ರಾಯಚೂರು: ಜಿಲ್ಲೆಯ ಸಿಂಧನೂರು ತಾಲೂಕಿನಲ್ಲಿ ನಕಲಿ ವೈದ್ಯರ ಅಲೋಪತಿ ಔಷಧಗಳ ವ್ಯಾಪಾರ ಬಲು ಜೋರು ! ಈ ರಾಯಚೂರು ಜಿಲ್ಲೆಯಲ್ಲಿ ಇಂತಹ ಖಧೀಮರದ್ದೇ ಹಾವಳಿ ಹೆಚ್ಚು !
ಈ ಬಗ್ಗೆ ದೂರು ಕೊಟ್ಟರೂ ಇಲ್ಲ ,ವರದಿ ಮಾಡಿದರೂ ಇಲ್ಲ , ಅಧಿಕಾರಿಗಳು ಈ ವಿಷಯವಾಗಿ ಕಾಳಜಿವಹಿಸುವುದೇ ಇಲ್ಲ.ಈ ಅವ್ಯವಹಾರವನ್ನು ಮಟ್ಟ ಹಾಕಬೇಕಾದ ಅಧಿಕಾರಿಗಳು ಲಂಚ ತಿಂದು ಪರಾರಿಯಾಗುತ್ತಾರೆ.ದೂರುಗಳು ಹೆಚ್ಚಾದರೆ, ರಾಯಚೂರು ಜಿಲ್ಲೆ ಸರಿ ಇಲ್ಲ ಎಂದು ಬಾಯಿ ಬಾಯಿ ಬಡಿದುಕೊಂಡು, ಅಧಿಕಾರಿಗಳು ವರ್ಗವಾಗಿ ಹೋಗುತ್ತಾರೆ.ಬೊಬ್ಬೆ ಹೊಡೆಯುತ್ತಲೇ ಬರೀ ಔಷಧ ವ್ಯಾಪಾರಿಗಳನ್ನೇ ಟಾರ್ಗೆಟ್ ಮಾಡಿಕೊಂಡು, ಜೇಬು ತುಂಬಿಸಿಕೊಂಡು ಜಿಲ್ಲೆಯನ್ನು ತೊರೆಯುತ್ತಾರೆ.
ಇಲ್ಲೊಂದು ತಾಜಾ ಉದಾಹರಣೆ ಇದೆ ನೋಡಿ.ಹೆಸರು ಶುಕಾಂತು,ಕೊಲ್ಕತ್ತಾದಿಂದ ಬಂದಿದ್ದಾನೆ.ಕ್ಲಿನಿಕ್ ವಿಳಾಸ, ಗ್ರಾಮ ಪಂಚಾಯತ್ ಕಾರ್ಯಾಲಯದ ಎದುರುಗಡೆ, ಬಾಗಲವಾಡ ಗ್ರಾಮ,ಮಾನವಿ ತಾಲ್ಲೂಕು ಇವನು ಕೊಟ್ಟಿದ್ದೇ ಟ್ರೀಟ್ಮೆ೦ಟ್,ನೀಡಿದ್ದೇ ಮೆಡಿಸಿನ್ !
ಎಂಟಿ ಬಯೋಟಿಕ್ ಆದರೇನೂ,ಸ್ಟಿರೈಡ್ ಆದರೇನು ? ರೋಗಿಗಳ ಕಿಡ್ನಿ ಹಾಳಾದರೇನೂ ? ಲಿವರ್ ಕೆಟ್ಟರೇನೂ ? ಯಾರೂ ಕೇಳುವವರೇ ಇಲ್ಲ.ಆರೋಗ್ಯಾಧಿಕಾರಿಗಳು ಕ್ರಮಗೈಗೊಳ್ಳಲು ಮುಂದಾದರೆ,ರಾಜಕಾರಣಿಗಳು ಎಂಟ್ರಿ ಕೊಟ್ಟು ಬಿಡುತ್ತಾರೆ.ಇಂತಹ ಖಧೀಮರನ್ನು ರಕ್ಷಿಸಲು ಅವರು ಮುಂದಾಗುತ್ತಾರೆ.ಹೀಗಾಗಿ ಆರೋಗ್ಯ ಇಲಾಖೆಯ ಅಧಿಕಾರಿಗಳು ಅಸಾಹಯಕರಾಗುತ್ತಾರೆ.
ಔಷಧ ನಿಯಂತ್ರಣ ಇಲಾಖೆಯ ಅಧಿಕಾರಿಗಳು ಇಂತಹವರ ಮೇಲೆ ಕ್ರಮ ಕೈಗೊಳ್ಳಬೇಕು.ಅದರೆ ಅವರಿಗೆ ರಿಸ್ಕ್ ಬೇಕಾಗಿಲ್ಲ.ಅವರ ಆಟ್ಟಹಾಸವೇನಿದ್ದರೂ ಔಷಧ ವ್ಯಾಪಾರಿಗಳ ಮೇಲೆ.ಉತ್ತರನ ಪೌರುಷ ಒಲೆಯ ಮುಂದೆ ಎನ್ನುವಂತೆ.
