ಔಷಧ ಮಾರಾಟ ಇಬ್ಬರು ನಕಲಿ ವೈಧ್ಯರ ಮೇಲೆ ಪ್ರಕರಣ ದಾಖಲು:
ಗಂಗಾವತಿ: ಕನಕಗಿರಿ ತಾಲೂಕಿನ ನವಲಿ ಗ್ರಾಮದ ಎಸ್.ನಾರಾಯಣಪ್ಪ ಮತ್ತು ಕಾರಟಗಿ ತಾಲೂಕಿನ ಮುಷ್ಟೂರ ಗ್ರಾಮದ ಕುಬೇರಪ್ಪ ಎಂಬ ಇಬ್ಬರು ನಕಲಿ ವೈಧ್ಯರ ಮೇಲೆ ಪರವಾನಗಿ ರಹಿತ ಔಷಧ ಮಾರಾಟದಲ್ಲಿ ತೊಡಗಿದ ಹಿನ್ನೆಲೆಯಲ್ಲಿ ನಗರದ ಹೆಚ್ಚುವರಿ ಸಿವಿಲ್ ಜಡ್ಜ್ ಮತ್ತು ಜೆ.ಎಮ್.ಎಫ಼್.ಸಿ. ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿದೆ.
ಸದ್ರಿ ನಕಲಿ ವೈಧ್ಯರ ಮೇಲೆ ಅಲೋಪತಿ ಔಷಧಗಳ ದಾಸ್ತಾನು ಮತ್ತು ಮಾರಾಟ ಮಾಡುತ್ತಿದ್ದ ಅಪಾದನೆಯ ಮೇಲೆ ಕೊಪ್ಪಳ ವೃತ್ತದ ಸಹಾಯಕ ಔಷಧ ನಿಯಂತ್ರಕರಾದ ವೆಂಕಟೇಶ ರಾಠೋಡ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಕೆಲವು ವರ್ಷಗಳ ಹಿಂದೆ ಈ ನಕಲಿ ವೈಧ್ಯರ ಮೇಲೆ ರಾಜ್ಯದ ವಿವಿಧ ಕಡೆಯಿಂದ ಬಂದಿದ್ದ ಔಷಧ ನಿಯಂತ್ರಣ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿ, ಪ್ರಕರಣಗಳನ್ನು ಪತ್ತೆ ಹಚ್ಚಿದ್ದರು.ಈ ಪ್ರಕರಣದ ಸಮಗ್ರ ತನಿಖೆಯ ನಂತರ ಈಗ ಈ ಪ್ರಕರಣಗಳು ನ್ಯಾಯಾಲಯದ ಮೆಟ್ಟಲು ಏರಿವೆ.
ಈ ನಕಲಿ ವೈಧ್ಯರ ಮೇಲಿನ ಅಪಾದನೆ ಸಾಭೀತಾದರೆ, ಎರಡು ವರ್ಷ ಕಾರಾಗೃಹ ಶಿಕ್ಷೆ ಮತ್ತು ಇಪ್ಪತ್ತು ಸಾವಿರಕ್ಕಿಂತ ಹೆಚ್ಚು ಮೊತ್ತದ ದಂಡ ಪಾವತಿಸಬೇಕಾಗುತ್ತದೆ.
ಈ ಮಾಹಿತಿಯನ್ನು ನ್ಯಾಯವಾದಿ ಮತ್ತು ಸುವರ್ಣ ಕರ್ನಾಟಕ ಔಷಧ ವ್ಯಾಪಾರಿಗಳ ಸಂಘದ ಉಪಾಧ್ಯಕ್ಷ ಹಾಗೂ ಕಾನೂನು ಘಟಕದ ರಾಜ್ಯ ಅಧ್ಯಕ್ಷ ಅಶೋಕಸ್ವಾಮಿ ಹೇರೂರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.