸ್ಟಮೆ೦ಟ್ ವ್ಯವಹಾರ.
ಜನ ಸುಧಾರಿಸಿದರೆ,ಸಮಾಜ ಸುಧಾರಿಸಿತು.ಸಮಾಜ ಸುಧಾರಿಸಿದರೆ,ದೇಶ ಸುಧಾರಿಸಿತು ! ಜನರೇ ಲಂಚ ಕೊಡಲು ಮುಗಿ ಬೀಳುವಾಗ ಯಾವ ಕಾನೂನು, ಏನೂ ಮಾಡುವುದಿಲ್ಲ.
-ಅಶೋಕಸ್ವಾಮಿ ಹೇರೂರ.