


ರಾಯಚೂರು ಜಿಲ್ಲೆಯ ಲಿಂಗಸೂಗುರು ತಾಲೂಕಿನ ಛತ್ರ ಗ್ರಾಮದಲ್ಲಿ ಬಂಗಾಳ ಮೂಲದ ಉತ್ತಮ ಕುಮಾರ ಎಂಬ ವ್ಯಕ್ತಿ ಕ್ಲಿನಿಕ್ ಕಮ್ ಮೆಡಿಕಲ್ ಸ್ಟೊರ್ಸ್ ನಡೆಸುತ್ತಿದ್ದಾನೆ.
ಕಳೆದ 2೦ ವರ್ಷಗಳಿಂದ ಈ ಸರ್ವಿಸ್ ನಲ್ಲಿ ನಿರತವಾಗಿರುವ ಈ ವ್ಯಕ್ತಿಯ ಆಸ್ಪತ್ರೆ ಅನಧಿಕೃತವಾದದ್ದು. ಮೆಡಿಕಲ್ ಸ್ಟೋರ್ಸ್ ಗೆ ಲೈಸೆನ್ಸ್ ಇದೆಯೋ ಇಲ್ಲವೋ ಎಂಬುದನ್ನು ನಿಯಂತ್ರಣ ಇಲ್ಲದ ಔಷಧ ನಿಯಂತ್ರಣ ಇಲಾಖೆಯವರೇ ಹೇಳಬೇಕು.ಲಕ್ಷಾಂತರ ರೂಪಾಯಿ ಮೌಲ್ಯದ ಔಷಧಿ ಸಂಗ್ರಹಿಸಿರುವ ಈ ಧುರುಳನ ಮೇಲೆ ವೈಧ್ಯಾಧಿಕಾರಿಗಳ ಮತ್ತು ಔಷಧ ನಿಯಂತ್ರಣ ಇಲಾಖೆಯ ಅಧಿಕಾರಿಗಳ ಕಣ್ಣು ಬಿದ್ದಿಲ್ಲ.
ಕಣ್ಣಿದ್ದು ಕುರುಡಾದ ಅಧಿಕಾರಿಗಳಿಗೆ ಏನು ಹೇಳಬೇಕೆಂದು ತಿಳಿಯದಾಗಿದೆ.ಸಾರ್ವಜನಿಕರು ಜಾಗ್ರತೆಗೊಂಡರೆ,ಸರಕಾರ ಜಾಗ್ರತೆಗೊಳ್ಳಲು ಸಾಧ್ಯ.ಆದ್ದರಿಂದ ಸಾರ್ವಜನಿಕರ ಈ ತಪ್ಪಿಗೆ ಸಾರ್ವಜನಿಕರೇ ಹೊಣೆ !