ಪೋಲಿಸರ ಹೆಸರಿನಲ್ಲಿ ಔಷಧ ವ್ಯಾಪಾರಿಗಳಿಗೆ ವಂಚನೆಗೆ ಯತ್ನ.
ಗಂಗಾವತಿ: ಪೋಲೀಸ್ ಅಧಿಕಾರಿಯ ಹೆಸರಿನಲ್ಲಿ ಸೆಲ್ ಫ಼ೋನ್ ನಲ್ಲಿ ಪೋಲೀಸ್ ಅಧಿಕಾರಿಯಂತೆ ಕಾಣುವ ವ್ಯಕ್ತಿಯ ಫ಼ೋಟೋ ಹಾಕಿಕೊಂಡು, ಕಾರಟಗಿಯ ಬಸವಶ್ರೀ ಮೆಡಿಕಲ್ ಸ್ಟೊರ್ಸಗೆ ಫ಼ೋನ್ ಮಾಡಿ ವಂಚಿಸಲು ಯತ್ನಿಸಲಾಗಿದೆ.
ಇತ್ತೀಚಿಗೆ ನಗರದಲ್ಲಿ ಮಾಜಿ ಸೈನಿಕ ಅಥವಾ ಪೋಲೀಸ್ ಅಧಿಕಾರಿ ಎಂದು ಗುರುತಿಸಿಕೊಂಡು ಔಷಧ ಅಂಗಡಿಗಳಲ್ಲಿ ಔಷಧಿಯನ್ನು ಖರೀದಿಸಿ,ಫ಼ೋನ್ ಪೇ ಅಥವಾ ಗೂಗಲ್ ಪೇ ಮಾಡಿ,ಗೊಂದಲದಿಂದ ಹೆಚ್ಚಿಗೆ ಹಣ ಕಳಿಸಿರುತ್ತೇವೆ ಎಂದು ಸುಳ್ಳು ಮೆಸೇಜ್ ತೋರಿಸಿ ಉಳಿದ ಹಣವನ್ನು ಹಿಂತಿರುಗಿಸುವಂತೆ ಕೇಳುತ್ತಾರೆ. ಆದರೆ ಆ ಹಣ ಪಾವತಿಯಾಗಿರುವುದಿಲ್ಲ.ಆದರೆ ಕೆಲವು ಔಷಧ ವ್ಯಾಪಾರಿಗಳು ಹಣವನ್ನು ಪಾವತಿಸಿ ಮೋಸ ಹೋಗಿದ್ದಾರೆ.
ಈ ರೀತಿಯ ಮೋಸದ ನೆಟ್ ವರ್ಕ ಇಡೀ ರಾಜ್ಯದಲ್ಲಿ ನಡೆಯುತ್ತಿರುವುದು ನಮ್ಮ ಸಂಘದ ಗಮನಕ್ಕೆ ಬಂದಿರುತ್ತದೆ ಎಂದು ಸುವರ್ಣ ಕರ್ನಾಟಕ ಔಷಧ ವ್ಯಾಪಾರಿಗಳ ಮತ್ತು ವಿತರಕರ ಸಂಘದ ಕಾನೂನು ಘಟಕದ ಅಧ್ಯಕ್ಷ ಅಶೋಕಸ್ವಾಮಿ ಹೇರೂರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರತಿಯೊಬ್ಬ ಔಷಧ ವ್ಯಾಪಾರಿಗಳು ಎಚ್ಚರಿಕೆಯಿಂದ ವೈವಾಟು ನಡೆಸಬೇಕು ಎಂದು ಹೇಳಿರುವ ಅವರು ಅಂತಹ ವ್ಯಕ್ತಿಗಳು ಕಂಡು ಬಂದಲ್ಲಿ ಸ್ಥಳೀಯ ಪೋಲೀಸ್ ಠಾಣೆಗೆ ಒಪ್ಪಿಸಲು ಮತ್ತು ದೂರು ಕೊಡಲು ಸೂಚಿಸಿದ್ದಾರೆ.