ಎಲ್ಲಾ ಸಹಾಯಕ ಔಷಧ ನಿಯಂತ್ರಕರು,ಒಂದು ಮೆಡಿಕಲ್ ಸ್ಟೊರ್ಸ್ ಗೆ ಲೈಸೆನ್ಸ್ ಕೊಡಲು ಬರೊಬ್ಬರಿ ರೂ.50 ಸಾವಿರ ಫ಼ಿಕ್ಸ್ ಮಾಡಿದ್ದಾರೆ.ಮೇಲೆ ಕೊಡಬೇಕು ! ಅಲ್ಲಿ ಕೊಡಬೇಕು ! ಇಲ್ಲಿ ಕೊಡಬೇಕು ! ಎಂದು ಹೇಳುತ್ತಲೇ ಹಣ ಪೀಕುತ್ತಾರೆ.ಮೇಲೆ ಕೊಡುತ್ತಾರೋ, ಬಿಡುತ್ತಾರೋ ಒಟ್ಟಾರೆ ಹಣ ಪೀಕುತ್ತಾರೆ.
ಔಷಧ ವ್ಯಾಪಾರಿಗಳು ಬಿಡಿ,ಕೇಳಿದ ಕೂಡಲೇ ಕೇಳಿದ್ದಕ್ಕಿಂತ ಹೆಚ್ಚಿಗೆ ಮೇಲೊಂದು ನೋಟಿಟ್ಟು ಕೊಡುತ್ತಾರೆ.ಅವರಿಗೆ ಲೈಸೆನ್ಸ್ ಪಡೆಯುವುದೊಂದೇ ಮುಖ್ಯ ಉದ್ದೇಶವಾಗಿ ಬಿಟ್ಟಿರುತ್ತದೆ.ಅವಸರದಲ್ಲಿ ಔಷಧ ಮಾರಾಟ ಮಾಡಲು ಹೊರಡುವುದೇ ಅವರ ಮುಖ್ಯ ಉದ್ದೇಶ (ಧುರುದ್ದೇಶ) ಆಗಿರುತ್ತದೆ.
ಅವರಾದರೂ ಎಂತಹವರ ಪ್ರಿಸ್ಕ್ರಪ್ಶನ್ ಗಳಿಗೆ ಔಷಧ ಮಾರಾಟ ಮಾಡುತ್ತಾರೆ ? ಇಂತಹ ನಕಲಿಗಳ ಚೀಟಿಗಳ ಆಧಾರದ ಮೇಲಲ್ಲವೆ ? ಇಲ್ಲಿ ಎಲ್ಲರೂ ಕಳ್ಳರೆ ! 50 ಸಾವಿರ ಕೊಟ್ಟರೆ,ಅಧಿಕಾರಿಗಳು ಲೈಸೆನ್ಸ್ ನ್ನು ಕೈಗೆ ಕೊಡುತ್ತಾರೆ.ಅಲ್ಲಿ ಡಾಕ್ಟರ್ ಇದ್ದಾರೋ ಇಲ್ಲವೋ ಅವರಿಗ್ಯಾಕೆ ಬೇಕು ? ಅವರಿಗೆ ಹಣ ಬಂದರೆ ಸಾಕು !
ಅಧಿಕಾರಿಗಳೇ, ಮೊದಲು ಅನಧಿಕೃತವಾಗಿ ಅಲೋಪತಿ ಔಷಧ ವ್ಯಾಪಾರದ ಮೂಲಕ ಧಂದೆ ನಡೆಸುವ ನಕಲಿ ವೈದ್ಯರ ಜುಟ್ಟಿಗೆ ಕೈ ಹಾಕಿ.ನಂತರ ಕಸಾಯಿ ಖಾನೆಗಳಿಗೆ ಲೈಸೆನ್ಸ್ ಕೊಡುವುದನ್ನು ನಿಲ್ಲಿಸಿ.ತಪ್ಪು ಮಾಡಲು ಲೈಸೆನ್ಸ್ ಕೊಟ್ಟು ,ಅದಕ್ಕಾಗಿ ಲಂಚವನ್ನೂ ಪಡೆದು,ಮತ್ತೇ ಏನಾದರೂ ತಪ್ಪು ಮಾಡಿದರೆ, ಒಂದೊಂದನ್ನೂ ಲೆಕ್ಕವಿಟ್ಟು ಅದಕ್ಕೆ ಅನುಗುಣವಾಗಿ ಲಂಚ ಪಡೆಯುವುದನ್ನು ಬಿಡಿ.
ಔಷಧ ವ್ಯಾಪಾರಿಗಳು ಕೆಟ್ಟಿರುವುದು,ಕೆಡುತ್ತಿರುವುದು ಔಷಧ ನಿಯಂತ್ರಣ ಇಲಾಖೆಯಿಂದಲೇ ! ಸಾಕ್ಷಿ ಎಷ್ಟು ಬೇಕು ? ಸಮರ್ಥಿಸಲು ಉದಾಹರಣೆಗಳು ಎಷ್ಟು ಬೇಕು ?
ನಾಚಿಕೆ ಯಾರಿಗಾಗಬೇಕು ? ಸರ್ಟಿಫಿಕೇಟ್ ಬಾಡಿಗೆ ಕೊಟ್ಟ ಫ಼ಾರ್ಮಾಸಿಸ್ಟಗಳಿಗೆ ? ಬೇರೆಯವರ ಸರ್ಟಿಫಿಕೇಟ್ ಪಡೆದು ಔಷಧ ವ್ಯಾಪಾರ ಮಾಡುವವರಿಗೆ ? ಲಂಚ ಪಡೆದು ಲೈಸೆನ್ಸ್ ಕೊಟ್ಟವರಿಗೆ ? ಆ ದೇವರೂ ಇದಕ್ಕೆ ಉತ್ತರಿಸಲಾರ.
-ವರದಿಗಾರ.