December 24, 2024
IMG-20240124-WA0059

ಗಂಗಾವತಿ: ಮಿಲಿಟರಿ ಹೆಸರು ಹೇಳಿಕೊಂಡು ಮೆಡಿಸಿನ್ ಲಿಸ್ಟ್ ಮಾಡಿ, ಖರೀಧಿಸುವ ನೆಪದಲ್ಲಿ ಆನ್ ಲೈನ್ ಪೇಮೆಂಟ್ ಮಾಡುವುದಾಗಿ ಹೇಳಿ ಮೋಸ ಮಾಡುವ ತಂಡವೊಂದು ಗಂಗಾವತಿ ನಗರದಲ್ಲಿ ಓಡಾಡುತ್ತಿದೆ.

ನಗರದ ಆಶ್ರಯ ಕಾಲೋನಿಯ ಬಳ್ಳಾರಿ ಮೆಡಿಕಲ್ ಸ್ಟೊರ್ಸ್ ಮಾಲೀಕರಿಗೆ  ಫ಼ೋನ್ ಮಾಡಿ ಮೆಡಿಸಿನ್ ಕೊಡಲು ಕೇಳಿದ್ದಾರೆ. ಫ಼ೋನ್ ಪೇ ಮಾಡುವುದಾಗಿ ಹೇಳಿದ್ದಾರೆ.ಅವಸರದಲ್ಲಿ ಹೆಚ್ಚಿನ ಮೊತ್ತ ಪಾವತಿಸಿರುವುದಾಗಿ ಹೇಳಿ, ಮಾಡದ ನಕಲಿ ಪೇಮೆಂಟ್ ಕೋಡ್ ತೋರಿಸಿ,ಹಣ ಪಡೆಯುವ ಹುನ್ನಾರ ನಡೆದಿದೆ.

ಈ ರೀತಿ ಜೂಲೈ ನಗರದ ಸಂತೋಷ ಮೆಡಿಕಲ್ ಸ್ಟೊರ್ಸ್ ನವರಿಗೆ ಮೋಸ ಮಾಡಲು ಕಳೆದ ಒಂದೆರಡು ದಿನಗಳ ಹಿಂದೆ ಪ್ರಯತ್ನಿಸಿದ್ದು , ಬುಧುವಾರ ಮತ್ತೇ ಇದೇ ಪ್ರಯತ್ನ ನಡೆದಿದೆ.ಕಾರಟಗಿ ಪಟ್ಟಣದ ಬಸವಶ್ರೀ ಮೆಡಿಕಲ್ ಸ್ಟೊರ್ಸ್ ನವರಿಗೂ ಇದೇ ರೀತಿ ಮೋಸ ಮಾಡಲು ಯತ್ನಿಸಲಾಗಿದೆ. ನಕಲಿ ಐ.ಡಿ.ಕಾರ್ಡ ಮತ್ತು ಫ಼ೋಟೋ ತೋರಿಸಿಯೂ ವಂಚನೆ ಮಾಡಲಾಗುತ್ತಿದೆ.

ಮೈಸೂರು ನಗರದಲ್ಲಿ ಈಗಾಗಲೇ ಸಾಕಷ್ಟು ಔಷಧ ವ್ಯಾಪಾರಿಗಳಿಗೆ ಮೋಸ ಮಾಡಲಾಗಿದೆ ಎಂದು ಅಲ್ಲಿನ ಮಾದ್ಯಮಗಳು ವರದಿ ಮಾಡಿವೆ.

ಇಂತಹ ಪ್ರಕರಣಗಳು ಕಂಡು ಬಂದಲ್ಲಿ ಸಮೀಪದ ಪೋಲಿಸ್ ಠಾಣೆಗೆ ದೂರು ಕೊಡಲು ಸುವರ್ಣ ಕರ್ನಾಟಕ ಔಷಧ ವ್ಯಾಪಾರಿಗಳ ಮತ್ತು ವಿತರಕರ ಸಂಘದ ಉಪಾಧ್ಯಕ್ಷ ಮತ್ತು ಕಾನೂನು ಘಟಕದ ಅಧ್ಯಕ್ಷ ಅಶೋಕಸ್ವಾಮಿ ಹೇರೂರ ಔಷಧ ವ್ಯಾಪಾರಿಗಳಿಗೆ ಮೆಸೇಜ್ ಗಳ ಮೂಲಕ ಸೂಚಿಸಿದ್ದಾರೆ.

About The Author

Leave a Reply